5 ದಿನಕ್ಕೆ 630 ಕೋಟಿಗೂ ಹೆಚ್ಚು ಹಣ್ಣ ಗಳಿಸಿ ಇತಿಹಾಸ ಸೃಷ್ಟಿಸಿದ ಕನ್ನಡ ಚಿತ್ರ KGF-2

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಕೆಜಿಎಫ್ ಚಾಪ್ಟರ್ 2 ಚಿತ್ರ ವಿಶ್ವದಾದ್ಯಂತ ಪಂಚ ಭಾಷೆಗಳಲ್ಲಿ ಇದೇ ಏಪ್ರಿಲ್ 14.ರಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಕೆಜಿಎಫ್ ಚಾಪ್ಟರ್ 1. ಸಿನಿಮಾ ತನ್ನ ಮೇಕಿಂಗ್ ಮತ್ತು ಮ್ಯೂಸಿಕ್ ಇಡೀ ಭಾರತೀಯ ಚಿತ್ರರಂಗದಲ್ಲಿ ಮಾತ್ರ ಅಲ್ಲದೆ ಹೊರ ದೇಶಗಳಲ್ಲಿ ಕೂಡ ಅಪಾರ ಜನಪ್ರಿಯತೆ ಗಳಿಸಿದ ಕಾರಣ ಈ ಚಿತ್ರದ ಮುಂದುವರಿದ ಸರಣಿಯಾಗಿ ಮೂಡಿಬಂದ ಕೆಜಿಎಫ್ ಚಾಪ್ಟರ್ 2 ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಹುಟ್ಟುಹಾಕಿತು.ಅದರಂತೆ ನಿರೀಕ್ಷೆಗೂ ಮೀರಿ ಕೆಜಿಎಫ್ ಚಾಪ್ಟರ್2. ಸಿನಿಮಾ ಈಗಾಗಲೇ ಎಲ್ಲೆಡೆ ಭಾರಿ ಸಂಚಲನ ಸೃಷ್ಟಿಸಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಹೌದು ಕೆಜಿಎಫ್ ಚಾಪ್ಟರ್ 2 ಸಿನಿಮಾ ಮೊದಲ ಭಾಗಕ್ಕಿಂತ ಹೆಚ್ಚಾಗಿ ಚಿತ್ರದ ಮೇಕಿಂಗ್, ಬಿಜಿಎಮ್ ಮೂಲಕ ಸಾಕಷ್ಟು ಕ್ರೇಜ಼್ ಹುಟ್ಟಿಸಿದೆ. ಕೆಜಿಎಪ್ ಚಾಪ್ಟರ್ 2. ಸಿನಿಮಾ ನೋಡಿದ ಸಿನಿ ಪ್ರೇಕ್ಷಕರು ಅಭೂತಪೂರ್ವ ಪ್ರತಿಕ್ರಿಯೆ ಪಡೆದು ನೀಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯ, ಪ್ರಶಾಂತ್ ನೀಲ್ ಅವರ ನಿರ್ದೇಶನದ ಬಗ್ಗೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಭರ್ಜರಿ ಫೈಟ್ಸ್, ಅಧ್ಭುತ ಮೇಕಿಂಗ್, ಮದರ್ ಸೆಂಟಿಮೆಂಟ್, ಚಿಂದಿ ಅನ್ನುವಂತಹ ಮಾಸ್ ಡೈಲಾಗ್, ಮೈ ರೋಮಾಂಚನ ಗೊಳಿಸುವಂತಹ ಬಿಜಿಎಮ್ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ಬೇರೆ ಲೆವೆಲ್ ಗೆ ಕರೆದೊಯ್ದಿದೆ. ವಿಶ್ವದಾದ್ಯಂತ ಇಷ್ಟೆಲ್ಲಾ ಭಾರಿ ಸದ್ದು ಮಾಡುತ್ತಿರುವ ಈ ಕೆಜಿಎಫ್ ಚಾಪ್ಟರ್ 2 ಚಿತ್ರದ ಕಲೆಕ್ಷನ್ ಕೇಳಿ ಇಡೀ ಭಾರತೀಯ ಚಿತ್ರರಂಗವೇ ನಿಬ್ಫೆರಗಾಗಿದೆ. ಹೌದು ಕೆಜಿಎಫ್ ಚಾಪ್ಟರ್ 2 ಚಿತ್ರ ಯಶ್ ಅವರ ಸಿನಿ ವೃತ್ತಿ ಜೀವನದಲ್ಲಿ ಬಹುದೊಡ್ಡ ಮೈಲಿಗಲ್ಲು ಎನ್ನಬಹುದು. ಯಾಕಂದ್ರೆ ಕೆಜಿಎಫ್ 2 ಚಿತ್ರ ಒಂದು ದಿನದಲ್ಲಿ ಬರೋಬ್ಬರಿ ನೂರಾಮೂವತ್ತೈದು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಮಾಡಿದೆ.

ಈ ಚಿತ್ರದ ಆಡಿಯೋ ರೈಟ್ಸ್ ಎಪ್ಪತ್ತೆರಡು ಕೋಟಿಗೆ ಮಾರಾಟವಾಗಿದೆ. ಅದೇ ರೀತಿಯಾಗಿ ಪಂಚಭಾಷೆಯ ಸ್ಯಾಟ್ ಲೈಟ್ ರೈಟ್ಸ್ ಎಂಭತ್ತು ಕೋಟಿಗೆ ಬಿಕರಿಯಾಗಿದೆ. ಒಟ್ಟಾರೆಯಾಗಿ ಕೆಜಿಎಫ್ 2 ಚಿತ್ರ ನಾಲ್ಕೇ ದಿನಕ್ಕೆ ಬರೋಬ್ಬರಿ ಐನೂರು ಕೋಟಿಗೂ ಅಧಿಕ ಗಳಿಕೆ ಮಾಡಿ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ. ಐದು ದಿನಕ್ಕೆ ಬೊರೊಬ್ಬರಿ 630 ಕೋಟಿ ಗಳಿಸಿ ಧಾಖಲೆ ಬರೆದಿದೆ. ಏನೇ ಆಗಲಿ ಕನ್ನಡದ ಸಿನಿಮಾ ವೊಂದು ಇಡೀ ವಿಶ್ವವೇ ಅಚ್ಚರಿಯಿಂದ ನಿಬ್ಬೆರಗಣ್ಣಿನಿಂದ ತನ್ನತ್ತ ನೋಡುವಂತೆ ಮಾಡಿದ ಕೆಜಿಎಫ್ 2 ಚಿತ್ರ ಕನ್ನಡ ಭಾಷೆಯ ಹಿರಿಮೆಯನ್ನು ದೇಶದ ಗಡಿಯಾಚೆ ಪಸರಿಸಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ಸರಿ ಎನ್ನಬಹುದು.

Leave a Reply

%d bloggers like this: