4 ದಿನದಲ್ಲಿ ಶುರುವಾಗ್ತಿದೆ ಬಿಗ್ ಬಾಸ್, ಆದರೆ ರಾತ್ರಿ ಇಷ್ಟು ಲೇಟ್ ಆಗಿ ಯಾಕೆ ಪ್ರಸಾರ ಎಂದು ವೀಕ್ಷಕರ ಬೇಸರ

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್9 ಆರಂಭಗೊಳ್ಳಲು ದಿನಗಣನೆ ಆರಂಭವಾಗಿದೆ. ಇದೇ ಸೆಪ್ಟೆಂಬರ್ 24 ರಿಂದ ಬಿಗ್ ಬಾಸ್ 9ನೇ ಆವೃತ್ತಿಯು ಅದ್ದೂರಿಯಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆಯಂತೆ. ಪ್ರತಿಬಾರಿ ಬಿಗ್ ಬಾಸ್ ಶೋ ಒಂದಲ್ಲ ಒಂದು ರೀತಿಯ ಹೊಸ ನಿಯಮಗಳನ್ನ ಅಳವಡಿಸಿಕೊಂಡು ವೀಕ್ಷಕರಿಗೆ ಸಖತ್ ಎಕ್ಸೈಟ್ಮೆಂಟ್ ಜೊತೆಗೆ ಮಸ್ತ್ ಮನರಂಜನೆ ನೀಡುತ್ತಾ ಬರುತ್ತಿದೆ. ಅದರಂತೆ ಈ ಬಾರಿಯೂ ಕೂಡ ವಿಶೇಷವಾಗಿ ಬಿಗ್ ಬಾಸ್ ಸೀಸನ್9 ಕೂಡ ಪ್ರಸಾರವಾಗಲು ಸಿದ್ದವಾಗುತ್ತಿದೆ. ಈಗಾಗಲೇ ಅದರ ಒಂದು ಸಣ್ಣ ಝಲಕ್ ಕೂಡ ಸಿಕ್ಕಿದೆ. ಹಾಗಾದರೆ ಬಿಗ್ ಬಾಸ್ ಸೀಸನ್ 9ರಲ್ಲಿ ಯಾವ್ಯಾವ ಸ್ಪರ್ಧಿಗಳು ಇರಲಿದ್ದಾರೆ ಅನ್ನೋದನ್ನ ತಿಳಿಯೋದಾದ್ರೆ.

ಬಾದ್ ಶಾ ಕಿಚ್ಚ ಸುದೀಪ್ ಅವರ ಸೊಗಸಾದ ನಿರೂಪಣೆಯಲ್ಲಿ ಮೂಡಿ ಬರುವ ಬಿಗ್ ಬಾಸ್ ರಿಯಾಲಿಟಿ ಶೋ ನೋಡಲು ಕನ್ನಡ ಕಿರುತೆರೆ ವೀಕ್ಷಕರು ಭಾರಿ ಕಾತುರದಿಂದ ಕಾಯುತ್ತಿರುತ್ತಾರೆ. ಸದ್ಯಕ್ಕೆ ಇತ್ತೀಚೆಗೆ ತಾನೇ ಬಿಗ್ ಬಾಸ್ ಓಟಿಟಿ ಯಶಸ್ವಿಯಾಗಿ ಮುಗಿದಿದೆ. ಬಿಗ್ ಬಾಸ್ ಓಟಿಟಿಯಲ್ಲಿ ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದಾರೆ. ಐದು ಲಕ್ಷ ರೂ ಬಹುಮಾನದ ಮೊತ್ತವನ್ನ ಕೂಡ ಪಡೆದುಕೊಂಡಿದ್ದಾರೆ. ಈ ಮೂಲಕ ಬಿಗ್ ಬಾಸ್ 9ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ರಾಕೇಶ್ ಅಡಿಗ, ಸಾನ್ಯಾ ಅಯ್ಯರ್ ಮತ್ತು ಆರ್ಯ ವರ್ಧನ್ ಕೂಡ ದೊಡ್ಮನೆಗೆ ಮತ್ತೊಮ್ಮೆ ಸೇರಲಿದ್ದಾರೆ. ಈ ನಾಲ್ವರ ಜೊತೆಗೆ ಬಿಗ್ ಬಾಸ್ ಹಳೆಯ ಸೀಸನ್ ನಲ್ಲಿ ಭಾಗವಹಿಸಿದ ಐದು ಜನ ಸ್ಪರ್ಧಿಗಳು ಮತ್ತೆ ಈ ಆವೃತ್ತಿಯಲ್ಲಿ ಬರಲಿದ್ದಾರಂತೆ. ಅದಕ್ಕೆ ಪೂರಕವಾಗಿ ಇತ್ತೀಚೆಗೆ ಪ್ರೋಮೋವೊಂದು ರಿಲೀಸ್ ಆಗಿತ್ತು.

ಈ ಪ್ರೋಮೋದಲ್ಲಿ ಕಳೆದ ಸೀಸನ್ ಗಳಲ್ಲಿ ಸ್ಪರ್ಧಿಗಳಾಗಿದ್ದ ದೀಪಿಕಾ ದಾಸ್, ವೈಷ್ಣವಿ ಗೌಡ, ಪ್ರಶಾಂತ್ ಸಂಬರಗಿ, ಅನುಪಮಾ ಗೌಡ ಸಹ ಇರಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಪ್ರವೀಣರ ಜೊತೆ ನವೀನರು ಎಂಬ ಕಲ್ಪನೆಯಡಿ ಈ ಬಿಗ್ ಬಾಸ್ ಸೀಸನ್ 9ಕ್ಕೆ ಚಾಲನೆ ನೀಡಲಾಗ್ತಿದೆ. ಇದೇ ಸೆಪ್ಟೆಂಬರ್ 24ಕ್ಕೆ ಬಿಗ್ ಬಾಸ್ ಸೀಸನ್9 ಗ್ರ್ಯಾಂಡ್ ಓಪನಿಂಗ್ ತೆಗೆದುಕೊಳ್ಳಲಿದೆ. ಎಂದಿನಂತೆ ಬಾದ್-ಶಾ ಕಿಚ್ಚ ಸುದೀಪ್ ಅವರ ಸಾರಥ್ಯ ಈ ಬಿಗ್ ಬಾಸ್ ಸೀಸನ್ 9ಕ್ಕೂ ಕೂಡ ಇರಲಿದೆ. ಈ ಸೀಸನ್ ನಲ್ಲಿ ದೊಡ್ಮನೆಯೊಳಗೆ ಹದಿನೆಂಟು ಮಂದಿ ಹೋಗಲಿದ್ದಾರಂತೆ. ಅವರ ಪೈಕಿ ಈಗಾಗಲೇ ಓಟಿಟಿಯಿಂದ ನಾಲ್ವರು ಆಯ್ಕೆ ಆಗಿದ್ದಾರೆ.

ಇನ್ನು ಈ ನಾಲ್ವರ ಜೊತೆಗೆ ಕಳೆದ ಎಂಟು ಸೀಸನ್ ಗಳಲ್ಲಿ ಸ್ಪರ್ಧಿಗಳಾಗಿದ್ದ ಐವರು ಮಂದಿಯನ್ನ ಪುನಃ ಕರೆ ತರಲಾಗುತ್ತದೆ ಎಂದು ತಿಳಿದು ಬಂದಿದೆ. ಇನ್ನೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಕಾಫಿನಾಡು ಚಂದು ಬಿಗ್ ಬಾಸ್ ನಲ್ಲಿ ಇರ್ಲೇಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲಿಗೆ ಇವರನ್ನೆಲ್ಲಾ ಒಟ್ಟುಗೂಡಿಸಿದರೆ ದೊಡ್ಮನೆಯೊಳಗೆ 10ಜನ ಎಂಟ್ರಿ ಆಗೋರು ಯಾರ್ಯಾರು ಅನ್ನೋದು ಗೊತ್ತಾಯ್ತು. ಇವರ ಜೊತೆಗೆ ಇನ್ನೊಂದೆಂಟು ಸ್ಪರ್ಧಿಗಳು ಯಾರ್ಯಾರು ಇರಲಿದ್ದಾರೆ ಅನ್ನೋದನ್ನ ಇದೇ ಸೆಪ್ಟೆಂಬರ್ 24ರಂದು ಕಲರ್ಸ್ ಕನ್ನಡದಲ್ಲೇ ಕಣ್ತುಂಬಿಕೊಳ್ಳಬಹುದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9.30ರಿಂದ ಹತ್ತುವರೆ ಅಥವಾ ಹನ್ನೊಂದು ಗಂಟೆಯ ತನಕ ಈ ಬಿಗ್ ಬಾಸ್ ಸೀಸನ್9 ಪ್ರಸಾರವಾಗಲಿದೆ. ಈಗ ಅಭಿಮಾನಿಗಳು ಪ್ರಸಾರದ ಸಮಯದ ಬಗ್ಗೆ ಅಸಮಾಧಾನಗೊಂಡಿದ್ದು ಬಿಗ್ ಬಾಸ್ ಪ್ರಸಾರವಾಗುವಾಗ ಅರ್ಧದಷ್ಟು ಜನ ಮಲಗಿರುತ್ತಾರೆ ಹೀಗಾಗಿ ಎಂಟು ಗಂಟೆಯಿಂದ ಪ್ರಸಾರ ಮಾಡಿದ್ದಾರೆ ಚೆನ್ನಾಗಿರುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: