3 ಕೋಟಿ ಬೆಲೆಯ ವೇಗದ ಬೆಂಜ್ ಕಾರು ಖರೀದಿಸಿದ ಸ್ಟಾರ್ ನಿರ್ದೇಶಕ

ಬಾಲಿವುಡ್ ಸೂಪರ್ ಸ್ಟಾರ್ ನಿರ್ದೇಶಕ ಇದೀಗ ಐಷಾರಾಮಿ ದುಬಾರಿ ಬೆಲೆಯ ಕಾರ್ ಖರೀದಿ ಮಾಡುವ ಮೂಲಕ ಬಿಟೌನ್ ನಲ್ಲಿ ಭಾರಿ ಸುದ್ದಿಯಾಗಿದ್ದಾರೆ. ಬಾಲಿವುಡ್ ಕಿಂಗ್ ಖಾನ್ ಅವರಿಗೆ ಚೆನ್ನೈ ಎಕ್ಸ್ ಪ್ರೆಸ್ ಅಂತಹ ಸೂಪರ್ ಡೂಪರ್ ಹಿಟ್ ಸಿನಿಮಾ ನೀಡಿದ ನಿರ್ದೇಶಕ ರೋಹಿತ್ ಶೆಟ್ಟಿ ಕೇವಲ ನಿರ್ದೇಶನ ಮಾತ್ರ ಅಲ್ಲದೆ ನಿರ್ಮಾಪಕರಾಗಿಯೂ ಕೂಡ ಯಶಸ್ಸು ಪಡೆದಿದ್ದಾರೆ. ಅಜಯ್ ದೇವಗನ್ ಅವರ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಬಾಲಿವುಡ್ ನಲ್ಲಿ ವೃತ್ತಿ ಜೀವನ ಆರಂಭಿಸಿ ಇಂದು ಬಾಲಿವುಡ್ ನ ಸುಪ್ರಸಿದ್ದ ನಿರ್ದೇಶಕರ ಪೈಕಿ ಮೊದಲ ಪಂಕ್ತಿಯಲ್ಲಿ ರೋಹಿತ್ ಶೆಟ್ಟಿ ನಿಲುತ್ತಾರೆ. ನಿರ್ದೇಶಕ ರೋಹಿತ್ ಶೆಟ್ಟಿ ಅವರಿಗೆ ಸಿನಿಮಾ ಮೇಲಿನ ಕ್ರೇಜ಼್ ಅಂತೆಯೇ ಕಾರ್ ಕ್ರೇಜ಼್ ಕೂಡ ಇದೆ.

ರೋಹಿತ್ ಶೆಟ್ಟಿ ಅವರ ಬಳಿ ಈಗಾಗಲೇ ಲಂಬೋರ್ಗಿನಿ ಉರುಸ್, ಫೋರ್ಡ್ ಮುಸ್ತಾಂಗ್ ಅಂಡ್ ಮಾಸೆರೋಟಿ ಗ್ರ್ಯಾನ್ ಟ್ಯುರಿಸ್ಮೋ ಸ್ಪೋರ್ಟ್ ಕಾರ್ ಗಳನ್ನ ಹೊಂದಿದ್ದಾರೆ. ಇದೀಗ ಇವರ ಕಾರ್ ಗ್ಯಾರೇಜ್ ಗೆ ನೂತನ ಮರ್ಸಿಡಿಸ್ ಎಎಮ್ ಜಿಜಿ 63 ಎಸ್ಯುವಿ ಕಾರ್ ಕೂಡ ಸೇರ್ಪಡೆಗೊಂಡಿದೆ. ಈ ಕಾರಿಗೆ ಸರಿ ಸುಮಾರು ಮೂರು ಕೋಟಿ ರುಪಾಯಿ ಇರಬಹುದು ಎಂದು ತಿಳಿದು ಬಂದಿದೆ. ರೋಹಿತ್ ಶೆಟ್ಟಿ ಅವರು ಖರೀದಿ ಮಾಡಿರೋ ಈ ನೂತನ ಮರ್ಸಿಡಿಸ್ ಕಾರು ಸಂಪೂರ್ಣವಾಗಿ ಎಲ್ಇಡಿ ಸೆಟಪ್ ಹೆಡ್ ಲ್ಯಾಂಪ್ ಕ್ಲಸ್ಟರ್ ಹೊಂದಿದ್ದು, ಬಾನೆಟ್ ಮೌಂಟೆಡ್ ಟರ್ನ್ ಇಂಡಿಕೇಟರ್ ಒಳಗೊಂಡಿದೆ.

ಎಎಮ್ ಜಿಜಿ 63 4.0 ಲೀಟರ್ ಬೈ ಟರ್ಬೋ ವಿ8 ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಈ ಮರ್ಸಿಡಿಸ್ ಕಾರು 585 ಬಿ.ಎಚ್.ಪಿ ಪವರ್ ಅಂಡ್ 850 ಎನ್ಎಮ್ ನ ಗರಿಷ್ಟ ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. ಇನ್ನು ವಿಶೇಷವಾಗಿ ಆಲ್ ವೀಲ್ ಡ್ರೈವ್ ಸಿಸ್ಟಮ್ ಹೊಂದಿದ್ದು, ಶೇಕಡ 40ರಷ್ಟು ಪವರ್ ಅನ್ನ ಮುಂದಿನ ಚಕ್ರಗಳಿಗೆ ಮತ್ತು ಶೇಕಡ 60ರಷ್ಟು ಶಕ್ತಿಯನ್ನ ಅಳವಡಿಸಿದೆ. ಇನ್ನು ನಿರ್ದೇಶಕ ರೋಹಿತ್ ಶೆಟ್ಟಿ ಅವರು ತಮ್ಮ ಹೊಸ ಮರ್ಸಿಡಿಸ್ ಎ.ಎಮ್.ಜಿ ಜಿ63 ಎಸ್ಯುವಿ ಕಾರನ್ನ ಕಾರ್ಯಕ್ರಮವೊಂದಕ್ಕೆ ತಂದಿದ್ದಾರೆ. ರೋಹಿತ್ ಶೆಟ್ಟಿ ಅವರ ಈ ಕಾರು ನೋಡಿ ಬಾಲಿವುಡ್ ನ ಒಂದಷ್ಟು ಮಂದಿ ನಿಬ್ಬೆರಗಾಗಿದ್ದಾರೆ. ಸದ್ಯಕ್ಕೆ ಬಿಟೌನ್ ನಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿ ಮರ್ಸಿಡಿಸ್ ಕಾರ್ ಖರೀದಿ ಮಾಡಿರೋದು ಸಖತ್ ಸುದ್ದಿಯಾಗಿದೆ.

Leave a Reply

%d bloggers like this: