ಅಬ್ಬಾ ಭಾರತೀಯ ಚಿತ್ರರಂಗದಲ್ಲಿ ತಯಾರಾಗ್ತಿದೆ ಬರೊಬ್ಬರಿ 700 ಕೋಟಿ ಬಜೆಟ್ ಚಿತ್ರ

ದಕ್ಷಿಣ ಭಾರತದ ಸುಪ್ರಸಿದ್ದ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಡ್ರೀಮ್ ಪ್ರಾಜೆಕ್ಟ್ ಅನ್ನ ಬಾಲಿವುಡ್ ನ ಖ್ಯಾತ ನಿರ್ಮಾಪಕರೊಬ್ಬರು ಮಾಡಲು ಹೊರಟಿದ್ದಾರೆ. ಆದರೆ ಈ ಸಿನಿಮಾಗೆ ರಾಜಮೌಳಿ ನಿರ್ದೇಶಕರು ಅಂತ ಹೇಳಿಲ್ಲ. ಹೌದು ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ನಟ ಕಮ್ ನಿರ್ದೇಶಕ ಅಮೀರ್ ಖಾನ್ ಮತ್ತು ರಾಜಮೌಳಿ ಅವರಿಗೆ ಯಾರೇ ಸಹ ನಿಮ್ಮ ಡ್ರೀಮ್ ಪ್ರಾಜೆಕ್ಟ್ ಯಾವ್ದು ಅಂದ್ರೆ ಸಾಕು ಇಬ್ಬರು ಕೂಡ ರಾಮಾಯಣ ಅಂತೇಳ್ತಾರೆ. ಇವರಿಬ್ಬರು ಹೇಳ್ತಾನೇ ಇದ್ದಾರೆ ಹೊರತು ಅದನ್ನ ಕಾರ್ಯರೂಪಕ್ಕೆ ಮಾತ್ರ ಜಾರಿಗೆ ತಂದಿಲ್ಲ. ಆದ್ರೆ ಇವರಿಬ್ಬರನ್ನ ಸೈಡ್ ಹೊಡೆದು ಇದೀಗ ರಾಮಾಯಾಣವನ್ನ ಸಿನಿಮಾ ಮಾಡುವುದಕ್ಕೆ ರೆಡಿ ಆಗಿಯೇ ಬಿಟ್ಟಿದ್ದಾರೆ ಬಾಲಿವುಡ್ ನಿರ್ಮಾಪಕ ಫಿರೋಜ್ ನಾಡಿಯಾಡ್ವಾಲಾ. ಇದುವರೆಗೆ ಕಾಮಿಡಿ ಮತ್ತು ವಿಭಿನ್ನ ಬಗೆಯ ಸಿನಿಮಾಗಳನ್ನ ನಿರ್ಮಾಣ ಮಾಡಿರೋ ಫಿರೋಜ್ ಅವರು ಇದೀಗ ಬಾಲಿವುಡ್ ನಲ್ಲಿ ಹೊಸದೊಂದು ಸಂಚಲನ ಸೃಷ್ಟಿ ಮಾಡಲು ಹೊರಟಿದ್ದಾರೆ.

ರಾಮಾಯಣವನ್ನ ಸಿನಿಮಾ ಮಾಡುವುದಕ್ಕಾಗಿ ಈಗಾಗಲೇ ಕಳೆದ ನಾಲ್ಕೈದು ವರ್ಷಗಳಿಂದ ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರಂತೆ. ನಿರ್ಮಾಪಕ ಫಿರೋಜ್ ಅವರ ಪ್ರಕಾರ ಈ ರಾಮಾಯಣ ದೃಶ್ಯ ಕಾವ್ಯ ಸಿನಿಮಾ ನಿರ್ಮಾಣ ಮಾಡಲು ಸರಿ ಸುಮಾರು ಬರೋಬ್ಬರಿ ಏಳು ನೂರು ಕೋಟಿ ರುಪಾಯಿ ಬಜೆಟ್ ನಿಯೋಜನೆ ಮಾಡಿಕೊಳ್ಳಲಾಗಿದೆಯಂತೆ. ತಾರಾಗಣದಲ್ಲಿ ಅಕ್ಷಯ್ ಕುಮಾರ್, ಅಜಯ್ ದೇವಗನ್, ರಣ್ವೀರ್ ಸಿಂಗ್, ಅನಿಲ್ ಕಪೂರ್ ಅಂತಹ ಬಾಲಿವುಡ್ ಸೂಪರ್ ಸ್ಟಾರ್ ಗಳ ಜೊತೆಗೆ ಸೌತ್ ಸ್ಟಾರ್ ಗಳನ್ನ ಕೂಡ ಆಯ್ಕೆ ಮಾಡುವ ಪ್ಲಾನ್ ಮಾಡಿದ್ದಾರಂತೆ. ಈ ರಾಮಾಯಣ ಸಿನಿಮಾದ ಸ್ಪೆಷಲ್ ಏನಪ್ಪಾ ಅಂದರೆ ಈ ಮಹಾ ದೃಶ್ಯ ಕಾವ್ಯವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ 5ಡಿಯಲ್ಲಿ ತಯಾರು ಮಾಡುವ ಆಲೋಚನೆಯಲ್ಲಿದೆಯಂತೆ.

ವಿಎಫ್ಎಕ್ಸ್, ಬಿಜಿಎಮ್ ಮ್ಯೂಸಿಕ್ ಕೆಲಸಗಳನ್ನ ಅಮೆರಿಕಾದ ಲಾಸ್ ಎಂಜಲೀಸ್ ನಲ್ಲಿ ಮಾಡೋದಕ್ಕಂತ ನಿರ್ಮಾಪಕರು ಯೋಜನೆ ಹಾಕಿದ್ದಾರಂತೆ. ಒಟ್ಟಾರೆಯಾಗಿ ಮಹಾಭಾರತವನ್ನ ಸಿನಿಮಾ ಮಾಡುವುದಾಗಿ ರಾಜಮೌಳಿ, ಅಮೀರ್ ಖಾನ್ ಸೇರಿದಂತೆ ಒಂದಷ್ಟು ಸ್ಟಾರ್ಸ್ ಗಳ ಕನಸನ್ನ ನಿರ್ಮಾಪಕ ಫಿರೋಜ್ ಅವರು ಸದ್ದಿಲ್ಲದೇ ಮಾಡುತ್ತಿದ್ದಾರಂತೆ. ಆದ್ರೇ ಮಹಾಭಾರತವನ್ನ ಕೇವಲ ಮೂರು ಗಂಟೆಯಲ್ಲಿ ತೋರಿಸಲು ಅಸಾಧ್ಯವಾದ ಮಾತು. ಹೀಗಿರುವಾಗ ನಿರ್ಮಾಪಕ ಫಿರೋಜ್ ಅವರು ಈ ಮಹಾಭಾರತ ಸಿನಿಮಾವನ್ನ ಎಷ್ಟು ಭಾಗಗಳಾಗಿ ತಯಾರು ಮಾಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಚಿತ್ರತಂಡದ ಮೂಲಗಳ ಪ್ರಕಾರ ಈ ಮಹಾಭಾರತ ಸಿನಿಮಾ ಭಾರತೀಯ ಎಲ್ಲಾ ಭಾಷೆಗಳಲ್ಲಿಯೂ ಕೂಡ ಬರಲಿದೆಯಂತೆ. ಎಲ್ಲವೂ ಅಂದುಕೊಂಡಂತೆ ಯೋಜನೆಗಳ ಪ್ರಕಾರ ನಡೆದರೆ ಈ ಮಹಾಭಾರತ ದೃಶ್ಯ ಕಾವ್ಯವನ್ನು ಸಿನಿಪ್ರಿಯರು 2025ರ ಹೊತ್ತಿಗೆ ಕಣ್ತುಂಬಿಕೊಳ್ಳಬಹುದು ಎಂದು ಹೇಳಲಾಗಿದೆ.