35 ಬಾರಿ ಫೇಲ್ ಆದ ನಂತರವು ಛಲ ಬಿಡದೆ ಆತ್ಮ ಸ್ಥೈರ್ಯದಿಂದ ಸಾಧಿಸೆಯೇ ತೋರಿಸಿದ ವ್ಯಕ್ತಿ! ನಿಜಕ್ಕೂ ಯಾರು ಗೊತ್ತಾ ಈ ವ್ಯಕ್ತಿ

ಸತತ ಸೋಲುಗಳನ್ನೇ ತನ್ನ ಗೆಲವಿನ ಮೆಟ್ಟಿಲಾಗಿಸಿಕೊಂಡು ಇಂದು ಐಪಿಎಸ್ ಅಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ ಹರಿಯಾಣದ ಈ ವ್ಯಕ್ತಿ. ಹೌದು ಇತ್ತೀಚಿನ ಯುವ ಪೀಳಿಗೆಯಲ್ಲಿ ಕೇವಲ ಶಾಲಾ-ಕಾಲೇಜುಗಳಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಅನುತ್ತೀರ್ಣ ಆದ ತಕ್ಷಣ ಆತ್ಮಹತ್ಯೆಯ ಕಡೆ ಮುಖ ಮಾಡುತ್ತಾರೆ. ಅದರಲ್ಲಿಯೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಫಲಿತಾಂಶಗಳು ಹೊರ ಬಿದ್ದಾಗ ಅನೇಕ ಫೇಲಾದಂತಹ ಅನೇಕ ವಿಧ್ಯಾರ್ಥಿಗಳು ಜೀವನ ಅಷ್ಟಕ್ಕೇ ಮುಗೀತು ಎಂದು ತಮ್ಮ ಜೀವವನ್ನೇ ತ್ಯಜಿಸು ಬಿಡುತ್ತಾರೆ. ಅಂತೆಯೇ ಈ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ ತಾನು ಈ ಪರೀಕ್ಷೆಗಳನ್ನು ಪಾಸಾಗಲೇಬೇಕು. ಸರ್ಕಾರಿ ಉದ್ಯೋಗ ಪಡೆದುಕೊಳ್ಳಲೇಬೇಕು. ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಾನು ಕಡ್ಡಾಯವಾಗಿ ಉತ್ತೀರ್ಣನಾಗಲೇಬೇಕು ಎಂಬ ಹಠ ಛಲದಿಂದ ಹಗಲು- ರಾತ್ರಿ ಶ್ರಮವಹಿಸಿ ಅಧ್ಯಾಯನ ನಡೆಸುತ್ತಾರೆ.

ಆದರೆ ದುರಾದೃಷ್ಟವಶಾತ್ ಅವರಿಗೆ ಫಲಿತಾಂಶ ನಕರಾತ್ಮಕವಾಗಿ ಬಂದಾಗ ಕುಗ್ಗಿ ಹೋಗಿ ಎಷ್ಟೋ ಮಂದಿ ಖಿನ್ನತೆಗೆ ಒಳಗಾಗುತ್ತಾರೆ. ಕೇವಲ ಒಂದೇ ಒಂದೋ ಎರಡೋ ಪ್ರಯತ್ನ ಮಾಡಿ ಸೋಲನ್ನು ಕಂಡಾಕ್ಷಣ ಸಾವಿಗೆ ಶರಣಾಗುವ ಮಂದಿಯ ನಡುವೆ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ ಮೂವತ್ತೈದು ಬಾರಿ ಫೇಲ್ ಆಗಿ, ತದ ನಂತರ ತನ್ನ ಐಪಿಎಸ್ ಕನಸನ್ನ ಸಾಕಾರಗೊಳಿಸಿಕೊಂಡಿದ್ದಾರೆ. ತಾಳಿದವನು ಬಾಳಿಯಾನು ಎಂಬಂತೆ ಈ ವ್ಯಕ್ತಿ ಇಂದು ಅನೇಕ ಯುವಕ-ಯುವತಿಯರಿಗೆ ಮಾದರಿಯಾಗಿದ್ದಾರೆ. ಸಾಲು ಸಾಲು ಸೊಲಿನ ನಂತರ ಇಂದು ಸಾಧಕರಾಗಿ ನಮ್ಮ ಮುಂದೆ ನಿಂತಿರುವ ಈ ವ್ಯಕ್ತಿಯ ಹೆಸರು ವಿಜಯ್ ವರ್ಧನ್.

ಹರಿಯಾಣದ ಸಿರ್ಸಾ ಜಿಲ್ಲೆಯವರಾದ ವಿಜಯ್ ವರ್ಧನ್ ಅವರು 2013 ರಲ್ಲಿ ಎಲೆಕ್ಟ್ರಾನಿಕ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸುತ್ತಾರೆ‌. ಉನ್ನತ ವ್ಯಾಸಂಗಕ್ಕಾಗಿ ಹಿಸಾರ್ ಗೆ ಹೋಗುತ್ತಾರೆ. ಇವರಿಗೆ ಈ ಸಂಧರ್ಭದಲ್ಲಿ ತಾನೊಬ್ಬ ಸಿವಿಲ್ ಸರ್ವೆಂಟ್ ಆಗಬೇಕು ಎಂಬ ಕನಸು ಚಿಗೊರೆಡೆಯುತ್ತದೆ. ಆಗ ಹಿಸಾರ್ ನಿಂದ ದೆಹಲಿಯತ್ತ ಪ್ರಯಾಣ ಬೆಳೆಸುತ್ತಾರೆ. ದೆಹಲಿಗೆ ಬಂದು ಕೋಚಿಂಗ್ ಸೆಂಟರ್ ನಲ್ಲಿ ತಯಾರಿ ಕೂಡ ನಡೆಸುತ್ತಾರೆ‌. ಅಧ್ಯಾಯನ ಮಾಡುತ್ತಲೇ ವಿಜಯ್ ವರ್ಧನ್ ಅವರು ತಮ್ಮ ರಾಜ್ಯ ಹರಿಯಾಣದ ಪಿಸಿಎಸ್, ಯುಪಿ ಪಿಸಿಎಸ್, ಎಸ್ ಎಸ್ ಸಿಸಿ ಜಿ ಪಿ ಹೀಗೆ ಸರಿ ಸುಮಾರು ಮೂವತ್ತಕ್ಕೂ ಹೆಚ್ಚು ಕಾಂಪಿಟೇಟೀವ್ ಎಕ್ಸಾಂಗಳನ್ನು ಎದುರಿಸುತ್ತಾರೆ. ಆದರೆ ಯಾವುದರಲ್ಲಿಯೂ ಕೂಡ ಯಶಸ್ಸು ಕಾಣುವುದಿಲ್ಲ.

ಈ ಸೋಲಿನ ದಿನಗಳಲ್ಲಿ ಅವರಿಗೆ ಅನೇಕರು ಅವರನ್ನ ಛೇಡಿಸುವುದೂ ಉಂಟು. ಹಾಸ್ಯವಾಗಿ ವ್ಯಂಗ್ಯ ಮಾಡುವುದು ಉಂಟು. ಆದರೆ ವಿಜಯ್ ವರ್ಧನ್ ಈ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತಮ್ಮ ಕೆಲಸವನ್ನು ನಿಷ್ಠೆಯಿಂದ ಶ್ರದ್ದಾಭಕ್ತಿಯಿಂದ ಅಧ್ಯಾಯನದಲ್ಲಿ ನಿರತರಾಗುತ್ತಾರೆ‌. ಅದೇ ರೀತಿಯಾಗಿ 2014 ರಿಂದ ಯುಪಿಎಸ್ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ.2014 ಮತ್ತು 2015 ರಲ್ಲಿ ಎರಡು ಬಾರಿಯೂ ಕೂಡ ಪೂರ್ವಭಾವಿ ಪರೀಕ್ಷೆಯನ್ನ ಮಾತ್ರ ಪಾಸ್ ಮಾಡಲು ಸಾಧ್ಯವಾಯಿತು ಹೊರತು ಮುಖ್ಯ ಪರೀಕ್ಷೆಯಲ್ಲಿ ಪಾಸ್ ಆಗಲು ಸಾಧ್ಯವಾಗಲೇ ಇಲ್ಲ.

ವಿಜಯ್ ವರ್ಧನ್ ಅವರು ಧೃತಿಗೆಡಲಿಲ್ಲ. ಮತ್ತೆ ಮೂರನೇ ಬಾರಿಗೆ ಪ್ರಯತ್ನಿಸಿ ಮುಖ್ಯ ಪರೀಕ್ಷೆ ಪಾಸ್ ಆದರು. ಆದರೆ ಸಂದರ್ಶನದಲ್ಲಿ ವಿಫಲರಾಗುತ್ತಾರೆ. 2018 ರಲ್ಲಿ ಪರೀಕ್ಷೆ ಬರೆದು ಯುಪಿಎಸ್ಸಿ ಪರೀಕ್ಷೆಯಲ್ಲಿ 104 ರ್ಯಾಂಕ್ ಪಡೆಯುವ ಮೂಲಕ ಯಶಸ್ಸನ್ನು ಪಡೆದೇ ಬಿಟ್ಟರು. ಹೀಗೆ ವಿಜಯ್ ವರ್ಧನ್ ಅವರು ತಮ್ಮ ನಿರಂತರ ಪರಿಶ್ರಮದಿಂದಾಗಿ ತಾವು ಅಂದುಕೊಂಡದ್ದನ್ನು ಸಾಧಿಸಿ ಅದೃಷ್ಟ ಅದೃಷ್ಟ ಎನ್ನುವವರಿಗೆ ಪರಿಶ್ರಮ ಆತ್ಮವಿಶ್ವಾಸ ಇಲ್ಲದೆ ಯಾವ ಅದೃಷ್ಟವೂ ಕೂಡ ನಮ್ಮ ಬಳಿ ಬರಲಾರದು ಎಂದು ಸಾಧಿಸಿ ತಿಳಿಸಿಕೊಟ್ಟರು.

Leave a Reply

%d bloggers like this: