ಆರು ವರ್ಷಗಳ ನಂತರ ಬೇರೆಯಾಗುತ್ತಿದ್ದಾರೆ ಬಾಲಿವುಡ್ ಖ್ಯಾತ ನಟ ನಟಿ

ಬಾಲಿವುಡ್ ಕ್ಯೂಟ್ ಜೋಡಿಸಿ ಎನಿಸಿಕೊಳ್ಳುತ್ತಿದ್ದ ನಟ ಟೈಗರ್ ಶ್ರಾಫ್ ಅಂಡ್ ನಟಿ ದಿಶಾ ಪಠಾನಿ ನಡುವೆ ಮನಸ್ತಾಪ ಆಗಿ ಬ್ರೇಕಪ್ ಮಾಡ್ಕೊಂಡಿದ್ದಾರೆ ಅನ್ನೋ ಒಂದು ಸುದ್ದಿ ಇದೀಗ ಬಿಟೌನ್ ಗಲ್ಲಿ ಗಲ್ಲಿಗಳಲ್ಲಿ ಭಾರಿ ವೈರಲ್ ಆಗಿದೆ. ಹಾಗಿದ್ರೇ ಈ ಬ್ರೇಕಪ್ ಸುದ್ದಿ ನಿಜಕ್ಕೂ ಕೂಡ ಸತ್ಯನಾ. ಈ ಬಗ್ಗೆ ಟೈಗರ್ ಶ್ರಾಫ್ ಅವರ ತಂದೆ ನಟ ಜಾಕಿ ಶ್ರಾಫ್ ಏನೆಂದು ತಿಳಿಸಿದ್ದಾರೆ ಅನ್ನೋದನ್ನ ತಿಳಿಯುವುದಾದರೆ. ಮೊದಲಿಗೆ ಬಾಲಿವುಡ್ ಯಂಗ್ ಅಂಡ್ ಎನರ್ಜಿಟಿಕ್ ಸ್ಟಾರ್ ನಟ ಟೈಗರ್ ಶ್ರಾಫ್ ತನ್ನ ಶ್ರಮ ಮತ್ತು ಪ್ರತಿಭೆಯ ಮೂಲಕ ಬೆಳೆದು ಇಂದು ಬಾಲಿವುಡ್ ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ತಮ್ಮ ತಂದೆ ಜಾಕಿ ಶ್ರಾಫ್ ಒಬ್ಬ ಸ್ಟಾರ್ ನಟನಾಗಿ ಮಿಂಚಿದ್ದರು ಕೂಡ ತನಗೆ ಅವರ ಛಾಯೆಯಲ್ಲಿ ಇರಬಾರದು ಎಂದು ತನ್ನ ಮಸ್ತ್ ಫೈಟ್ ಡ್ಯಾನ್ಸ್, ನಟನೆಯ ಮೂಲಕ ಬಾಲಿವುಡ್ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇಂದು ಬಾಲಿವುಡ್ ಬೇಡಿಕೆಯ ನಟರಲ್ಲಿ ಟೈಗರ್ ಶ್ರಾಫ್ ಕೂಡ ಒಬ್ಬರಾಗಿದ್ದಾರೆ.

ಹೀಗೆ ಟೈಗರ್ ಶ್ರಾಫ್ ಸ್ವತಂತ್ರವಾಗಿ ಬೆಳೆದು ತನ್ನ ತಂದೆ ತಾಯಿಗಳ ದೂರ ಬಂದು ತಮ್ಮದೇಯಾದ ಪ್ರತ್ಯೇಕ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಯಾವಾಗ ನಟ ಟೈಗರ್ ಶ್ರಾಫ್ ಅವರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೋ ಅಂದಿನಿಂದ ನಟಿ ದಿಶಾ ಪಠಾನಿ ಕೂಡ ಅವರೊಟ್ಟಿಗೇನೇ ಜೊತೆಗಿದ್ದಾರೆ. ಇಬ್ಬರು ಕೂಡ ಮದುವೆ ಆಗುತ್ತಾರೆ ಅಂತಾನೇ ಬಾಲಿವುಡ್ ಅಂದುಕೊಂಡಿತ್ತು. ಅದರಂತೆ ದಿಶಾ ಕೂಡ ಟೈಗರ್ ಶ್ರಾಫ್ ಅವರೊಟ್ಟಿಗೆ ಇಷ್ಟು ವರ್ಷಗಳ ಜೊತೆಗಿದ್ದರು. ಆದರೆ ಇದೀಗ ದಿಶಾ ಪಠಾನಿ ಮತ್ತು ಟೈಗರ್ ಶ್ರಾಫ್ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಬ್ರೇಕಪ್ ಆಗಿದೆ ಅನ್ನೋ ಸುದ್ದಿ ಹೊರ ಬಿದ್ದಿದೆ. ಈ ಬ್ರೇಕಪ್ ಗೆ ಏನು ಕಾರಣ ಅನ್ನೋದು ಅವರ ಆಪ್ತವಲಯದಿಂದ ಕೇಳಿ ಬರುತ್ತಿರುವುದು ಏನಪ್ಪಾ ಅಂದರೆ ದಿಶಾ ಪಠಾನಿ ತನ್ನನ್ನು ಮದುವೆ ಆಗು ಎಂದು ಟೈಗರ್ ಶ್ರಾಫ್ ಯಾವುದೇ ರೀತಿ ಪ್ರತಿಕ್ರಿಯೆ ನೀಡದೆ, ಸದ್ಯಕ್ಕೆ ಮದುವೆ ಬೇಡ ಅಂತ ಹೇಳಿದ್ದಾರಂತೆ.

ಎರಡೆರಡು ಬಾರಿ ದಿಶಾ ಪಠಾನಿ ತನ್ನ ಕುಟುಂಬ ಮತ್ತು ವೈಯಕ್ತಿಕ ಕಾರಣಗಳಿಂದ ತನ್ನನ್ನ ಮದುವೆಯಾಗು ಎಂದು ಕೇಳಿದರು ಸಹ ಟೈಗರ್ ಶ್ರಾಫ್ ತಲೆ ಕೆಡಿಸಿಕೊಳ್ಳದ ಕಾರಣ ದಿಶಾ ಟೈಗರ್ ಶ್ರಾಫ್ ಜೊತೆಗಿನ ಸಂಬಂಧಕ್ಕೆ ಬ್ರೇಕ್ ಹಾಕಿದ್ದಾರೆ ಅನ್ನೋ ಮಾಹಿತಿ ಕೇಳಿ ಬರುತ್ತಿದೆ. ಆದರೆ ಟೈಗರ್ ಶ್ರಾಫ್ ತಂದೆ ಜಾಕಿ ಶ್ರಾಫ್ ಕೆಲವು ಸಂದರ್ಶನಗಳ ಸಮಯದಲ್ಲಿ ಟೈಗರ್ ಶ್ರಾಫ್ ಈಗಲೇ ಮದುವೆ ಆಗುವ ಆಲೋಚನೆ ಮಾಡಿಲ್ಲ. ಅವನು ಸದ್ಯಕ್ಕೆ ತನ್ನ ಕೆಲಸದೊಟ್ಟಿಗೆ ಮದುವೆ ಆಗಿ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾನೆ. ದಿಶಾ ಮತ್ತು ಟೈಗರ್ ಶ್ರಾಫ್ ಇಬ್ಬರು ಚೆನ್ನಾಗಿ ಪರಸ್ಪರ ಅರ್ಥ ಮಾಡಿಕೊಂಡಿದ್ದಾರೆ. ಭವಿಷ್ಯದಲ್ಲಿ ಅವರಿಬ್ಬರು ಸಂಗಾತಿಗಳಾಗಬಹುದು ಅಥವಾ ಉತ್ತಮ ಸ್ನೇಹಿತರಾಗಿ ಉಳಿಯಬಹುದು. ಆದರೆ ದಿಶಾ ಒಬ್ಬಳು ಶಿಸ್ತಿನ ಕುಟುಂಬದಿಂದ ಬಂದಿರುವ ಹೆಣ್ಣು ಮಗಳು. ಹಾಗಾಗಿ ದಿಶಾ ಟೈಗರ್ ಶ್ರಾಫ್ ಜೊತೆ ಈಗ ಮುನಿಸು ಮನಸ್ತಾಪ ಇದ್ದರು ಮುಂದೆ ಅವಳು ಅವನೊಟ್ಟಿಗೆ ಜೊತೆಯಾಗುತ್ತಾಳೆ ಅನ್ನೋ ಭರವಸೆ ನನ್ನದು ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ ನಟ ಟೈಗರ್ ಶ್ರಾಫ್ ಮತ್ತು ದಿಶಾ ಪಠಾನಿ ಅವರು ಮತ್ತೆ ಒಂದಾಗಬೇಕು ಅನ್ನೋದು ಅವರ ಅಭಿಮಾನಿಗಳ ಒತ್ತಾಸೆಯಾಗಿದೆ.