ಆಮ್ ಆದ್ಮಿ ಪಾರ್ಟಿ ಸೇರಿದ ಕನ್ನಡದ ಯುವ ನಟಿ

ಇತ್ತೀಚಿಗೆ ರಾಜ್ಯದಲ್ಲಿ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ಕಾರ್ಯ ಚಟುವಟಿಕೆಗಳು ಪ್ರವರ್ಧಮಾನಕ್ಕೆ ಬರುತ್ತಿವೆ. ಬೆಂಗಳೂರು ನಗರ ಕಮೀಶನರ್ ಆಗಿ ಸೇವೆ ಸಲ್ಲಿಸಿದ್ದ ಭಾಸ್ಕರ್ ರಾವ್ ಅವರು ಆಮ್ ಆದ್ಮಿ ಪಕ್ಷ ಸೇರ್ಪಡೆ ಆದಾಗಿನಿಂದ ಎಎಪಿ ಪಕ್ಷದ ಒಂದಷ್ಟು ಪ್ರಚಾರ ಜೋರಾಗಿದೆ. ಆಮ್ ಆದ್ಮಿ ಪಕ್ಷದ ಚಿತ್ರರಂಗದ ಒಂದಷ್ಟು ಮಂದಿ ಎಂಟ್ರಿ ಆಗ್ತಿದ್ದಾರೆ‌. ಒಂದಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಕನ್ನಡದ ಖ್ಯಾತ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಕೂಡ ಆಮ್ ಆದ್ಮಿ ಪಕ್ಷದ ಸಿದ್ದಾಂತ ಪ್ರಣಾಳಿಕೆಯನ್ನ ಒಪ್ಪಿ ಕೊಂಡು ಎಎಪಿ ಸೇರ್ಪಡೆಯಾಗಿದ್ದರು. ಅವರ ಬೆನ್ನಲ್ಲೇ ಮತ್ತೊಬ್ಬ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು ಸಹ ಎಎಪಿ ಸೇರಿದ್ದರು. ಇದೀಗ ಮತ್ತೊಬ್ಬ ಯುವ ನಟಿ ಕೂಡ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಹೌದು ಶರಣ್ ಮತ್ತು ಚಿಕ್ಕಣ್ಣ ಮುಖ್ಯ ಭೂಮಿಕೆಯ ಅಧ್ಯಕ್ಷ ಸಿನಿಮಾದಲ್ಲಿ ಚಿಕ್ಕಣ್ಣ ಅವರಿಗೆ ಜೋಡಿಯಾಗಿ ನಟಿಸಿದ್ದ ನಟಿ ಆರೋಹಿತ ಗೌಡ ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ.

ಎಎಪಿ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಅವರ ಸಮ್ಮುಖದಲ್ಲಿ ನಟಿ ಆರೋಹಿತ ಅವರು ಎಎಪಿ ಪಕ್ಷ ಸೇರಿ ರಾಜಕೀಯ ರಂಗಕ್ಕೆ ಪ್ರವೇಶ ಪಡೆದಿದ್ದಾರೆ. ರಂಗಭೂಮಿ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಬಂದು ಬೆಳ್ಳಿತೆರೆಯಲ್ಲಿ ಮಿಂಚಿ ಮಿನುಗಿರೋ ನಟಿ ಆರೋಹಿತ ಗೌಡ ಅವರು ಶಿವಣ್ಣ ಅವರ ಆಯುಷ್ಮಾನ್ ಭವ,.ಕೆ.ಎಂ. ಚೈತನ್ಯ ನಿರ್ದೇಶನದಲ್ಲಿ ಮೂಡಿಬಂದ ಚಿರಂಜೀವಿ ಸರ್ಜಾ ಅವರ ಆಟಗಾರ, ಅಧ್ಯಕ್ಷ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿ.ಕಾಂ. ಪದವಿಧರೆ ಆಗಿರೋ ಆರೋಹಿತ ಗೌಡ ಅವರು ನಟನೆ ಮಾತ್ರ ಅಲ್ಲದೆ ಒಬ್ಬ ಕರಾಟೆ ಪಟು ಕೂಡ ಹೌದು. ಈಗಾಗಲೇ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಆರೋಹಿತ ಗೌಡ ಅವರು ಕ್ರೀಡಾಪಟುವಾಗಿ ಸ್ಪರ್ಧಿಸಿ ಚಿನ್ನದ ಪದಕ ಪಡೆದಿದ್ದಾರೆ. ಇದೀಗ ಎಎಪಿ ಪಕ್ಷದ ಸೇರುವ ಮೂಲಕ ರಾಜಕೀಯ ಪ್ರವೇಶ ಪಡೆದು ರಾಜ್ಯ ಮತ್ತು ದೇಶದ ಜನರು ಬದಲಾವಣೆ ಬಯಸಿದ್ದಾರೆ. ಸ್ವಚ್ಚ ಮತ್ತು ಪ್ರಾಮಾಣಿಕ ರಾಜಕೀಯ ಗುಣಮಟ್ಟ ಆಡಳಿತ ಕೇಜ್ರಿವಾಲ್ ಅವರ ಎಎಪಿ ಪಕ್ಷದಿಂದ ಮಾತ್ರ ಸಾಧ್ಯ ಹಾಗಾಗಿ ನಾನು ಎಎಪಿ ಪಕ್ಷ ಸೇರಿದ್ದೇನೆ ಎಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.

Leave a Reply

%d bloggers like this: