70 ವರ್ಷಗಳಿಂದ ನೀರು ಊಟ ಇಲ್ಲದೇ ಬದುಕಿದ್ದ ವ್ಯಕ್ತಿಯನ್ನು ಕಂಡು ಬೆಚ್ಚಿಬಿದ್ದ ನಾಸಾ! ವೈದ್ಯಲೋಕಕ್ಕೆ ಸವಾಲೆಸೆದಿರುವ ಈ ಸನ್ಯಾಸಿ ನಿಜಕ್ಕೂ ಯಾರು ಗೊತ್ತಾ

ಮನುಷ್ಯನಿಗೆ ಮುಖ್ಯವಾಗಿ ಮೂಲಭೂತ ಅವಶ್ಯಕತೆಗಳಲ್ಲಿ ಬೇಕಾಗಿರುವುದು ಆಹಾರ, ವಸತಿ, ಬಟ್ಟೆ. ಒಂದು ವೇಳೆ ವಸತಿ, ಬಟ್ಟೆ ಇಲ್ಲದಿದ್ದರು ಕೂಡ ಜೀವಿಸಿಬಿಡಬಹುದು. ಆದರೆ ಆಹಾರ ಇಲ್ಲದೆ ಬದುಕಲು ಸಾಧ್ಯವಿಲ್ಲ. ಆದರೆ ಇಲ್ಲೊಬ್ಬ ಮಹಾಶಯ ಮುನಿಗಳು ಬರೋಬ್ಬರಿ ಎಪ್ಪತ್ತು ವರ್ಷಗಳಿಂದ ಆಹಾರವನ್ನ ಸೇವಿಸದೇ ಜೀವಿಸುತ್ತಿದ್ದಾನೆ. ಹೌದು ಈ ವಿಚಾರವನ್ನು ನಂಬಲು ಸಾಧ್ಯವಾಗುವುದಿಲ್ಲ. ಆದರೂ ಕೂಡ ಇದು ನಂಬಲೇಬೇಕಾದ ಸತ್ಯವಾದ ವಿಷಯವಾಗಿದೆ. ಆಹಾರವನ್ನೇ ಸೇವಿಸದೇ ಬದುಕುತ್ತಿರುವ ಈ ವ್ಯಕ್ತಿಯನ್ನು ಕಂಡು ನಾಸಾದ ವಿಜ್ಞಾನಿಗಳು ಕೂಡ ಒಮ್ಮೆಲೆ ದಿಗ್ಬ್ರಾಂತಿಗೆ ಒಳಗಾಗಿದ್ದಾರೆ. ಮೊದಲಿಗೆ ಈ ವಿಚಿತ್ರವಾದ ವಿಜ್ಞಾನ ಲೋಕಕ್ಕೆ ಅಚ್ಚರಿಯಾಗಿ ಕಂಡಂತಹ ಈ ವ್ಯಕ್ತಿಯ ಬಗ್ಗೆ ತಿಳಿದಂತಹ ವಿಜ್ಞಾನಿಗಳ ತಂಡ ಈ ಮುನಿಯನ್ನ ಭೇಟಿ ಮಾಡಲು ಗುಜರಾತಿಗೆ ತೆರಳುತ್ತಾರೆ. ಅಲ್ಲಿ ಈ ಮುನಿಯ ವೇಷಭೂಷಣವೇ ಸಂಪೂರ್ಣವಾಗಿ ವಿಚಿತ್ರವಾಗಿ ಕಾಣುತ್ತಿರುತ್ತದೆ.

ಈ ಖುಷಿ ಮುನಿಯ ಹೆಸರು ಪ್ರಹ್ಲಾದ್ ಜಾನಿ ಎಂದಂತೆ. ಇವರು ರಾಜಸ್ಥಾನದ ಹಳ್ಳಿಯೊಂದರಲ್ಲಿ 1929 ರಲ್ಲಿ ಜನಿಸುತ್ತಾರೆ. ತನ್ನ ಬಾಲ್ಯ ಅಂದರೆ ಪ್ರಹ್ಲಾದ್ ಜಾನಿ ಅವರಿಗೆ ಏಳನೇ ವರ್ಷ ತುಂಬುತ್ತಿದ್ದಂತೆ ಮನೆ ಬಿಟ್ಟು ಹೊರ ಬರುತ್ತಾರಂತೆ. ಮನೆ ಬಿಟ್ಟು ಹೊರ ಬಂದ ಬಳಿಕ ಅಲ್ಲಿ ಇಲ್ಲಿ ಅಲೆಯುತ್ತಾ ಪ್ರಸಿದ್ದ ದೇವಾಲಯಗಳಿಗೆ ಬಂದು ನೆಲೆಸುತ್ತಿದ್ದರಂತೆ. ಹೀಗೆ ಸಾಗುತ್ತಾ ಅಂಬಾಭವನಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಪ್ರಹ್ಲಾದ್ ಜಾನಿ. ಅಲ್ಲಿ ಅಮ್ಮನವರ ದರ್ಶನ ಮಾಡುತ್ತಾ ಅಂಬಾಭವನಿ ಅಮ್ಮನಿ ಪರಮ ಭಕ್ತರಾಗಿ ಪರವಶರಾಗಿ ಬಿಡುತ್ತಾರೆ. ಅಮ್ಮನವರ ಭಕ್ತನಾದ ನಂತರ ಅಮ್ಮನವರ ಪ್ರಭಾವ ಬೀರುತ್ತದೆ‌. ದಿನ ಕಳೆದಂತೆ ಪ್ರಹ್ಲಾದ್ ಜಾನಿ ಅವರಿಗೆ ಅಮ್ಮನ ಅನುಗ್ರಹ ಆಗಿ ಪ್ರಹ್ಲಾದ್ ಮಾತಾಜಿ ಆಗಿ ಪರಿವರ್ತನೆ ಆಗುತ್ತಾರೆ. ಕೆಂಪು ಸೀರೆ, ಒಡವೆ ಆಭರಣ ತೊಡಲು ಆರಂಭಿಸುತ್ತಾರೆ. ಇವರನ್ನ ಕಂಡಂತಹ ಭಕ್ತರು ಆರಂಭದ ದಿನಗಳಲ್ಲಿ ವಿಚಲಿತರಾಗುತ್ತಿರುತ್ತಾರೆ.

ಆದರೆ ತದ ನಂತರ ಪ್ರಹ್ಲಾದ್ ಮಾತಾಜಿ ಅವರು ಧ್ಯಾನ ಪೂಜೆ ಮಾಡುವ ಕ್ರಣವನ್ನು ಕಂಡು ಭಕ್ತರು ಇವರ ಅನುಯಾಯಿಗಳಾಗಲು ಶುರು ಮಾಡುತ್ತಾರೆ. ಹೀಗೆ ದಿನಕಳೆದಂತೆ ಪ್ರಹ್ಲಾದ್ ಮಾತಾಜಿ ಆಗಿ ಪ್ರಸಿದ್ದತೆ ಪಡೆದು ಅಪಾರ ಭಕ್ತ ವೃಂದವನ್ನೆ ಹೊಂದುತ್ತಾರೆ. ಅಂಬಾಭವಾನಿ ಅಮ್ಮನವರ ಪರಮ ಭಕ್ತರಾಗಿ ಧ್ಯಾನಿಸುತ್ತಾ ಸರಿ ಸುಮಾರು ಬರೋಬ್ಬರಿ ಎಪ್ಪತ್ತು ವರ್ಷಗಳಿಂದ ಅನ್ನ ನೀರು ಸೇವನೆ ಮಾಡದೆ ಏಕಚಿತ್ತವಾಗಿ ಧ್ಯಾನಸ್ಥರಾಗಿ ಕುಳಿತಿರುತ್ತಾರಂತೆ‌. ಪ್ರತಿ ದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದೇಳಿ ಅಂಬಾಭವಾನಿ ಅಮ್ಮನವರ ದೇವರ ಕಾರ್ಯದಲ್ಲಿ ತಲ್ಲೀನರಾಗಿ ತೊಡಗಿಕೊಳ್ಳುತ್ತಾರಂತೆ ಪ್ರಹ್ಲಾದ್ ಮಾತಾಜಿ. ಇವರು ಆಹಾರವನ್ನು ಸೇವಿಸದೇ ನಡೆಸಿಕೊಂಡು ಬರುತ್ತಿರುವ ಜೀವನ ಶೈಲಿ ಕ್ರಮ ಅಂತೂ ಸ್ವತಃ ವಿಜ್ಞಾನಿಗಳಿಗೆ ಅಚ್ಚರಿಯನ್ನುಂಟು ಮಾಡಿದೆ.

Leave a Reply

%d bloggers like this: