400 ಕೋಟಿ ರೂ. ಬಜೆಟ್ ನ ಕನ್ನಡದ ಮೊದಲ ಸಿನೆಮಾ! ಇಡೀವಿಶ್ವದಲ್ಲೆ ತೆರೆಕಾಣಲಿದೆ ಕನ್ನಡದ ಸಿನಿಮಾ

ಸ್ಯಾಂಡಲ್ ವುಡ್ ಲವ್ಲೀ ಸ್ಟಾರ್ ಪ್ರೇಮ್ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದಾರೆ.ಇದುವರೆಗೆ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ನಟ ಪ್ರೇಮ್ ಈಗ ಯೋಧನ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಹೌದು ಡಾ.ರಾಘವೇಂದ್ರ ಅವರ ನಿರ್ದೆಶನದಲ್ಲಿ ಮೂಡಿ ಬರುತ್ತಿರುವ ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಲವರ್ ಬಾಯ್ ಆಗಿ ನಟಿಸಿದ್ದಾರೆ.ಈ ಸಿನಿಮಾ ಲವ್ಲೀ ಸ್ಟಾರ್ ಪ್ರೇಮ್ ಅವರ 25 ನೇ ಚಿತ್ರವಾಗಿದೆ.ಈ ಪ್ರೇಮಂ ಪೂಜ್ಯಂ ಚಿತ್ರದ ಹಾಡು ಈಗಾಗಲೇ ಹಿಟ್ ಆಗಿದೆ.ಇನ್ನು ಈ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.ಇದರ ಬೆನ್ನಲ್ಲೇ ಈ ಚಿತ್ರದ ನಿರ್ದೇಶಕ ಡಾ. ರಾಘವೇಂದ್ರ ಅವರು ನಟ ಪ್ರೇಮ್ ಅವರ ಜೊತೆ ಮತ್ತೊಂದು ಸಿನಿಮಾ ಮಾಡಲು ಹೊರಟಿದ್ದಾರೆ.ಡಾ ವಿಷ್ಣುವರ್ಧನ್ ಅವರ ಮುತ್ತಿನ ಹಾರ ಸಿನಿಮಾದ ನಂತರ ಕನ್ನಡದಲ್ಲಿ ಸಂಪೂರ್ಣವಾಗಿ ಕರ್ನಾಟಕದ ಯೋಧರ ಕಥೆಯಾಧಾರಿತ ಸಿನಿಮಾ ಅಷ್ಟಾಗಿ ಮೂಡಿ ಬಂದಿಲ್ಲ.ಇಂಗ್ಲೀಷ್,ಹಿಂದಿ ಚಿತ್ರರಂಗದಲ್ಲಿ ಯೋಧರ ಬಗ್ಗೆ ಆಗಾಗ ಸಿನಿಮಾಗಳು ಬರುತ್ತಿರುತ್ತವೆ.

ಕನ್ನಡ ಚಿತ್ರಗಳಲ್ಲಿ ಈ ಕೊರತೆ ಇದೆ.ಈ ಕೊರತೆ ನೀಗಿಸಲು ಇದೀಗ ಕರ್ನಾಟಕದ ಯೋಧರ ಬಗ್ಗೆ ಸಿನಿಮಾ ಮಾಡಲು ರಾಘವೇಂದ್ರ ಅವರು ಮುಂದಾಗಿದ್ದಾರೆ.ಈ ಸಿನಿಮಾದಲ್ಲಿ ಲವ್ಲೀ ಸ್ಟಾರ್ ಪ್ರೇಮ್ ಅವರು ಕಮಾಂಡರ್ ಪಾತ್ರದಲ್ಲಿ ನಟಿಸಲಿದ್ದಾರೆ.ಈ ಚಿತ್ರವು ಪ್ಯಾನ್ ಇಂಡಿಯಾ ಸಿನಿಮಾ ಆಗಲಿದ್ದು,ಬರೋಬ್ಬರಿ ನಾನೂರು ಕೋಟಿ ರೂ.ಗೂ ಅಧಿಕ ಬಂಡವಾಳ ಹೂಡಲಾಗುವುದು,ಈಗಾಗಲೇ ಈ ಹೊಸದ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.ಇನ್ನು ಕನ್ನಡ ಚಿತ್ರರಂಗಕ್ಕೆ ಬಂದು ಒಂದೂವರೆ ದಶಕಗಳು ಕಳೆಯುತ್ತಾ ಬಂದರು ಕೂಡ ನಟ ಪ್ರೇಮ್ ನಟಿಸಿರುವುದು ಕೇವಲ 25 ಸಿನಿಮಾಗಳು ಮಾತ್ರ.ಇದಕ್ಕೆ ಪ್ರಮುಖವಾದ ಕಾರಣಗಳು ಕೂಡ ಇವೆ.ನಟ ಪ್ರೇಮ್ ಅವರು ಕನ್ನಡ ಸಾಹಿತ್ಯದ ಪುಸ್ತಕಗಳ ಬಗ್ಗೆ ಅಪಾರ ಒಲವು ಹೊಂದಿದ್ದಾರೆ.ತಾವು ಮಾಡುವ ಪಾತ್ರಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುವ ಪ್ರೇಮ್ ಇದುವರೆಗೆ ಕೂಡ ನಕರಾತ್ಮಕ ಬೀರುವ ಸಿನಿಮಾಗಳಲ್ಲಿ ಕಾಣಿಕೊಂಡಿಲ್ಲ.

ತಮಗೆ ಬರುವ ಎಲ್ಲಾ ಅವಕಾಶಗಳನ್ನ ಒಪ್ಪಿಕೊಳ್ಳದೆ ಸಿನಿಮಾಗಳ ಆಯ್ಕೆಯ ಬಗ್ಗೆ ಕೊಂಚ ಜಾಗೃತಿ ವಹಿಸುತ್ತಾರೆ.ಆರ್.ಚಂದ್ರು ನಿರ್ದೇಶನದ ಚಾರ್ ಮಿನಾರ್ ಸಿನಿಮಾ ಪ್ರೇಮ್ ಅವರು ನಟಿಸಿದ ಕೊನೆಯ ಸೂಪರ್ ಹಿಟ್ ಚಿತ್ರವಾಗಿದೆ.ಇದೀಗ ಮತ್ತೆ ಮತ್ತೊಂದ್ ಪ್ರೇಮ ಕಥೆಯಾಧಾರಿತ ಪ್ರೇಮಂ ಪೂಜ್ಯಂ ಸಿನಿಮಾದ ಮೂಲಕ ತೆರೆ ಮೇಲೆ ಬರಲಿದ್ದಾರೆ.ಒಟ್ಟಾರೆಯಾಗಿ ಇಷ್ಟು ದಿನ ಕಾಲ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪ್ರೇಮ್ ಇದೇ ಮೊದಲ ಬಾರಿಗೆ ಮುಖ್ಯ ಭೂಮಿಕೆಯಲ್ಲಿ ಕಮಾಂಡರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು,ಈ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಲಿದೆ.ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಪ್ರಸಿದ್ದ ನಟರು ಅಭಿನಯಿಸಲಿದ್ದಾರೆ.ಜೊತೆಗೆ ಹಾಲಿವುಡ್ ತಾಂತ್ರಿಕ ವರ್ಗ ಕೆಲಸ ಮಾಡಲಿದೆ ಎಂದು ನಿರ್ದೇಶಕರಾದ ಡಾ.ರಾಘವೇಂದ್ರ ಅವರು ತಿಳಿಸಿದ್ದಾರೆ.