777 ಚಾರ್ಲಿ ಸಿನಿಮಾದ ಯಶಸ್ಸಿನ ನಂತರ ಮತ್ತೊಂದು ಚಿತ್ರ ನಿರ್ಮಾಣ ಮಾಡಲು ಮುಂದಾದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಕನ್ನಡದಲ್ಲಿ ಬಹುಮುಖ ಪ್ರತಿಭೆಗಳ ಪೈಕಿ ರಕ್ಷಿತ್ ಶೆಟ್ಟಿ ಕೂಡ ಒಬ್ಬರು. ನಟನೆ, ನಿರ್ದೇಶನ ಜೊತೆಗೆ ಚಿತ್ರ ನಿರ್ಮಾಣದ ಜವಾಬ್ದಾರಿಯನ್ನ ಕೂಡ ಯಶಸ್ವಿಯಾಗಿ ನಿರ್ವಹಿಸಿಕೊಂಡು ಸಾಗುತ್ತಿರುವ ರಕ್ಷಿತ್ ಶೆಟ್ಟಿ ಅವರು ಕನ್ನಡದ ಬಹು ಬೇಡಿಕೆಯ ನಟ. ಕೇವಲ ನಟ ಮಾತ್ರ ಅಲ್ಲದೆ ಸೃಜನಾತ್ಮಕ ನಿರ್ದೇಶಕ ಕೂಡ ಹೌದು. ಸಿಂಪಲ್ಲಾಗ್ ಒಂದ್ ಸ್ಟೋರಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸನ್ಶೇನಲ್ ಕ್ರಿಯೇಟ್ ಮಾಡಿದರು ರಕ್ಷಿತ್ ಶೆಟ್ಟಿ. ತಮ್ಮ ಸಹಜ ನಟನೆಯ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದ ನಟ ರಕ್ಷಿತ್ ಶೆಟ್ಟಿ ತಾನು ನಿರ್ದೇಶನವನ್ನು ಕೂಡ ಮಾಡಬಲ್ಲೆ ಎಂಬುದನ್ನ ಉಳಿದವರು ಕಂಡಂತೆ ಎಂಬ ವಿಭಿನ್ನ ಬಗೆಯ ಚಿತ್ರ ನಿರ್ದೇಶನ ಮಾಡಿ ಕನ್ನಡ ಚಿತ್ರರಂಗದಲ್ಲಿ ಸಂಚಲನ ಉಂಟು ಮಾಡಿದರು. ಹೀಗೆ ನಟನೆ, ನಿರ್ದೇಶನ ಮತ್ತು ಚಿತ್ರ ನಿರ್ಮಾಣ ಮಾಡಿ ಚಂದನವನದ ಸಕಲಕಲಾವಲ್ಲಭ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ರಕ್ಷಿತ್ ಶೆಟ್ಟಿ ಅವರು ತಮ್ಮ ಪರಮ್ವಾ ಸ್ಟೂಡಿಯೋ ನಿರ್ಮಾಣ ಸಂಸ್ಥೆಯಡಿ 777 ಚಾರ್ಲಿ ಸಿನಿಮಾ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಲೂಟಿ ಮಾಡಿದ್ದಾರೆ.

ಅದರ ಜೊತೆಗೆ ತಮ್ಮ ಸೆವೆನ್ ಆಡ್ಸ್ ಟೀಮ್ ನಲ್ಲಿ ಇರುವ ಎಲ್ಲಾ ಬರಹಗಾರರಿಗೆ ಒಂದೊಂದು ಚಿತ್ರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ತಮ್ಮ ಸಂಸ್ಥೆಯಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಅವರನ್ನ ಬೆಳೆಸುತ್ತಿದ್ದಾರೆ. ಇತ್ತೀಚೆಗೆ ತಾನೇ ತಮ್ಮ ಟೀಮ್ ಸದಸ್ಯರಲ್ಲಿ ಒಬ್ಬರಾದ ಕಿರಣ್ ರಾಜ್ ಅವರಿಗೆ 777 ಚಾರ್ಲಿ ಗೆ ಬಂಡವಾಳ ಹೂಡಿ ತಾವೇ ನಟನೆಯನ್ನ ಕೂಡ ಮಾಡಿ ಗೆದ್ದರು. ಇದೀಗ ತಮ್ಮ ಪರಮ್ವಹ ಸ್ಟೂಡಿಯೋ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಮಿಥ್ಯ ಎಂಬ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಮಿಥ್ಯ ಚಿತ್ರವನ್ನು ಸುಮಂತ್ ಭಟ್ ನಿರ್ದೇಶನ ಮಾಡುತ್ತಿದ್ದಾರೆ. ಈ ಮಿಥ್ಯ ಸಿನಿಮಾದಲ್ಲಿ 11ವರ್ಷದ ಹುಡುಗನೊಬ್ಬ ತನ್ನ ತಂದೆ ತಾಯಿಯನ್ನ ಕಳೆದುಕೊಂಡ ನಂತರ ಹೊಸದೊಂದು ಪ್ರಪಂಚ ಕಂಡುಕೊಳ್ಳಲು ಹೊರಡುವಂತಹ ಕಥಾ ಹಂದರವನ್ನು ಹೊಂದಿದೆ. ಈ ಚಿತ್ರ ನಿರ್ದೇಶನ ಮಾಡುತ್ತಿರುವ ಸುಮಂತ್ ಭಟ್ ಅವರು ಈ ಹಿಂದೆ ಪರಮ್ವಹ ಸ್ಟೂಡಿಯೋ ನಿರ್ಮಾಣ ಸಂಸ್ಥೆಯಡಿಯಲ್ಲಿ ತಯಾರಾದ ಏಕಂ ಎಂಬ ಹೆಸರಿನ ವೆಬ್ ಸೀರೀಸ್ ಏಳು ಎಪಿಸೋಡ್ ಗಳ ಪೈಕಿ ನಾಲ್ಕು ಎಪಿಸೋಡ್ ಗಳನ್ನ ಬರೆದಿದ್ದರು.

ಇದೀಗ ಮಿಥ್ಯ ಎಂಬ ಚಿತ್ರ ನಿರ್ದೇಶನ ಮಾಡುವ ಮೂಲಕ ಚೊಚ್ಚಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ. ಇನ್ನು ಈ ಮಿಥ್ಯ ಸಿನಿಮಾದಲ್ಲಿ ಅನಾಥ ಹುಡುಗನ ಪಾತ್ರದಲ್ಲಿ ಬಾಲ ನಟ ಆತಿಶ್ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲ ನಟ ಆತಿಶ್ ಶೆಟ್ಟಿ ಈ ಹಿಂದೆ ರಿಷಭ್ ಶೆಟ್ಟಿ ಅವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ವಿಕ್ರಾಂತ್ ರೋಣ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಈ ಹೊಸ ಚಿತ್ರ ಕುರಿತು ನಟ ರಕ್ಷಿತ್ ಶೆಟ್ಟಿ ಅವರು ನಿಮ್ಮೊಳಗೆ ಭಾವನೆಗಳ ಅಲೆಗಳನ್ನ ಮೂಡಲು ಭರವಸೆ ನೀಡುತ್ತದೆ. ನಮ್ಮ ಜೊತೆಗೆ ಸದಾ ಹೀಗೆ ಇರಿ ಎಂದು ಬರೆದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಒಟ್ಟಾರೆಯಾಗಿ ರಕ್ಷಿತ್ ಶೆಟ್ಟ ಅವರು ಇದೀಗ ತಾವು ಬೆಳೆಯುವುದರ ಜೊತೆಗೆ ತನ್ನೊಂದಿಗೆ ತಮ್ಮ ಜೊತೆ ಇರುವವರನ್ನ ಕೂಡ ಕೈ ಹಿಡಿದು ಕರೆದುಕೊಂಡು ಹೋಗುತ್ತಿದ್ದಾರೆ. ಇವರ ನಡೆ ನಿಜಕ್ಕೂ ಕೂಡ ಮೆಚ್ಚುವಂತದ್ದು. ಇತ್ತ ರಕ್ಷಿತ್ ಶೆಟ್ಟಿ ಅವರು ಸಿನಿಮಾ ನಿರ್ಮಾಣದ ಜೊತೆಗೆ ಸಪ್ತ ಸಾಗರದಾಚೆ ಎಲ್ಲೋ ಎಂಬ ಚಿತ್ರದಲ್ಲಿ ನಟಿಸಿದ್ದು, ರಿಚರ್ಡ್ ಆಂಟೋನಿ ಚಿತ್ರ ನಿರ್ದೇಶನದ ಯೋಜನೆ ಕೂಡ ಮಾಡುತ್ತಿದ್ದಾರೆ.

Leave a Reply

%d bloggers like this: