25 ಕೋಟಿ ಬಜೆಟ್ ಹಾಕಿ 105 ಕೋಟಿ ಗಳಿಕೆ ಮಾಡಿದ ರಶ್ಮಿಕಾ ಅವರ ಹೊಸ ಚಿತ್ರ, ಬಾಲಿವುಡ್ ಸ್ಟಾರ್ ನಟಿಯಿಂದ ಸಿಕ್ತು

ಕೇವಲ ಇಪ್ಪತ್ತೈದು ಕೋಟಿ ಹಾಕಿ ಸಿನಿಮಾ ಮಾಡಿ ನೂರಾ ಐದು ಕೋಟಿ ಗಳಿಕೆ ಮಾಡಿದ ರಶ್ಮಿಕಾ ಅವರ ಹೊಸ ಚಿತ್ರ, ಬಾಲಿವುಡ್ ಸ್ಟಾರ್ ನಟಿಯಿಂದ ಸಿಕ್ತು ಹೊಗಳಿಕೆ. ಇತ್ತೀಚೆಗೆ ಕೆಲವು ದಿನಗಳ ಹಿಂದೆಯಷ್ಟೇ ಬಾಲಿವುಡ್ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಬ್ರಹ್ಮಾಸ್ತ್ರ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಅವರ ಜೊತೆಗೆ ಬಿಗ್ ಬಿ ಅಮಿತಾಬ್ ಬಚ್ಚನ್, ಮೌನಿರಾಯ್ ಸೇರಿದಂತೆ ದಿಗ್ಗಜ ಕಲಾವಿದರು ಅಭಿನಯಿಸಿದ್ದರು. ಬ್ರಹ್ಮಾಸ್ತ್ರ ಸಿನಿಮಾ ಸಾಧಾರಣ ಮೆಚ್ಚುಗೆ ಪಡೆದರು ಕೂಡ ಬಾಕ್ಸ್ ಅಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಮಾಡುತ್ತಲೂ ಇದೆ. ಆದರೆ ಈ ಬ್ರಹ್ಮಾಸ್ತ್ರ ಸಿನಿಮಾದ ಬಗ್ಗೆ, ಚಿತ್ರದ ಕಲೆಕ್ಷನ್ ಬಗ್ಗೆ ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಕಂಗನಾ ರಣಾವತ್ ಅವರು ಅನುಮಾನ ವ್ಯಕ್ತಪಡಿಸಿ ಚಿತ್ರದ ಬಗ್ಗೆ ಟೀಕೆ ಮಾಡಿ ಪೋಸ್ಟ್ ಮಾಡಿದ್ರು.

ಇದು ವೈರಲ್ ಕೂಡ ಆಗಿತ್ತು. ಇದೀಗ ತೆಲುಗಿನ ಸೀತಾ ರಾಮಂ ಸಿನಿಮಾ ನೋಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸೀತಾ ರಾಮಂ ಸಿನಿಮಾದಲ್ಲಿ ದುಲ್ಖರ್ ಸಲ್ಮಾನ್, ಮೃಣಾಲ್ ಠಾಕೂರ್ ಮತ್ತು ವಿಶೇಷ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದಾರೆ. 1960ರ ದಶಕದ ಕಾಶ್ಮೀರದಲ್ಲಿ ನಡೆಯುವಂತಹ ಪ್ರೇಮಕಥಾವನ್ನ ಈ ಚಿತ್ರದಲ್ಲಿ ಎಣೆಯಲಾಗಿದೆ. ಭಾರತೀಯ ಸೇನೆಯ ಲೆಫ್ಟಿನೆಂಟ್ ಆಫೀಸರ್ ಪಾತ್ರದಲ್ಲಿ ದುಲ್ಖರ್ ಸಲ್ಮಾನ್ ಕಾಣಿಸಿಕೊಂಡರೆ, ಕಥಾ ನಾಯಕಿಯಾಗಿ ಮೃಣಾಲ್ ಠಾಕೂರ್ ಕಾಣಿಸಿಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಮುಸ್ಲಿಂ ಸಮುದಾಯದ ಆಪ್ರೀನ್ ಎಂಬ ಹೆಣ್ಣು ಮಗಳ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇದೀಗ ಈ ಸುಂದರ ಪ್ರೇಮ ಕಾವ್ಯ ಸೀತಾರಾಮಂ ಸಿನಿಮಾವನ್ನ ನೋಡಿ ನಟಿ ಕಂಗನಾ ರಣಾವತ್ ನನಗೆ ಈ ಚಿತ್ರ ನೋಡಲು ಸಮಯ ಸಿಕ್ತು.

ಎಂತಹ ಅದ್ಭುತ ಅನುಭವ. ಅಸಾಧಾರಣ ಚಿತ್ರಕಥೆ ಮತ್ತು ನಿರ್ದೇಶನ. ನಿರ್ದೇಶಕ ಹನು ರಾಘವಪುಡಿ ಅವರಿಗೆ ಕಂಗ್ರಾಟ್ಸ್ ಎಂದು ಮೆಚ್ಚುಗೆ ತಿಳಿಸಿದ್ದಾರೆ. ಹಾಗೆಯೇ ಚಿತ್ರದಲ್ಲಿ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಅದರಲ್ಲೂ ಮೃಣಾಲ್ ಠಾಕೂರ್ ಅವರ ಅಭಿನಯ ತುಂಬ ಇಷ್ಟವಾಯಿತು. ಉತ್ತಮ ಸಿನಿಮಾ ಮಾಡಿದ್ದೀರಿ. ನನಗೆ ಸೀತಾ ರಾಮಂ ಸಿನಿಮಾ ಒಂದು ಅದ್ಭುತ ಅನುಭವ ನೀಡಿತು ಎಂದು ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಇನ್ನು ಸೀತಾ ರಾಮಂ ಸಿನಿಮಾ ಬರೋಬ್ಬರಿ ನೂರು ಕೋಟಿ ಕಲೆಕ್ಷನ್ ಮಾಡೋ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಸದ್ಯಕ್ಕೆ ಬ್ರಹ್ಮಾಸ್ತ್ರ ಸಿನಿಮಾ ತೆಗಳಿ ಸುದ್ದಿಯಾಗಿದ್ದ ನಟಿ ಕಂಗನಾ ರಣಾವತ್ ಸೀತಾರಾಮಂ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸೋ ಮುಖಾಂತರ ಮತ್ತೆ ಸುದ್ದಿಯಾಗಿದ್ದಾರೆ.

Leave a Reply

%d bloggers like this: