4 ವರ್ಷಗಳ ನಂತರ ಶಾರುಖ್ ಖಾನ್ ಅವರ ಹೊಸ ಚಿತ್ರದ ಟೀಸರ್ ಬಿಡುಗಡೆ, ದಾಖಲೆ ಮಾಡಲು ಸಿದ್ದರಾದ ಶಾರುಖ್

ಬಾಲಿವುಡ್ ಕಿಂಗ್ ಖಾನ್ ಸರಿ ಸುಮಾರು ಮೂರ್ನಾಲ್ಕು ವರ್ಷಗಳ ನಂತರ ಬೆಳ್ಳಿ ಪರದೆಯ ಮೇಲೆ ರಾರಾಜಿಸಲು ಗ್ರ್ಯಾಂಡ್ ಆಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಹೌದು ಬಾಲಿವುಡ್ ಸೂಪರ್ ಸ್ಟಾರ್ ನಟರ ಪೈಕಿ ಕಿಂಗ್ ಖಾನ್ ಶಾರುಖ್ ಖಾನ್ ಅವರು ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ. ದೇಶಾದ್ಯಂತ ಇರುವ ಅವರ ಅಪಾರ ಅಭಿಮಾನಿಗಳು ನಟ ಶಾರುಖ್ ಖಾನ್ ಅವರ ಸಿನಿಮಾ ನೋಡಲು ಬಹಳ ಕಾತುರದಿಂದ ಕಾಯುತ್ತಿದ್ದಾರೆ. ನಟ ಶಾರುಖ್ ಖಾನ್ ಅವರಿಗೆ ಕೆಲವು ವರ್ಷಗಳಿಂದ ಅವರು ಮಾಡಿದ ಯಾವ ಸಿನಿಮಾಗಳು ಕೂಡ ನಿರೀಕ್ಷೆ ಮಾಡಿದಷ್ಟು ಯಶಸ್ಸು ತಂದು ಕೊಟ್ಟಿಲ್ಲ. ಸದ್ಯಕ್ಕೆ ಅವರ ನಟನೆಯ ಬಹು ನಿರೀಕ್ಷಿತ ಸಿನಿಮಾಗಳೆಂದರೆ ಅದು ಸೌತ್ ಸಿನಿರಂಗದ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಜವಾನ್ ಮತ್ತು ಸಿದ್ದಾರ್ಥ್ ಆನಂದ್ ಅವರ ನಿರ್ದೇಶನದಲ್ಲಿ ತಯಾರಾಗ್ತಿರೋ ಪಠಾಣ್ ಸಿನಿಮಾ.

ಈ ಪಠಾಣ್ ಸಿನಿಮಾದ ಟೀಸರ್ ಇತ್ತೀಚೆಗಷ್ಟೇ ರಿಲೀಸ್ ಆಗಿದ್ದು, ಶಾರುಖ್ ಖಾನ್ ಅವರ ಅಭಿಮಾನಿಗಳು ಫಿಧಾ ಆಗಿದ್ದಾರೆ. ಪಠಾಣ್ ಟೀಸರಲ್ಲಿ ಶಾರುಖ್ ಖಾನ್ ಆಕ್ಷನ್ ದೃಶ್ಯದ ಪೋಟೋಗಳನ್ನ ನೋಡ್ಬೋದಾಗಿದೆ. ಶಾರುಖ್ ಖಾನ್ ಅವರು ಆಕ್ಷನ್ ಥ್ರಿಲ್ಲರ್ ಆಗಿರೋ ಪಠಾಣ್ ಸಿನಿಮಾದಲ್ಲಿ ಎಲ್ಲರು ಉಬ್ಬೇರಿಸುವಂತೆ ಸ್ಟಂಟ್ ಮಾಡಿದ್ದಾರಂತೆ. ಟೀಸರ್ ನೋಡಿದವರಿಗೆ ಶಾರುಖ್ ಖಾನ್ ಈ ಚಿತ್ರದ ಸ್ಟಂಟ್ ಗಾಗಿ ತಮ್ಮ ದೇಹ ಹುರಿಗೊಳಿಸಿ ಸಾಕಷ್ಟು ದೈಹಿಕ ಶ್ರಮ ಹಾಕಿದ್ದಾರೆ ಅನ್ನೋದು ಗೊತ್ತಾಗುತ್ತದೆ. ಶಾರುಖ್ ಖಾನ್ ಅವರು ಪಠಾಣ್ ಸಿನಿಮಾಗಾಗಿ ಯಾವ ರೀತಿ ಎಷ್ಟೆಲ್ಲಾ ಶ್ರಮಪಟ್ಟು ದೇಹದಂಡಿಸಿದ್ದಾರೆ ಅನ್ನೋದನ್ನ ಈ ಚಿತ್ರದ ನಿರ್ದೇಶಕ ಸಿದ್ದಾರ್ಥ್ ಆನಂದ್ ಮನಬಿಚ್ಚಿ ಹೇಳಿದ್ದಾರೆ. ನಾನು ಪಠಾಣ್ ಸಿನಿಮಾದ ಕಥೆ ಹೇಳಲು ಶಾರುಖ್ ಅವರ ಬಳಿ ಹೋದಾಗ ಅವರು ಈ ಕಥೆ ಕೇಳಿ ಇದರಲ್ಲಿ ನಾನು ಚೆನ್ನಾಗಿ ಆಕ್ಷನ್ ಮಾಡ್ಬೇಕು. ನಾನು ಮಾಡೋ ಆಕ್ಷನ್ ಪ್ರೇಕ್ಷಕರಿಗೆ ಅದ್ಭುತ ವಾವ್ ಅನ್ನುವ ಅನುಭವ.

ನೀಡ್ಬೇಕು ಎಂದು ಹೇಳಿ ಆಕ್ಷನ್ ಸನ್ನಿವೇಶಗಳಗೆ ಅಗತ್ಯವಾದ ಎಲ್ಲಾ ರೀತಿಯಾಗಿ ದೇಹದಂಡಿಸಿ ಆಕ್ಷನ್ ದೃಶ್ಯಗಳಲ್ಲಿ ಪಾಲ್ಗೊಂಡರು. ಈ ಚಿತ್ರದಲ್ಲಿನ ಪ್ರತಿಯೊಂದು ಸಾಹಸ ದೃಶ್ಯಗಳು ಅತ್ಯಂತ ಅಪಾಯಕಾರಿಯಾಗಿರೋದ್ರ ಜೊತೆಗೆ ಡೇಂಜರಸ್ ಸ್ಪಾಟ್ ಗಳಲ್ಲಿ ಶಾರುಖ್ ಖಾನ್ ಅವರು ರಿಸ್ಕ್ ತೆಗೆದುಕೊಂಡು ಸ್ಟಂಟ್ ಮಾಡಿದ್ದಾರೆ. ಶಾರುಖ್ ಖಾನ್ ಅವರ ಬದ್ದತೆ ಅವರಿಗೆ ಚಿತ್ರದ ಮೇಲೆ ಇರೋ ನಂಬಿಕೆಗೆ ನಿಜಕ್ಕೂ ಕೂಡ ಮೆಚ್ಚುಗೆ ಪಡಿಸಲೇಬೇಕು. ಶಾರುಖ್ ಖಾನ್ ಅವರಿಗೆ ಶಾರುಖ್ ಅವರೇ ಸಾಟಿ. ಅವರಂತೆ ಇನ್ನೊಬ್ಬರಿಲ್ಲ ಎಂದು ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ಶಾರುಖ್ ಅವರನ್ನ ಹಾಡಿ ಹೊಗಳಿದ್ದಾರೆ. ಇನ್ನು ಈ ಪಠಾಣ್ ಸಿನಿಮಾ ಮುಂದಿನ ವರ್ಷ ಜನವರಿ 25ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಯಶ್ ರಾಜ್ ಫಿಲಂಸ್ ಸಂಸ್ಥೆ ಬಂಡವಾಳ ಹೂಡಿದ್ದು, ಈ ಚಿತ್ರದಲ್ಲಿ ಶಾರುಖ್ ಅವರಿಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದು, ಪ್ರಧಾನ ಪಾತ್ರದಲ್ಲಿ ಜಾನ್ ಅಬ್ರಾಹಂ ಕೂಡ ಅಭಿನಯಿಸಿದ್ದಾರೆ.

Leave a Reply

%d bloggers like this: