ಮೂರನೇ ಮದುವೆ ಆದ ಬಹುಭಾಷೆಯ ಸುಪ್ರಸಿದ್ದ ನಟ ‘ಪ್ರಕಾಶ್ ರೈ’

ಬಹುಭಾಷೆಯ ಸುಪ್ರಸಿದ್ದ ನಟ ಪ್ರಕಾಶ್ ರೈ ಮತ್ತೊಮ್ಮೆ ಮದುವೆ ಆಗಿದ್ದಾರೆ..! ಸಾಮಾನ್ಯವಾಗಿ ಭಾರತೀಯ ಚಿತ್ರರಂಗದ ಒಂದಷ್ಟು ನಟ-ನಟಿಯರು ಎರಡನೇ ಮದುವೆಯಾಗಿರುವುದನ್ನ ನೋಡಬಹುದಾಗಿದೆ.ಸಿನಿಮಾ ಜೀವನದಲ್ಲಿ ಯಶಸ್ವಿಯಾದಂತಹ ಅನೇಕ ಕಲಾವಿದರು ತಮ್ಮ ದಾಂಪತ್ಯ ಜೀವನದಲ್ಲಿ ಎಡವಿರುತ್ತಾರೆ.ಅದರಂತೆ ಬಹುಭಾಷಾ ಕನ್ನಡದ ನಟ ಪ್ರಕಾಶ್ ರಾಜ್ ಕೂಡ ತಮ್ಮ ಮೊದಲ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಕೊಂಡ ನಂತರ ಎರಡನೇ ಮದುವೆಯಾಗಿ ಸುಂದರ ಬದುಕನ್ನ ಕಟ್ಟಿಕೊಂಡಿದ್ದಾರೆ.ಆಗಾಗ ಒಂದಷ್ಟು ವಿವಾದಾತ್ಮಕ ವಿಚಾರ ಹೇಳಿಕೆಗಳ ಮೂಲಕ ಸುದ್ದಿಯಾಗುವ ನಟ ಪ್ರಕಾಶ್ ರಾಜ್ ಇತ್ತೀಚೆಗೆ ಮತ್ತೆ ಸುದ್ದಿಯಾಗಿದ್ದಾರೆ.ಆದರೆ ಈಗ ಸುದ್ದಿಯಾಗಿರುವುದು ವಿವಾದಾತ್ಮಕ ಹೇಳಿಕೆಗಳ ಮೂಲಕ ಅಲ್ಲ.

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮದುವೆಯಾಗುತ್ತಿರುವಂತಹ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಈಗಾಗಲೇ ಮೊದಲನೇ ಪತ್ನಿ ಲಲಿತಾ ಕುಮಾರಿ ಅವರನ್ನ ತೊರೆದು ಎರಡನೇ ಪತ್ನಿ ಪೋನಿವರ್ಮಾ ಅವರೊಂದಿಗೆ ವೈವಾಹಿಕ ಜೀವನ ನಡೆಸುತ್ತಿದ್ದಾರೆ.ಇದರ ನಡುವೆ ಈ ಮದುವೆ ಆಗುತ್ತಿರುವ ಪೋಟೋಗಳನ್ನ ನೋಡಿ ಅವರ ಅಭಿಮಾನಿಗಳು ನಟ ಪ್ರಕಾಶ್ ರಾಜ್ ಮತ್ತೊಂದು ಮದುವೆಯಾಗುತ್ತಿದ್ದಾರಾ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದರು.ಆದರೆ ಅಸಲಿಗೆ ಅದರ ಕಹಾನಿಯೇ ಬೇರೆ.ಹೌದು ನಟ ಪ್ರಕಾಶ್ ರಾಜ್ ಮತ್ತು ಪೋನಿವರ್ಮಾ ದಂಪತಿಗಳು ತಮ್ಮ 11ನೇ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು.

ಈ ಸುಸಂಧರ್ಭದಲ್ಲಿ ತಮ್ಮ ಪುತ್ರ ವೇದಾಂತ್ ತನ್ನ ಅಪ್ಪನ ಹತ್ತಿರ ನೀವಿಬ್ಬರು ಮತ್ತೊಮ್ಮೆ ಮದುವೆ ಆಗಬೇಕು ಎಂದು ಬೇಡಿಕೆ ಇಟ್ಟಿದ್ದಾನೆ.ಆಗ ನಟ ಪ್ರಕಾಶ್ ರಾಜ್ ಕೂಡ ತಮ್ಮ ಮಗನ ಆಸೆಯನ್ನು ಪೂರೈಸಲು ತಮ್ಮ ಪತ್ನಿ ಪೋನಿವರ್ಮಾ ಅವರೊಟ್ಟಿಗೆ ಹೂವಿನ ಹಾರ ಬದಲಾಯಿಸಿಕೊಂಡು ಸಂಭ್ರಮಿಸಿದ್ದಾರೆ.ಇದರಿಂದ ಮಗ ವೇದಾಂತ್ ಕೂಡ ಸಂತಸ ಪಟ್ಟಿದ್ದಾನೆ.ಈ ಸಂಭ್ರಮದಲ್ಲಿ ನಟ ಪ್ರಕಾಶ್ ರಾಜ್ ಅವರ ಮೊದಲ ಪತ್ನಿಯ ಮಕ್ಕಳಾದ ಪೂಜಾ ಮತ್ತು ಮೇಘನಾ ಕೂಡ ಪಾಲ್ಗೊಂಡಿದ್ದರು. ಈ ಪೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ
ನಟ ಪ್ರಕಾಶ್ ರಾಜ್ ಶೇರ್ ಮಾಡಿ ನನ್ನ ಮಗ ವೇದಾಂತ್ ಗಾಗಿ ನಾವು ಮತ್ತೊಮ್ಮೆ ಮದುವೆ ಆಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.