22,000 ರೂ ಗೆ ಹಳೆಯ ATM ಖರೀದಿಸಿದ ಯುವಕರು, ATM ಲಾಕರ್ ನಲ್ಲಿ ಹಣ ನೋಡಿ ಖುಷಿಯಲ್ಲಿ ಕಿರುಚಾಡಿದ ಯುವಕರು

ಜಗತ್ತಿನಲ್ಲಿ ಅನೇಕ ವಿಚಿತ್ರ,ವಿಸ್ಮಯಕಾರಿ ಸಂಗತಿ,ಸನ್ನಿವೇಶಗಳು ನಡೆಯುತ್ತಲೇ ಇರುತ್ತವೆ.ಅದರಲ್ಲಿ ಕೆಲವು ನಮ್ಮನ್ನು ಅಚ್ಚರಿಗೆ ಒಳಪಡಿಸಿದರೆ,ಇನ್ನೂ ಕೆಲವು ನಮ್ಮ ಉತ್ತಮ ಮಾಹಿತಿಯನ್ನು ನೀಡುವುದರ ಜೊತೆಗೆ ಮನರಂಜನೆಯ ನೀಡುವುದಾಗಿರುತ್ತದೆ.ಅಂತೆಯೇ ಇತ್ತೀಚೆಗೆ ಹೊರ ದೇಶದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಮೂವರು ಯುವಕರು ಮಾರಾಟಕ್ಕೆ ಇದ್ದಂತಹ ಹಳೆಯ ಎಟಿಎಂ ಮಶೀನ್ ಅನ್ನು ಎಲ್ಲರೂ ಕೂಡಿ 22,000 ರೂ.ಗಳಿಗೆ ಖರೀದಿ ಮಾಡಿದ್ದಾರೆ.ಆದರೆ ಮಾಲೀಕ ಈ ಹಳೆಯ ಎಟಿಎಂ ಮಶೀನ್ ಅನ್ನು ಮಾರಬೇಕಾದಾಗ ಅದರ ಲಾಕರ್ ಕೀ ಅನ್ನು ಕಳೆದುಕೊಂಡಿರುತ್ತಾನೆ.ಇನ್ನು ಸರಿ ಪರವಾಗಿಲ್ಲ ಅಂತ ಹೇಳಿ ಈ ಯುವಕರು ಈ ಎಟಿಎಂ ಮಶೀನ್ ಅನ್ನು ತಮ್ಮ ರೂಮಿಗೆ ತಂದು ಮಶೀನಿನ ಡೋರ್ ಓಪನ್ ಮಾಡಲು ಕೆಲವು ಉಪಕರಣಗಳನ್ನು ಬಳಸುತ್ತಾರೆ.

ಈ ಲಾಕರ್ ಓಪನ್ ಮಾಡುವಾಗ ಒಬ್ಬ ಗೆಳೆಯನೊಬ್ಬ ಕ್ಯಾಮರಾದಲ್ಲಿ ವೀಡಿಯೋ ಮಾಡಿಕೊಳ್ಳುತ್ತಿರುತ್ತಾನೆ.ಹೀಗೆ ಕೆಲವು ಯಂತ್ರೋಪಕರಣಗಳನ್ನು ಬಳಸಿ ಎಟಿಎಂ ಲಾಕರ್ ಓಪನ್ ಮಾಡಿದಾಗ ಯುವಕರಿಗೆ ಅಚ್ಚರಿಯೊಂದು ಎದುರಾಗುತ್ತದೆ.ಅದೇನೆಂದರೆ ಆ ಲಾಕರ್ ನಲ್ಲಿ ಲಕ್ಷಕ್ಕೂ ಹೆಚ್ಚು ರೂ. ಇರುತ್ತದೆ.ಹಣ ನೋಡಿದ ಇವರು ಲಾಕರ್ ಬಾಕ್ಸ್ ನಿಂದ ಹಣ ತೆಗೆಯಲು ಪ್ರಯತ್ನಿಸುತ್ತಾರೆ.ನಿಧಾನವಾಗಿ ನೋಟುಗಳು ಹರಿಯದಂತೆ ಹಣ ತೆಗೆಯುತ್ತಾರೆ.ಎಲ್ಲ ಮುಗಿದ ಬಳಿಕ ಗೆಳೆಯರೆಲ್ಲರು ಈ ಒಟ್ಟು ಹಣವನ್ನೂ ಕೌಂಟ್ ಮಾಡಲು ಶುರು ಮಾಡುತ್ತಾರೆ.

ಅದರಲ್ಲಿ ಬರೋಬ್ಬರಿ ಒಂದೂವರೆ ಲಕ್ಷಕ್ಕೂ ಅಧಿಕ ಹಣ ಸಿಕ್ಕ ಖುಷಿಯಲ್ಲಿ ಈ ಮೂವರು ಗೆಳೆಯರು ಕುಣಿದು ಕುಪ್ಪಳಿಸಿದ್ದಾರೆ.ಕೇವಲ 22,000 ರೂ ಗೆ ಕೊಂಡ ಹಳೆಯ ಎಟಿಎಂ ಮಿಶಿನ್ ಲಕ್ಷಾಂತರ ರೂ.ಗಳನ್ನು ನೀಡುತ್ತದೆ ಎಂದು ಅವರು ಕನಸಿನಲ್ಲಿಯೂ ಊಹಿಸಿರಲಿಲ್ಲವೇನೋ.ಒಟ್ಟಾರೆಯಾಗಿ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮತ್ತಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.