42 ಲೀಟರ್ ಎದೆಹಾಲು ಅನಾಥ ಮಕ್ಕಳಿಗೆ ದಾನ ಮಾಡಿದ ಖ್ಯಾತ ನಟಿ ಇವರೇ ನೋಡಿ

ತನ್ನ ಮಗುವಿನ ಜೊತೆಗೆ ಬರೋಬ್ಫರಿ ಅರವತ್ತು ಶಿಶುಗಳಿಗೆ ತನ್ನ ಎದೆ ಹಾಲುಣಿಸಿ ಮಹಾತಾಯಿ ಆದ ಬಾಲಿವುಡ್ ಖ್ಯಾತ ನಟಿ ಕಮ್ ನಿರ್ಮಾಪಕಿ..! ಇಂದಿನ ಪೀಳಿಗೆಯಲ್ಲಿ ನವ ವಿವಾಹಿತರು ತಮ್ಮ ದಾಂಪತ್ಯ ಜೀವನವನ್ನು ಸ್ವಾತಂತ್ರ್ಯವಾಗಿಟ್ಟು ಕೊಳ್ಳಬೇಕೆಂದು ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ತಾಯಿಯಾಗುವುದನ್ನು ಆದಷ್ಟು ಒಂದಷ್ಟು ವರ್ಷಗಳ ಕಾಲ ಮುಂದಕ್ಕೆ ಹಾಕಿಕೊಳ್ಳುತಾರೆ.ಒಂದು ವೇಳೆ ಮನೆಯ ಹಿರಿಯರ ಒತ್ತಡದಿಂದ ಮಕ್ಕಳನ್ನು ಮಾಡಿಕೊಂಡರು ಸಹ ತಮ್ಮ ಸೌಂದರ್ಯ ಹದಗೆಡುತ್ತದೆ ಎಂಬ ಕಾರಣಕ್ಕೆ ಆ ಮಗುವಿಗೆ ಎದೆ ಹಾಲನ್ನು ಕುಡಿಸಲು ಹಿಂದೇಟು ಹಾಕುತ್ತಾರೆ. ಏಕೆಂದರೆ ತಮ್ಮ ಬಾಹ್ಯ ಸೌಂದರ್ಯದ ಅತಿಯಾದ ವ್ಯಾಮೋಹ ಕಾಳಜಿಯಿಂದ ತಾವು ಜನ್ಮ ನೀಡಿದಂತಹ ಮಗುವಿಗೆ ಎದೆಹಾಲನ್ನು ನೀಡುವುದಕ್ಕೆ ಇಂದಿನ ಆಧುನಿಕ ಮಹಿಳೆಯರು ಆಲಸ್ಯ ಮಾಡುತ್ತಾರೆ.

ಇಂತಹ ಆಧುನಿಕತೆಯ ಸಮಾಜದಲ್ಲಿ ಇಲ್ಲೊಬ್ಬ ಖ್ಯಾತ ನಟಿ ಬರೊಬ್ಬರಿ 60 ಮಕ್ಕಳಿಗೆ ಸರಿ ಸುಮಾರು 42 ಲೀಟರ್ ನಷ್ಟು ತನ್ನ ಎದೆಹಾಲನ್ನು ನೀಡಿದ್ದಾರೆ.ಈ ಮೂಲಕ ಅಂತಃಕರಣ ಹೃದಯ ಹೊಂದಿರುವ ತಾಯಿ ಯಾಗಿದ್ದಾರೆ ಸಿನಿಮಾ ನಟಿ ಮತ್ತು ಖ್ಯಾತ ನಿರ್ಮಾಪಕಿ. ಪ್ರಸ್ತುತ ನಮ್ಮ ದೇಶದಲ್ಲಿ ಶೇಕಡಾ 13 ರಷ್ಟು ಮಕ್ಕಳು ತಾಯಿಯ ಎದೆಹಾಲಿನ ಕೊರತೆಯಿಂದಾಗಿ ಶೇಕಡ 24 ರಷ್ಟು ಮಕ್ಕಳು ಅಸುನೀಗುತ್ತಿದ್ದಾರೆ. ತಾಯಿಯ ಎದೆಹಾಲಿನಲ್ಲಿ ಮಗುವಿಗೆ ಅಗತ್ಯವಾದಂತಹ ಎಲ್ಲಾ ರೀತಿಯ ಪೌಷ್ಟಿಕಾಂಶ ಇರುತ್ತದೆ. ಹಾಗಾಗಿಯೆ ತಾಯಿಯ ಎದೆಹಾಲು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಹಿಂದಿ ಚಿತ್ರರಂಗದ ಖ್ಯಾತ ನಟಿ ಮತ್ತು ನಿರ್ಮಾಪಕಿಯಾಗಿರುವ ನಿಧಿ ಪರ್ಮಾರ್ ತಾವು ಕೂಡ ಒಂದು ಮಗುವಿನ ತಾಯಿಯಾಗಿದ್ದು,ತನ್ನ ಮಗುವಿಗೆ ಹಾಲುಣಿಸುತ್ತಿರುವುದರ ಜೊತೆಗೆ ಆಗತಾನೇ ಮಗುವಿಗೆ ಜನ್ಮ ನೀಡಿ ಆ ಮಗುವಿಗೆ ಹಾಲುಣಿಸಲು ಕಷ್ಟವಾಗುತ್ತಿರುವ ಬಾಣಂತಿಯರಿಗೆ ನೆರವಾಗಿದ್ದಾರೆ.

ಈ ಮೂಲಕ ಸುಮಾರು ೬೦ ನವಜಾತ ಶಿಶುಗಳಿಗೆ ತಾಯಿಯಾಗಿದ್ದಾರೆ.ಒಟ್ಟಾರೆಯಾಗಿ ವಿಶಾಲ ಹೃದಯ ಹೊಂದಿರುವ ಈ ನಟಿಯ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಈ ನಮ್ಮ ಲೇಖನದ ಬಗ್ಗೆ ನಿಮ್ಮ ಅನಿಸಿಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.