ಆರ್ಯನ್ ಖಾನ್ ಬಂಧನ, ಹೊಸ ಅನುಮಾನ ಹೊರಹಾಕಿದ ನಟಿ ರಮ್ಯಾ

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂಬ ಆರೋಪದಡಿ ಎನ್ ಸಿ ಬಿ ಬಂಧಿಸಿದ್ದಾರೆ.ಸದ್ಯದ ಮಟ್ಟಿಗೆ ಇದು ದೇಶಾದ್ಯಂತ ಭಾರಿ ಸುದ್ದಿಯಲ್ಲಿದೆ.ಐಷಾರಾಮಿ ಜೀ ನ ಶೈಲಿಯಲ್ಲಿ ಬದುಕುತ್ತಿರುವ ಈ ಸ್ಟಾರ್ ಮಕ್ಕಳು ಅನೇಕ ನೈಟ್ ಪಾರ್ಟಿಗಳಲ್ಲಿ ಭಾಗವಹಿಸಿರುತ್ತಾರೆ. ತಮ್ಮ ಸಿನಿಮಾ ಮತ್ತು ಇತರೆ ಒತ್ತಡದ ಕೆಲಸಗಳ ನಡುವೆ ತಮ್ಮ ಮಕ್ಕಳ ಬಗ್ಗೆ ಗಮನವಹಿಸದ ಅನೇಕ ಸ್ಟಾರ್ ಗಳಂತೆಯೇ ಇದೀಗ ಬಾಲಿವುಡ್ ಬಾದ್ ಶಾ ಖ್ಯಾತಿಯ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕೂಡ ದಾರಿ ತಪ್ಪಿದರ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿದೆ.ಸದ್ಯಕ್ಕೆ ಡ್ರಗ್ ಸೇವನೆ ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನ ಬಂಧಿಸಿಲಾಗಿದೆ.ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧಗಳು ಕೂಡ ವ್ಯಕ್ತವಾಗುತ್ತಿದೆ. ಇತ್ತ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಆರ್ಯನ್ ಬಂಧನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ನಟಿ ರಮ್ಯಾ ಸಿನಿಮಾ ಮತ್ತು ರಾಜಕೀಯದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು ಕೂಡ ಸಮಾಜದಲ್ಲಿ ಅಗುತ್ತಿರುವ ಪ್ರಚಲಿತ ಘಟನೆಗಳ ಬಗ್ಗೆ ಆಗಾಗ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ವ್ಯಕ್ತಪಡಿಸುತ್ತಾ ಇರುತ್ತಾರೆ.ಅದರಂತೆ ಇದೀಗ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಸೇವನೆ ಮಾಡಿದ್ದಾನೆ ಎಂದು ಎನ್ ಸಿ ಬಿ ಅರೆಸ್ಟ್ ಮಾಡಿದ್ದಾರೆ. ಈ ಬಗ್ಗೆ ನಟಿ ರಮ್ಯಾ ಆರ್ಯನ್ ಖಾನ್ ಡ್ರಗ್ ಸೇವನೆ ಮಾಡಿರುವ ಬಗ್ಗೆ ಸೂಕ್ತವಾದ ದಾಖಲೆಗಳಿಲ್ಲ. ಆದರೂ ಕೂಡ ವಿಚಾರಣೆ ನಡೆಸದೆ ಏಕಾಏಕಿ ಆರ್ಯನ್ ಖಾನ್ ಅವರನ್ನ ಅರೆಸ್ಟ್ ಮಾಡಿದ್ದಾರೆ.ಆದರೆ ಬಿಜೆಪಿ ಸಚಿವರ ಮಗ ನಾಲ್ಕು ಜನ ಅಮಾಯಕ ರೈತರ ಮೇಲೆ ಜೀಪ್ ಹತ್ತಿಸಿ ಅವರ ಪ್ರಾಣವನ್ನು ತೆಗೆದಿದ್ದಾನೆ.ಅವನನ್ನು ಇದುವರೆಗೆ ಪೊಲೀಸರು ಬಂಧಿಸಿಲ್ಲ. ಆ ಮೃತ ರೈತರ ಕುಟುಂಬವನ್ನ ಭೇಟಿ ಮಾಡಿ ಸಾಂತ್ವಾನ ಹೇಳಲು ಹೋದ ಪ್ರಿಯಾಂಕಾ ಗಾಂಧಿ ಅವರನ್ನ ಬಂಧಿಸಿದ್ದಾರೆ.ಇದು ಅಧಿಕಾರದಲ್ಲಿರುವವರ ದರ್ಪ ಮತ್ತು ವಿಲಕ್ಷಣ ನಡವಳಿಕೆ.

ಡ್ರ’ಗ್ಸ್ ಪಾರ್ಟಿ ಆಯೋಜಕರು ಸಿಕ್ಕಿಲ್ಲ ಎಂದು ಡ್ರಗ್ಸ್ ಸೇವಿಸುವವರನ್ನ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಹೇಳುವ ಎನ್ ಸಿ ಬಿ ಆರ್ಯನ್ ಖಾನ್ ಬಳಿ ಡ್ರಗ್ಸ್ ಇತ್ತ ಅಥವಾ ಡ್ರಗ್ಸ್ ಸೇವಿಸಿದ್ದಾರ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ.ಕೋರ್ಟ್ ನಲ್ಲಿ ವಾಟ್ಸಪ್ ಸಂದೇಶಗಳು ಸಾಕ್ಷಿಯಾಗುವುದಿಲ್ಲ. ಆರ್ಯನ್ ಖಾನ್ ಹೇಳಿಕೆಗಳನ್ನ ಸಾರ್ವಜನಿಕವಾಗಿ ತಿಳಿಸಲು ಸಾದ್ಯವಿಲ್ಲ ಎಂದು ಹೇಳುವ ಎನ್ ಸಿ ಬಿ ವಿಚಾರಣೆ ಸಂಧರ್ಭದಲ್ಲಿ ದೀಪಿಕಾ ಪಡುಕೋಣೆ ಅತ್ತರು,ಆರ್ಯನ್ ಖಾನ್ ಅತ್ತರು ಎಂಬೆಲ್ಲಾ ಗಾಸಿಪ್ ಹೊರ ಬರವು ಇವರಿಗೆ ಇಷ್ಟವಾಗುತ್ತದೆ.ಎಲ್ಲದಕ್ಕಿಂತ ಹೆಚ್ಚಾಗಿ ಆರ್ಯನ್ ಖಾನ್ ವಶಕ್ಕೆ ಪಡೆದವ ಎಸ್ ಸಿ ಬಿ ಅಧಿಕಾರಿಯೇ ಅಲ್ಲ‌.ಅವನೊಬ್ಬ ಕೌಲಾಲಂಪುರದ ಖಾಸಗಿ ಪತ್ತೆದಾರ ಎಂದು ಆತನ ಸೋಶಿಯಲ್ ಮೀಡಿಯಾ ಖಾತೆಗಳು ಹೇಳುತ್ತವೆ ಎಂದು ಆತನ ಒಂದಷ್ಟು ಪೋಟೋಗಳನ್ನು ತಮ್ಮ ಇನ್ಸ್ಟಾದಲ್ಲಿ ಹಾಕಿ ನಟಿ ರಮ್ಯಾ ಪ್ರಶ್ನೆ ಮಾಡಿದ್ದಾರೆ.

Leave a Reply

%d bloggers like this: