70 ವರ್ಷದಲ್ಲೇ ರೂಪಾಯಿ ಮೌಲ್ಯ ಕುಸಿತ, ಹೆಸರಾಂತ ನಟ ನಟಿಯರಿಗೆ ವ್ಯಂಗ್ಯ ಮಾಡಿದ ‘ಪ್ರಕಾಶ್ ರಾಜ್’ ಅವರು

ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತದ ಕುರಿತು ಬಾಲಿವುಡ್ ಸ್ಟಾರ್ಸ್ಸ್ ಬಾಯಿ ಬಿಡುವಂತೆ ಪ್ರಶ್ನೆ ಮಾಡಿದ ಬಹುಭಾಷಾ ನಟ ಪ್ರಕಾಶ್ ರಾಜ್. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದಿನ ಬಳಕೆಯ ಅಗತ್ಯ ವಸ್ತುಗಳ ಮೇಲೆ ಜಿ.ಎಸ್.ಟಿ ತೆರಿಗೆ ಹಾಕುವ ಮೂಲಕ ಜನ ಸಾಮಾನ್ಯರ ಬದುಕನ್ನ ಸಂಕಷ್ಟಕ್ಕೀಡು ಮಾಡಿದೆ. ಈಗಾಗಲೇ ಬೆಲೆ ಏರಿಕೆಯ ಕುರಿತು ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಆದರೆ ಯಾಕೋ ಏನೋ ಬೆಲೆ ಏರಿಕೆಯ ಕುರಿತು ಈ ಸಿನಿಮಾ ಸೆಲೆಬ್ರಿಟಿಗಳು ಮಾತ್ರ ಬಾಯಿ ಬಿಡುತ್ತಿಲ್ಲ. ಆದರೆ ಕನ್ನಡಿಗ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಮಾತ್ರ ಈ ಕುರಿತು ಖಡಕ್ಕಾಗಿ ಧ್ವನಿ ಎತ್ತಿದ್ದಾರೆ. ಅದರಲ್ಲಿಯೂ ಬಾಲಿವುಡ್ ಘಟಾನುಘಟಿ ಸ್ಟಾರ್ಸ್ ಗಳನ್ನೆಲ್ಲಾ ಎಳೆದು ತಂದು ಪ್ರಶ್ನೆ ಮಾಡಿದ್ದಾರೆ.

ಹೌದು ನಟ ಪ್ರಕಾಶ್ ರಾಜ್ ಆರಂಭದ ದಿನಗಳಿಂದಾನೂ ಕೂಡ ಬಿಜೆಪಿ ಸರ್ಕಾರ ತರುತ್ತಿರುವ ಕೆಲವು ನೀತಿ, ಯೋಜನೆಗಳ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಈ ಬಾರಿಯೂ ಕೂಡ ಪ್ರಕಾಶ್ ರಾಜ್ ಅವರು ಬೆಲೆ ಏರಿಕೆ ಜೊತೆಗೆ ಡಾಲರ್ ಎದುರು ರುಪಾಯಿ ಮೌಲ್ಯ ಗಣನೀಯವಾಗಿ ಕುಸಿತ ಕಾಣುತ್ತಿರುವ ಬಗ್ಗೆ ಮೋದಿ ಅವರ ಆಡಳಿತ ಕುರಿತು ಟ್ವೀಟ್ ಮಾಡಿದ್ದಾರೆ. ಅದಲ್ಲದೆ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಬೆಲೆ ಏರಿಕೆಯಾಗಿ, ರುಪಾಯಿ ಮೌಲ್ಯ ಕುಸಿದಾಗ ಬಾಲಿವುಡ್ ಸ್ಟಾರ್ಸ್ ಆದಂತಹ ಬಿಗ್ ಬಿ ಅಮಿತಾಬ್ ಬಚ್ಚನ್ ರೂಪಾಯಿಗೆ ಬೇರೆಯದ್ದೇ ಅರ್ಥ ನೀಡಿ ಮನ್ಮೋಹನ್ ಸಿಂಗ್ ಅವರ ಸರ್ಕಾರವನ್ನು ವ್ಯಂಗ್ಯ ಟೀಕೆ ಮಾಡಿದ್ದರು. ಅದೇ ರೀತಿ ಶಿಲ್ಪಾ ಶೆಟ್ಟಿ ಅವರು ಡಾಲರ್ ಎಸ್ಕಲೇಟರ್ ನಲ್ಲಿದ್ರೆ, ರೂಪಾಯಿ ವೆಂಟಿಲೇಟರ್ ನಲ್ಲಿದೆ.

ದೇಶ ಐಸಿಯುನಲ್ಲಿದ್ದು, ನಾವೇಲ್ಲಾ ಕೋಮಾದಲ್ಲಿದ್ದೇವೆ. ಈರುಳ್ಳಿ ಶೋರೂಮ್ ನಲ್ಲಿದೆ. ಈ ದೇಶವನ್ನು ದೇವರೇ ಕಾಪಾಡಬೇಕು ಎಂದು ವ್ಯಂಗ್ಯವಾಗಿ ಮನ್ ಮೋಹನ್ ಸಿಂಗ್ ಸರ್ಕಾರವನ್ನು ಟೀಕೆ ಮಾಡಿದ್ರು. ಅದೇ ರೀತಿ ಜೂಹಿ ಚಾವ್ಲಾ ಕೂಡ ಮನ್ ಮೋಹನ್ ಸಿಂಗ್ ಸರ್ಕಾರವನ್ನ ಟೀಕಿಸುತ್ತಾ ರೂಪಾಯಿಯನ್ನ ಒಳ ಉಡುಪಿಗೆ ಹೋಲಿಕೆ ಮಾಡಿದ್ದರು. ಅದೇ ರೀತಿ ಅಗ್ನಿ ಹೋತ್ರಿ ಅವರು ನಿಮ್ಮ ಸಂತೋಷ ಪೆಟ್ರೋಲ್ ದರದ ರೀತಿ ಹೆಚ್ಚಬೇಕು. ನಿಮ್ಮ ಕಷ್ಟ ಇಂಡಿಯನ್ ರೂಪಾಯಿಯಂತೆ ಕುಸಿಯಬೇಕು. ಭಾರತದಲ್ಲಿ ಇರುವ ಭ್ರಷ್ಟಾಚಾರದಂತೆ ಸಂತೋಷ ನಿಮ್ಮ ಹೃದಯ ತುಂಬಬೇಕು ಎಂದು ಟ್ವೀಟ್ ಮಾಡಿದ್ದರು.

ಇದೀಗ ಪ್ರಕಾಶ್ ರಾಜ್ ಅವರು ಮನಮೋಹನ್ ಸಿಂಗ್ ಸರ್ಕಾರವನ್ನು ಟೀಕಿಸಿದ್ದ ಎಲ್ಲಾ ಬಾಲಿವುಡ್ ಸ್ಟಾರ್ ಟ್ವೀಟ್ ಗಳನ್ನು ಮತ್ತೆ ಸಾಲಾಗಿ ತಮ್ಮ ಟ್ವೀಟರ್ ಖಾತೆಯಲ್ಲಿ ಕ್ರಮವಾಗಿ ಜೋಡಿಸಿ ಪೋಸ್ಟ್ ಮಾಡಿದ್ದಾರೆ. ಹಿಂದಿನ ಸರ್ಕಾರದಲ್ಲಿ ರುಪಾಯಿ ಮೌಲ್ಯ ಕುಸಿದಾಗ ನೀವೇಲ್ಲಾ ಟೀಕೆ ವ್ಯಂಗ್ಯಮಾಡಿ ಆಕ್ರೋಶ ವ್ಯಕ್ತಪಡಿಸಿದ್ದವರು. ಹೀಗ್ಯಾಕೇ ಡಾಲರ್ ಎದುರು ರುಪಾಯಿ ಮೌಲ್ಯ 80 ಆದ್ರೂ ಕೂಡ ತುಟಿ ಬಿಚ್ಚಿ ಮಾತನಾಡುತ್ತಿಲ್ಲ ಎಂದು ಪ್ರಕಾಶ್ ರಾಜ್ ಅವರು ಬಾಲಿವುಡ್ ಸ್ಟಾರ್ಸ್ ಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೀಗ ಪ್ರಕಾಶ್ ರಾಜ್ ಅವರ ಈ ಪೋಸ್ಟ್ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗಿದ್ದು, ನಟ ಪ್ರಕಾಶ್ ರಾಜ್ ಅವರಿಗೆ ಭಾರಿ ಬೆಂಬಲ ಕೂಡ ವ್ಯಕ್ತವಾಗಿದೆ.