8 ವರ್ಷದಿಂದ ಚಿತ್ರರಂಗದಿಂದ ದೂರ ಇದ್ದರೂ ಕಡಿಮೆ ಆಗಿಲ್ಲ ರಮ್ಯ ಅವರಿಗೆ ಬೇಡಿಕೆ, ಈಗಲೂ ಟಾಪ್ ನಟಿಯರ ಲಿಸ್ಟ್ ಅಲ್ಲಿ

ಒಂದು ಆಸಕ್ತಿಕರ ವಿಚಾರ ಇದೀಗ ಕನ್ನಡ ಸಿನಿ ಪ್ರೇಕ್ಷಕರನ್ನ ಭಾರಿ ಕುತೂಹಲ ಮೂಡಿಸಿದೆ. ಅದಕ್ಕೆ ಕಾರಣ ಒರಾಮ್ಯಾಕ್ಸ್ ಸಂಸ್ಥೆ ಮಾಡಿದ ಸಮೀಕ್ಷೆ. ಹೌದು ಓರಾಮ್ಯಾಕ್ಸ್ ಸಂಸ್ಥೆಯು ಇತ್ತೀಚೆಗೆ ಕನ್ನಡ ಚಿತ್ರರಂಗದ ಟಾಪ್ ಲಿಸ್ಟ್ ನಲ್ಲಿ ಯಾವ್ಯಾವ ನಟಿಯರು ಇದ್ದಾರೆ. ಯಾವ ನಟಿಯನ್ನ ಹೆಚ್ಚು ಜನರು ಇಷ್ಟ ಪಡುತ್ತಿದ್ದಾರೆ. ಜನರ ಮನದಲ್ಲಿ ಯಾವ ಸ್ಟಾರ್ ನಟಿ ಎಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದಿದ್ದಾರೆ ಅನ್ನೋದನ್ನ ಸಮೀಕ್ಷೆ ಮಾಡಿದ್ದಾರೆ. ಈ ಓರಾಮ್ಯಾಕ್ಸ್ ಸಮೀಕ್ಷೆಯಲ್ಲಿ ಕಂಡು ಬಂದ ವರದಿಯ ಪ್ರಕಾರ ಕನ್ನಡದಲ್ಲಿ ಟಾಪ್ ನಟಿಯರ ಪೈಕಿ ಐದನೇ ಸ್ದಾನದಲ್ಲಿ ಸ್ಯಾಂಡಲ್ ವುಡ್ ಮಿಲ್ಕ್ ಬ್ಯೂಟಿ ಅಂತಾನೇ ಕರೆಸಿಕೊಳ್ಳುವ ಆಶಿಕಾ ರಂಗನಾಥ್ ಅವರು ಇದ್ದಾರೆ.

ಕ್ರೇಜಿ಼ಬಾಯ್ ಎಂಬ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ನಟಿ ಆಶಿಕಾ ರಂಗನಾಥ್ ತನ್ನ ಸೌಂದರ್ಯ, ನಟನೆ, ಡ್ಯಾನ್ಸ್ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದು ಇಂದು ಅಪಾರ ಜನಪ್ರಿಯತೆ ಗಳಿಸಿ ಕನ್ನಡದ ಬೇಡಿಕೆಯ ನಟಿಯರ ಪೈಕಿ ಒಬ್ಬರಾಗಿದ್ದಾರೆ. ಇನ್ನು ಇವರು ಶರಣ್ ಜೊತೆ ಚುಟು ಚುಟು ಸಾಂಗ್ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದರು. ಇತ್ತೀಚೆಗೆ ಶರಣ್ ಅವರ ಜೊತೆನೇ ಅವತಾರ್ ಪುರುಷ ಚಿತ್ರದಲ್ಲಿ ನಟಿಸಿದ್ದರು. ಇನ್ನು ಓರಾಮ್ಯಾಕ್ಸ್ ಸಮೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಪಡೆದಿರುವುದು ಚಂದನವನದ ಮಿನುಗುವ ತಾರೆ ಸೌಂದರ್ಯದ ರಾಣಿ, ಪಡ್ಡೆ ಹುಡುಗರ ಪದ್ಮಾವತಿ ಅಂತಾನೇ ಕರೆಸಿಕೊಂಡು ಕನ್ನಡ ಸಿನಿಪ್ರಿಯರ ಹೃದಯ ಸಿಂಹಾಸನದಲ್ಲಿ ಸದಾ ರಾರಾಜಿಸುವ ಏಕೈಕ ನಟಿ ಅಂದರೆ ಅದು ರಮ್ಯಾ.

ನಟಿ ರಮ್ಯಾ ಅವರು ರಾಜಕೀಯ ರಂಗಕ್ಕೆ ಪ್ರವೇಶ ಪಡೆದ ನಂತರ ಸಿನಿಮಾರಂಗದಿಂದ ದೂರ ಉಳಿದರು. ಇವರು ನಟಿಸಿದ ಕೊನೆಯ ಸಿನಿಮಾ ಅಂದರೆ ದಿಗಂತ್ ಅವರ ನಟನೆಯ ನಾಗರಹಾವು ಚಿತ್ರ. ಈ ಚಿತ್ರದ ನಂತರ ರಮ್ಯಾ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಸಿನಿಮಾಗಳಿಂದ ಬರೋಬ್ಬರಿ ಎಂಟು ವರ್ಷಗಳ ಕಾಲ ಅಂತರ ಕಾಯ್ದುಕೊಂಡಿದ್ದರು ಕೂಡ ಕನ್ನಡ ಸಿನಿಪ್ರಿಯರು ಇಂದಿಗೂ ಕೂಡ ಅವರನ್ನೇ ಮೆಚ್ಚಿನ ನಟಿ ಅಭಿಮಾನದಿಂದ ಪ್ರೀತಿಸುತ್ತಾರೆ. ಮತ್ತೆ ಯಾವಾಗ ಬಣ್ಣ ಹಚ್ಚಲಿದ್ದಾರೆ ಎಂದು ರಮ್ಯಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಇತ್ತೀಚೆಗೆ ಕಳೆದೆರಡು ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ರಮ್ಯಾ ಓರಾ ಮ್ಯಾಕ್ಸ್ ಸಮೀಕ್ಷೆಯ ಟಾಪ್ ಫೈವ್ ನಟಿಯರ ಪೈಕಿ ನಾಲ್ಕನೇ ಸ್ದಾನವನ್ನ ಪಡೆದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.

ಇನ್ನು ಓರಾ ಮ್ಯಾಕ್ಸ್ ನಲ್ಲಿ ಟಾಪ್ ಫೈವ್ ನಟಿಯರ ಪೈಕಿ ನಾಲ್ಕನೇ ಸ್ಥಾನ ಪಡೆದಿರುವ ವಿಚಾರವನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಎಂದೆಂದಿಗೂ ನೀವೇ ನಮ್ಮ ನೆಚ್ಚಿನ ನಟಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಈ ಓರಾಮ್ಯಾಕ್ಸ್ ಸಮೀಕ್ಷೆಯಲ್ಲಿ ರಾಧಿಕಾ ಪಂಡಿತ್ ಅವರು ಮೂರನೇ ಸ್ಥಾನ ಪಡೆದಿದ್ದು, ಎರಡನೇ ಸ್ಥಾನದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಈ ಓರಾ ಮ್ಯಾಕ್ಸ್ ಸಂಸ್ಥೆಯ ಸಮೀಕ್ಷೆಯಲ್ಲಿ ಕನ್ನಡದ ಟಾಪ್ ಒನ್ ನಟಿಯ ಸ್ಥಾನದಲ್ಲಿ ನ್ಯಾಶನಲ್ ಕ್ರಶ್ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಇದ್ದಾರೆ.

Leave a Reply

%d bloggers like this: