44ರ ವಯಸ್ಸಿನಲ್ಲಿ ಮತ್ತೆ ಮದುವೆ ಮಾಡಿಕೊಳ್ಳುತ್ತಿರುವ ನಟಿ ಪ್ರೇಮ

ನಮಸ್ಕಾರ ಸ್ನೇಹಿತರೆ ಕನ್ನಡ ಚಲನಚಿತ್ರದ ಖ್ಯಾತ ನಟಿ ಪ್ರೇಮ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ಕನ್ನಡ ಚಿತ್ರರಂಗದ ಅತಿ ಯಶಸ್ವಿ ನಟಿಯರಲ್ಲಿ ಪ್ರೇಮ ಒಬ್ಬರು.ಪಾತ್ರವೇ ತಾವಾಗಿ ಸಹಜವಾಗಿ ಅಭಿನಯ ಮಾಡುತ್ತಿದ್ದ ನಟಿಯರಲ್ಲಿ ಒಬ್ಬರು.ಅವರ ವೃತ್ತಿ ಜೀವನ ಅಭೂತಪೂರ್ವ ಯಶಸ್ಸು ಕಂಡಿತು.ಆದರೆ ಅವರ ವೈಯಕ್ತಿಕ ಜೀವನ ಇನ್ನೂ ಸರಿಯಾಗಿ ನೆಲೆ ನಿಂತಿಲ್ಲ.ಇತ್ತೀಚೆಗೆ ಪ್ರೇಮ ಅವರ ತಂದೆ ತೀರಿಕೊಂಡರು.ಅವರ ಕುಟುಂಬ ಇದರಿಂದ ದುಃಖಭರಿತವಾಗಿತ್ತು.ಇಡೀ ದಕ್ಷಿಣ ಭಾರತದ ಚಿತ್ರರಂಗದ ಮೇರು ನಟಿ ಪ್ರೇಮ 44ರ ವಯಸ್ಸಿನಲ್ಲಿ ಕೂಡ ಬಣ್ಣ ಹಚ್ಚಿದರೆ ಯಾವುದೇ ನಾಯಕಿಗೂ ಕಮ್ಮಿ ಇಲ್ಲ ಅನ್ನುವ ಹಾಗೆ ಇರುವವರು.

ಪೋಷಕ ಪಾತ್ರದಲ್ಲಿ ನಟಿಸುವುದಿಲ್ಲ ಪ್ರಮುಖ ಪಾತ್ರವೇ ಆಗಬೇಕು ಅಂತ ಕೂತಿರುವ ಗಟ್ಟಿಗಿತ್ತಿ.ಆದರೆ ಅವರ ವೈಯಕ್ತಿಕ ಜೀವನ ನಿಂತ ನೀರಾಗಿದೆ. 2006ರಲ್ಲಿ ಜೀವನ್ ಅಪ್ಪಚ್ಚು ಅನ್ನುವವರನ್ನು ಮದುವೆಯಾಗಿ ಆ ಸಂಬಂಧ ಸರಿ ಹೋಗದೇ ವಿಚ್ಛೇದನ ಕೊಟ್ಟು ಬಂದವರು ಪ್ರೇಮ.ಈಗ ಬಹಳ ವರ್ಷಗಳ ಬಳಿಕ ಎರಡನೇ ಮದುವೆಯ ಸುದ್ದಿ ಕೇಳಿ ಬರುತ್ತಿದೆ.ಪ್ರೇಮ ಅವರಿಗೆ ಇಷ್ಟು ವರ್ಷ ಒಬ್ಬಂಟಿ ಅಂತ ಅನಿಸಿಲ್ಲ ಕಾರಣ ತಂದೆ ತಾಯಿ ಜೊತೆಗೆ ಇದ್ದರು.ಈಗ ಅವರ ತಂದೆ ತೀರಿಕೊಂಡಿರುವುದರಿಂದ ಅವರ ತಾಯಿ ಪ್ರೇಮಳ ಜೀವನದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.