ಆಂಜನೇಯ ಸ್ವಾಮಿ ಪಾತಾಳ ಪ್ರವೇಶ ಮಾಡಿದ ಸ್ಥಳ! ಈ ಪವಿತ್ರ ಸ್ಥಳ ಇರೋದಾದ್ರೂ ಎಲ್ಲಿ ಗೊತ್ತಾ

ನಮ್ಮ ಭಾರತೀಯ ಪರಂಪರೆಯಲ್ಲಿ ಅನೇಕ ರೋಚಕ ವಿಚಾರಗಳಿವೆ.ಅವುಗಳು ಇಂದಿನ ಆಧುನಿಕ ಯುವ ಪೀಳಿಗೆಗೆ ಎಷ್ಟರ ಮಟ್ಟಿಗೆ ತಲುಪುತ್ತಿದ್ದೆಯೋ ಇಲ್ಲವೋ ಗೊತ್ತಿಲ್ಲ.ಮಕ್ಕಳು,ಯುವಕರು ರಾಮಾಯಾಣ ಮಹಾಭಾರತವನ್ನು ಓದುವುದಿರಲಿ ಅದರ ಬಗ್ಗೆ ಕೇಳಿಯೂ ಕೂಡ ಇರುವುದಿಲ್ಲ.ಇದಕ್ಕೆ ಪ್ರಮುಖ ಕಾರಣ ಅಂದರೆ ಆಧುನಿಕ ತಂತ್ರಜ್ಞಾನ. ಇಂದು ಎಲ್ಲರ ಕೈಯಲ್ಲಿಯೂ ಮೊಬೈಲ್.ಜೀವನದ ಅವಿಭಾಜ್ಯ ಅಂಗವಾಗಿರುವ ಮೊಬೈಲ್ ಗಳು ಮನುಷ್ಯನಿಗೆ ತಮ್ಮ ಹಿನ್ನೆಲೆ,ಪರಂಪರೆಯ ಬಗ್ಗೆ ತಿಳಿಯದಷ್ಟು ಮನುಷ್ಯರನ್ನು ಆಪೋಷಣಕ್ಕೆ ತೆಗೆದುಕೊಂಡಿವೆ. ಈ ರಾಮಾಯಣದಲ್ಲಿ ಬರುವಂತಹ ಹುನುಮಂತ ಯಾರಿಗೆ ತಾನೇ ಗೊತ್ತಿಲ್ಲ‌.ಅವನ ಶಕ್ತಿ ಸಾಮರ್ಥ್ಯದ ಬಗ್ಗೆ ಪರ್ವತವನ್ನೆ ತನ್ನ ಅಂಗೈಯಲ್ಲಿ ಎತ್ತಿಡಿದ ಸಂಗತಿಗಳನ್ನ ಕೇಳಿಯೇ ಇರುತ್ತಾರೆ.ಇಂತಹ ಸಾಹಸವಂತ, ರಾಮನ ಭಂಟ ಹನುಮಂತನ ವಿಶೇಷ ಕ್ಷೇತ್ರದ ಮಹಿಮೆಯ ಹಿಂದೆ ಒಂದು ರೋಚಕವಾದ ಕಥೆ ಇದೆ. ಹನುಮಂತನು ಪಾತಾಳಕ್ಕೆ ಯಾಕೆ ಹೋದನು ಎನ್ನುವುದಕ್ಕೆ ಈ ಸ್ಥಳ ಸಾಕ್ಷಿಯಾಗಿದೆ.

ಪ್ರಭು ಶ್ರೀರಾಮ ಚಂದ್ರ ಹಾಗು ದಶ ಕಂಠ ರಾವಣನ ನಡುವೆ ಸತತವಾಗಿ ಘನ ಘೋರವಾದ ಯುದ್ಧ ನಡೆಯುತ್ತಿತ್ತು. ಸಾಮಾನ್ಯ ಮನುಷ್ಯನಿಂದ ನನಗೆ ಸೋಲಾಗಬಾರದೆಂದು, ರಾವಣ ಪಾತಾಳ ಲೋಕದ ರಾಜನಾದ ಮಹಿರಾವಣನ ಹತ್ತಿರ ಸಹಾಯ ಹಸ್ತ ಚಾಚುತ್ತಾನೆ. ಪಾತಾಳ ರಾಜನ ಮೂಲಕ ರಾಮ ಹಾಗೂ ಲಕ್ಷ್ಮಣರಿಗೆ ಆಪತ್ತು ಬರುವ ವಿಷಯವವು ಹನುಮಂತಿನಿಗೆ ತಿಳಿಯುತ್ತದೆ.ಆದ್ದರಿಂದ, ರಾಮ-ಲಕ್ಷ್ಮಣರನ್ನ ರಕ್ಷಿಸಲು ಹನುಮಂತನು ತನ್ನ ಬಾಲದ ಮೂಲಕ ಬೃಹದಾಕಾರದ ಕೋಟೆಯನ್ನು ನಿರ್ಮಿಸುತ್ತಾನೆ. ಮಹಿರಾವಣ ಮಾಯಾ ಶಕ್ತಿಯಲ್ಲಿ ಪ್ರಾವೀಣ್ಯತೆ ಹೊಂದಿದ್ದನು. ಹೀಗಾಗಿ ರಾವಣನ ಸಹೋದರನಾದ ವಿಭೀಷಣ ವೇಷ ಧರಿಸಿ, ಶ್ರೀ ರಾಮನ ದರ್ಶನ ಪಡೆಯಬೇಕೆನ್ನುವ ಕುತಂದ್ರದಿಂದ ಕೋಟೆಯ ಒಳಗೆ ನುಗ್ಗುತ್ತಾನೆ. ಕೋಟೆಯ ಒಳಗೆ ನುಗ್ಗಿದ್ದೇ ತಡ, ಮಹಿರಾವಣ ಸಹೋದರ ರಾಮ-ಲಕ್ಶ್ಮಣರನ್ನ ಅಪಹರಿಸಿ ಪಾತಾಳ ಲೋಕಕ್ಕೆ ಕರೆದುಕೊಂಡು ಪರಾರಿಯಾಗುತ್ತಾನೆ.

ಈ ವಿಷಯವು ಹನುಮಂತನ ಗಮನಕ್ಕೆ ಬರುತ್ತದೆ. ಆಂಜನೇಯ ನೇರವಾಗಿ ಪಾತಾಳ ಲೋಕಕ್ಕೆ ಹಾರಿ ಬಿಡುತ್ತಾನೆ. ಪಾತಾಳಕ್ಕೆ ಹಾರುವ ಸಂದರ್ಭದಲ್ಲಿ ವಾಯು ಪುತ್ರನ ತಲೆ ಕೆಳಗಾಗಿತ್ತು. ಆದ್ದರಿಂದ ಇಲ್ಲಿ ಶ್ರೀ ಮಾರುತಿಯ ವಿಗ್ರಹ ವಿರುದ್ಧ ದಿಕ್ಕಿನಲ್ಲಿ ನೆಲೆಗೊಂಡಿದೆ.ಆಂಜನೇಯ ಕಿಷ್ಕಿಂದೆಯಲ್ಲಿ ಬಿಡಾರ ಹೂಡಿರುತ್ತಾನೆ. ಸೀತೆಯ ಹೂಡಿಕೊಂಡು ಪರಮಪುರುಷ ಶ್ರೀ ರಾಮ ಬಂದಾಗ, ರಾಮ ಹಾಗೂ ಅಂಜನಿಪುತ್ರನ ಭೇಟಿಯಾಗುತ್ತದೆ. ಹೀಗಾಗಿ ಇಲ್ಲಿ ನೀವು ಬಲವಂತನಾದ ಹನುಮಂತನ ಮಾನಸೋಧ್ಯಾನ ನೋಡಬಹುದಾಗಿದೆ. ಇದು ಸಹ ಏಕಶಿಲೆಯಿಂದ ಕೆತ್ತಲಾಗಿದೆ. ಇಲ್ಲಿ ಹನುಮಂತನ ಪರಿಪೂರ್ಣವಾದ ಚರಿತ್ರೆಯನ್ನು ಶಿಲ್ಪಿ ಮೂಲಕ ವರ್ಣಿಸಿರುವುದು ವಿಶೇಷವಾಗಿದೆ.

Leave a Reply

%d bloggers like this: