7 ಕೋಟಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ದಕ್ಷಿಣ ಭಾರತದ ಸ್ಟಾರ್ ನಟ

ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ದುಬಾರಿ ಬೆಲೆಯ ಐಷಾರಾಮಿ ಕಾರೊಂದನ್ನ ಖರೀದಿ ಮಾಡಿ ಇದೀಗ ಭಾರಿ ಸುದ್ದಿಯಲ್ಲಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು ಸಾಮಾನ್ಯವಾಗಿ ಕಾರ್ ಕ್ರೇಜ಼್ ಹೊಂದಿರುತ್ತಾರೆ. ತಮ್ಮ ಇಷ್ಟದ ಐಷಾರಾಮಿ ಕಾರುಗಳನ್ನ ಖರೀದಿಸಿ ಅದರ ಅನುಭವವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ಇದೀಗ ಸ್ಟೈಲೀಶ್ ಸ್ಟಾರ್ ಯೂಥ್ ಐಕಾನ್ ಅಲ್ಲು ಅರ್ಜುನ್ ಅವರು ಕೂಡ ದುಬಾರಿ ಬೆಲೆಯ ಐಷಾರಾಮಿ ಕಾರನ್ನ ಖರೀದಿ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಾ ಚಿತ್ರದ ನಂತರ ಅಲ್ಲು ಅರ್ಜುನ್ ಅವರಿಗೆ ಕೇವಲ ತೆಲುಗು ಮತ್ತು ಭಾರತ ಮಾತ್ರ ಅಲ್ಲದೇ ವರ್ಲ್ಡ್ ವೈಡ್ ಅಪಾರ ಜನಪ್ರಿಯತೆ ಮತ್ತು ಅಭಿಮಾನಿ ಬಳಗವಿದೆ. ಪುಷ್ಪಾ ಸಿನಿಮಾ ಸೂಪರ್ ಹಿಟ್ ಆದ ನಂತರ ಇದರ ಮುಂದುವರಿದ ಸರಣಿ ಪುಷ್ಪಾ2 ಸಿನಿಮಾ ಸಿದ್ದವಾಗುತ್ತಿದೆ.

ಇನ್ನು ಈ ಚಿತ್ರದ ಯಶಸ್ಸು ಅಲ್ಲು ಅರ್ಜುನ್ ಅವರಿಗೆ ಭಾರಿ ಬೇಡಿಕೆ ಸೃಷ್ಟಿಸಿದೆ. ಕೇವಲ ಸಿನಿಮಾಗಳ ಅವಕಾಶ ಮಾತ್ರ ಅಲ್ಲದೆ ಅನೇಕ ಜಾಹೀರಾತು ಕಂಪನಿಗಳು ಕೂಡ ಅಲ್ಲು ಅರ್ಜುನ್ ಅವರ ಹಿಂದೆ ಬಿದ್ದಿವೆ. ಇದೆಲ್ಲದರ ನಡುವೆ ಇದೀಗ ಅಲ್ಲು ಅರ್ಜುನ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವುದಕ್ಕಾಗಿ ತಾಜ್ ಕೃಷ್ಣ ಹೋಟೇಲ್ ಗೆ ರೋಲ್ಸ್ ರಾಯ್ಸ್ ಕಲಿನನ್ ಎಸ್ಯೂವಿ ಕಾರಿನಲ್ಲಿ ಬಂದಿಳಿದರು. ಈ ಕಾರಿನಲ್ಲಿ ಅಲ್ಲು ಅರ್ಜುನ್ ಅವರು ಬಂದೊಡನೆ ಅನೇಕರಿಗೆ ಅಚ್ಚರಿ ಆಯಿತು. ಯಾಕಂದ್ರೆ ಇದು ಅಲ್ಲು ಅರ್ಜುನ್ ಅವರು ಖರೀದಿ ಮಾಡಿರುವ ಹೊಸ ಐಷಾರಾಮಿ ದುಬಾರಿ ಬೆಲೆಯ ಕಾರು. ಈಗಾಗಲೇ ಇವರ ಬಳಿ ಅನೇಕ ಕಾರುಗಳಿವೆ. ಅವುಗಳೊಟ್ಟಿಗೆ ಇದೀಗ ಈ ರೋಲ್ಸ್ ರಾಯ್ಸ್ ಕಲಿನನ್ ಕಾರು ಕೂಡ ಸೇರ್ಪಡೆಗೊಂಡಿದೆ. ಅಲ್ಲು ಅರ್ಜುನ್ ಅವರು ಖರೀದಿ ಮಾಡಿರುವ ಬಿಳಿ ಬಣ್ಣದ ರೋಲ್ಸ್ ರಾಯ್ಸ್ ಕಲ್ಲಿನನ್ ಕಾರು ಅತ್ಯಂತ ಶ್ರೀಮಂತ ವ್ಯಕ್ತಿಗಳು ಉಪಯೋಗಿಸುವಂತಹ ಕಾರಾಗಿದೆ.

ಬ್ರಿಟಿಷ್ ಮೂಲದ ಈ ಕಾರು ಅತ್ಯಾಧುನಿಕ ಅಡ್ವಾನ್ಸ್ಡ್ ಫೀಚರ್ ಗಳನ್ನ ಒಳಗೊಂಡಿದ್ದು, ಆಕರ್ಷಕ ವಿನ್ಯಾಸ ಹೊಂದಿದೆ. ಈ ಕಾರಿನ ಬೆಲೆ ಬರೋಬ್ಬರಿ ಒಂದು ಕೋಟಿಗೂ ಅಧಿಕ ಎಂದು ಹೇಳಲಾಗುತ್ತದೆ. ಈಗಾಗಲೇ ಈ ರೋಲ್ಸ್ ರಾಯ್ಸ್ ಕಲ್ಲಿನನ್ ಕಾರು ಬಾಲಿವುಡ್ ಸ್ಟಾರ್ ನಟರಾದ ಅಜಯ್ ದೇವಗನ್, ಟಿ.ಸೀರೀಸ್ ಮಾಲೀಕರಾದ ಭೂಷಣ್ ಕುಮಾರ್ ಮತ್ತು ಭಾರತ ದೇಶದ ಸುಪ್ರಸಿದ್ದ ಶ್ರೀಮಂತ ಉದ್ಯಮಿ ಅಂಬಾನಿ ಕುಟುಂಬದವರ ಬಳಿ ಇದೆ. ಇದೀಗ ಅಲ್ಲು ಅರ್ಜುನ್ ಅವರು ಖರೀದಿಸಿರುವ ಈ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರಿನ ವಿಶೇಷತೆ ಮತ್ತು ಲಕ್ಷಣಗಳನ್ನ ನೋಡುವುದಾದರೆ ಈ ಕಾರು 22ಇಂಚಿನ ಚಕ್ರಗಳನ್ನೊಂದಿದ್ದು, ಫೈವ್ ಸೀಟರ್ ಗಳನ್ನೊಂದಿದೆ. ಈ ಐದು ಸೀಟುಗಳು ಸಪ್ರೇಟ್ ಎಲೆಕ್ಟ್ರಿಕ್ ಆಪರೇಟ್ ಫೆಸಿಲಿಟಿ ಹೊಂದಿದೆ. ಇನ್ನು ಇದರಲ್ಲಿ ಎಂಜಿನ್ ರೂಂ, ಕ್ಯಾಬಿನ್ ಮತ್ತು ಬೂಟ್ ಎಂಬ ಮೂರು ವಿಭಾಗಗಳಿದ್ದು, ಇನ್ಫೋಟೈನ್ ಮೆಂಟ್ ಅಂಡ್ ಎಂಟರ್ನೈನ್ಮೆಂಟ್ ಸಿಸ್ಟಂ ಹೊಂದಿದೆ.

Leave a Reply

%d bloggers like this: