3 ದಿನಕ್ಕೆ ಭಾರತದ ಎಲ್ಲ ದಾಖಲೆಗಳನ್ನು ಪುಡಿ ಪುಡಿ ಮಾಡಿದ KGF-2

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಹೌದು ಕನ್ನಡ ಚಿತ್ರರಂಗದ ಗೋಲ್ಡನ್ ಸಿನಿಮಾ ಅಂತಾನೇ ಕರೆಸಿಕೊಳ್ಳುವ ಕೆಜಿಎಫ್ ಚಿತ್ರದ ಮುಂದುವರಿದ ಸರಣಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ನಿನ್ನೆ ತಾನೇ ವರ್ಲ್ಡ್ ವೈಡ್ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಚಿತ್ರದ ಮೇಕಿಂಗ್, ಬಿಜಿಎಮ್ ಮೂಲಕ ಸಾಕಷ್ಟು ಕ್ರೇಜ಼್ ಹುಟ್ಟು ಹಾಕಿದ್ದ ಈ ಕೆಜಿಎಪ್ ಚಾಪ್ಟರ್ 2. ಸಿನಿಮಾ ಇದೀಗ ರಿಲೀಸ್ ಆದ ನಂತರ ನಿರೀಕ್ಷೆಗೂ ಮೀರಿ ಅಭೂತಪೂರ್ವ ಪ್ರತಿ ಕ್ರಿಯೆ ಪಡೆದುಕೊಂಡಿದೆ. ಕೆಜಿಎಫ್ ಚಾಪ್ಟರ್ 2.ಸಿನಿಮಾ ನೋಡಿದ ಸಿನಿ ಪ್ರೇಕ್ಷಕರು ಯಶ್ ಅವರ ಅಭಿನಯಕ್ಕೆ, ಪ್ರಶಾಂತ್ ನೀಲ್ ಅವರ ಡೈರೆಕ್ಷನ್ ಗೆ ಫಿಧಾ ಆಗಿದ್ದಾರೆ . ಭರ್ಜರಿ ಫೈಟ್ಸ್, ಅಧ್ಭುತ ಮೇಕಿಂಗ್, ಮದರ್ ಸೆಂಟಿಮೆಂಟ್, ಚಿಂದಿ ಅನ್ನುವಂತಹ ಮಾಸ್ ಡೈಲಾಗ್, ಮೈ ರೋಮಾಂಚನ ಗೊಳಿಸುವಂತಹ ಬಿಜಿಎಮ್ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ಬೇರೆ ಲೆವೆಲ್ ಗೆ ಕರೆದೊಯ್ದಿದೆ.

ವರ್ಲ್ಡ್ ವೈಡ್ ಇಷ್ಟೆಲ್ಲಾ ಭಾರಿ ಸದ್ದು ಮಾಡುತ್ತಿರುವ ಈ ಕೆಜಿಎಫ್ ಚಾಪ್ಟರ್ 2 ಚಿತ್ರದ ಕಲೆಕ್ಷನ್ ಕೇಳಿ ಇಡೀ ಭಾರತೀಯ ಚಿತ್ರರಂಗವೇ ನಿಬ್ಫೆರಗಾಗಿದೆ. ಹೌದು ಕೆಜಿಎಫ್ ಚಾಪ್ಟರ್ 2 ಚಿತ್ರ ಯಶ್ ಅವರ ಸಿನಿ ವೃತ್ತಿ ಜೀವನದಲ್ಲಿ ಬಹುದೊಡ್ಡ ಮೈಲಿಗಲ್ಲು ಎನ್ನಬಹುದು. ಹಾಗಾದ್ರೆ ಕೆಜಿಎಫ್ 2 ಚಿತ್ರ ಒಂದು ದಿನದ ಕನೆಕ್ಷನ್ ಎಷ್ಟು ಗೊತ್ತಾ. ಹೌದು ಮಾಹಿತಿಯ ಪ್ರಕಾರ ಕೆಜಿಎಫ್ ಚಾಪ್ಟರ್ 2 ಸಿನಿಮಾ ಮೊದಲನೇ ದಿನವೇ ಬರೋಬ್ಬರಿ ಇನ್ನೂರು ಕೋಟಿ ಗಳಿಕೆ ಮಾಡಿ ದಾಖಲೆ ನಿರ್ಮಾಣ ಮಾಡಿದೆ.ಇದು ಒಂದು ದಿನದ ಕಲೆಕ್ಷನ್ ಆದರೆ ಈ ಚಿತ್ರದ ಆಡಿಯೋ ರೈಟ್ಸ್ ಎಪ್ಪತ್ತೆರಡು ಕೋಟಿಗೆ ಮಾರಾಟವಾಗಿದೆ. ಅದೇ ರೀತಿಯಾಗಿ ಪಂಚಭಾಷೆಯ ಸ್ಯಾಟ್ ಲೈಟ್ ರೈಟ್ಸ್ ಎಂಭತ್ತು ಕೋಟಿಗೆ ಬಿಕರಿಯಾಗಿದೆ.

ಒಟ್ಟಾರೆಯಾಗಿ ಕೆಜಿಎಫ್ 2 ಚಿತ್ರ ಬರೋಬ್ಬರಿ ಮುನ್ನೂರೈವತ್ತು ಕೋಟಿ ಗಳಿಕೆ ಮಾಡಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ. ಒಟ್ಟಾರೆಯಾಗಿ ಸಿನಿ ಪಂಡಿತರು ಹೇಳುವ ಪ್ರಕಾರ ಕೆಜಿಎಫ್ ಚಾಪ್ಟರ್ 2 ಸಿನಿಮಾ ಎರಡು ವಾರದಲ್ಲಿ ಬರೋಬ್ಬರಿ ಒಂದು ಸಾವಿರ ಕೋಟಿ ಗಡಿ ದಾಟಿದರೆ ನಿಜಕ್ಕೂ ಕೂಡ ಇದೊಂದು ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ಮೈಲಿಗಲ್ಲು ಎಂದು ಹೇಳಬಹುದಾಗಿದೆ. ಏನೇ ಆಗ್ಲಿ ಕನ್ನಡದ ಸಿನಿಮಾ ವೊಂದು ಇಡೀ ವಿಶ್ವವೇ ಅಚ್ಚರಿಯಿಂದ ನಿಬ್ಬೆರಗಣ್ಣಿನಿಂದ ತನ್ನತ್ತ ನೋಡುವಂತೆ ಮಾಡಿದ ಕೆಜಿಎಫ್ 2 ಚಿತ್ರ ಕನ್ನಡ ಭಾಷೆಯ ಹಿರಿಮೆಯನ್ನು ದೇಶದ ಗಡಿಯಾಚೆ ಪಸರಿಸಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ಸರಿ.

Leave a Reply

%d bloggers like this: