30 ಲಕ್ಷ ಬೆಲೆಯ ಬೈಕ್ ಅಲ್ಲಿ ಕಾಶ್ಮೀರಕ್ಕೆ ಬೈಕ್ ರೈಡಿಂಗ್ ಹೋದ ದಕ್ಷಿಣ ಭಾರತದ ಸ್ಟಾರ್ ನಟ ಹಾಗೂ ನಟಿ

ತಮಿಳಿನ ಖ್ಯಾತ ನಟ ಅಜಿತ್ ಕುಮಾರ್ ಅವರೊಟ್ಟಿಗೆ ಲಡಾಖ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ ಮಲೆಯಾಳಂ ಸ್ಟಾರ್ ನಟಿ ಮಂಜು ವಾರಿಯರ್. ತಮಿಳಿನ ಸೂಪರ್ ಸ್ಟಾರ್ ನಟ ಅಜಿತ್ ಕುಮಾರ್ ಅವರು ನಟನೆಯ ಜೊತೆಗೆ ಒಬ್ಬ ಉತ್ತಮ ಬೈಕ್ ರೈಡರ್ ಕೂಡ ಹೌದು. ಹಾಗಾಗಿ ಅವರಿಗೆ ಹೊಸ ಸ್ಪೋರ್ಟ್ಸ್ ಬೈಕ್ ಗಳನ್ನ ಕಂಡರೆ ಬಹಳ ಅಚ್ಚು ಮೆಚ್ಚು. ಅಜಿತ್ ಕುಮಾರ್ ಅವರು ಈಗಾಗಲೇ ಸಾಕಷ್ಟು ಬೈಕ್ ರೇಸ್ ಕಾಂಪಿಟೇಶನ್ ಗಳಲ್ಲಿ ಭಾಗವಹಿಸಿದ್ದಾರೆ. ಆಗಾಗ ಶೂಟಿಂಗ್ ಬಿಡುವಿದ್ದಾಗ ಬೈಕ್ ಏರಿ ಲಾಂಗ್ ಡ್ರೈವ್ ಹೋಗೋ ಅಭ್ಯಾಸ ಕೂಡ ಇದೆ. ಅದಲ್ಲದೆ 2003ರಲ್ಲಿ ನಟ ಅಜಿತ್ ಅವರು ಫಾರ್ಮುಲಾ ಒನ್ ಚಾಂಪಿಯನ್ ಶಿಪ್ ಪ್ರವೇಶ ಮಾಡಿದ್ದರು. ವಿವಿಧ ರಾಜ್ಯ ಮಾತ್ರ ಅಲ್ಲದೇ ಜರ್ಮನಿ, ಮಲೇಷ್ಯಾ ಅಂತಹ ಅಂತರಾಷ್ಟ್ರೀಯ ಸರ್ಕ್ಯುಟ್ ರೇಸ್ ಗಳಲ್ಲಿ ಕೂಡ ಭಾಗವಹಿಸಿದ್ದಾರೆ.

ಈಗ ವಿಷ್ಯಾ ಏನಪ್ಪಾ ಅಂದ್ರೆ ನಟ ಅಜಿತ್ ಕುಮಾರ್ ಅವರು ಲಡಾಖ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಕೂಡ ಬೈಕ್ ರೈಡಿಂಗ್ ಮೂಲಕ. ಅದು ಅಜಿತ್ ಅವರ ಜೊತೆ ಮಲೆಯಾಳಂ ಸ್ಟಾರ್ ನಟಿ ಮಂಜು ವಾರಿಯರ್ ಅವರು ಸಹ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿದವರು ಅರೇ ಇದೇನಪ್ಪಾ ಅಂತ ಅಚ್ಚರಿ ಕೂಡ ಪಟ್ಟಿದ್ದಾರೆ. ಆದರೆ ಅಸಲಿಗೆ ಅಜಿತ್ ಅವರ 61ನೇ ಸಿನಿಮಾದಲ್ಲಿ ಮಂಜು ವಾರಿಯರ್ ಅವರು ನಟಿಸಲಿದ್ದಾರಂತೆ. ಅದಕ್ಕೂ ಮುನ್ನ ಅಜಿತ್ ಅವರು ತಮ್ಮ ಸ್ನೇಹಿತರೊಟ್ಟಿಗೆ ಲಡಾಖ್ ಪ್ರವೇಶ ಕೈಗೊಂಡಿದ್ದಾರೆ. ಇವರ ಜೊತೆಗೆ ಮಂಜು ವಾರಿಯರ್ ಕೂಡ ಬೈಕ್ ರೈಡಿಂಗ್ ಮೂಲಕ ಲಡಾಖ್ ಪ್ರವಾಸ ಹೋಗಿದ್ದಾರೆ. ಅಜಿತ್ ಅವರೊಟ್ಟಿಗೆ ಲಡಾಖ್ ಗೆ ಬೈಕ್ ನಲ್ಲಿ ಹೋಗಿದ್ದಕ್ಕೆ ವಿಶೇಷ ಅನುಭವ ಪಡೆದಿದ್ದಾರಂತೆ.

ತಮಗಾದ ಅನುಭವವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಮ್ಮ ಸೂಪರ್ ಸ್ಟಾರ್ ಅಜಿತ್ ಕುಮಾರ್ ಸರ್ ಗೆ ಧನ್ಯವಾದಗಳು. ನನಗೆ ಕಾರ್ ನಲ್ಲಿ ಸಾವಿರಾರು ಕಿಮೀ ಪ್ರಯಾಣ ಮಾಡಿರೋ ಅನುಭವ ಇದೆ. ಆದರೆ ಇದೇ ಮೊದಲ ಬಾರಿಗೆ ಬೈಕ್ ಮೂಲಕ ಇಷ್ಟು ದೂರ ಪ್ರಯಾಣ ಮಾಡಿದ್ದೇನೆ. ಈ ಅದ್ಭುತ ಗುಂಪಿಗೆ ಆಹ್ವಾನ ಮಾಡಿದ್ದಕ್ಕೆ ಅಡ್ವೆಂಚರ್ ರೈಡರ್ಸ್ ಇಂಡಿಯಾಗೆ ಹೃತ್ಪೂರ್ವಕ ಧನ್ಯವಾದಗಳು. ಜೊತೆಗೆ ಈ ಒಂದು ಉತ್ಸಾಹದಾಯಕ ತಂಡವನ್ನ ನನಗೆ ಪರಿಚಯ ಮಾಡಿಕೊಟ್ಟ ಅಜಿತ್ ಕುಮಾರ್ ಸರ್ ಗೆ ಧನ್ಯವಾದ ಎಂದು ಬರೆದುಕೊಂಡು ಅಜಿತ್ ಅವರೊಟ್ಟಿಗೆ ಒಂದಷ್ಟು ಬೈಕ್ ರೈಡರ್ ಜೊತೆ ಇರೋ ಫೊಟೋವೊಂದನ್ನ ನಟಿ ಮಂಜು ವಾರಿಯರ್ ಅವರು ಶೇರ್ ಮಾಡಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಂಜು ವಾರಿಯರ್ ಅವರು ಅಜಿತ್ ಅವರೊಟ್ಟಿಗೆ ಸಿನಿಮಾ ಮಾಡುತ್ತಿರುವುದಕ್ಕೆ ಶುಭ ಹಾರೈಸಿದ್ದಾರೆ.

Leave a Reply

%d bloggers like this: