20ರ ಹುಡುಗನಂತೆ ಜಿಗಿದು ಕಾರು ಹತ್ತಿ ಕುಳಿತ ಶಿವಣ್ಣ, ವಿಡಿಯೋ ವೈರಲ್

ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇದೀಗ ಬಾರಿ ಸುದ್ದಿಯಾಗಿದ್ದಾರೆ. ಹಾಗಂತ ಯಾವುದೇ ಹೊಸ ಸಿನಿಮಾದ ಮೂಲಕ ಸುದ್ದಿಯಾಗುತ್ತಿಲ್ಲ. ಸಿನಿಮಾ ಒಪ್ಪಿಕೊಳ್ಳೋದು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋದು ಶಿವಣ್ಣ ಅವರಿಗೆ ಹೊಸದೇನಲ್ಲ. ಕನ್ನಡ ಚಿತ್ರರಂಗದಲ್ಲಿ ವರ್ಷಪೂರ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಏಕೈಕ ನಟ ಅಂದರು ಅದು ಒನ್ ಅಂಡ್ ಓನ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಶಿವಣ್ಣ ಅವರು ನಟಿಸಿದ ಬೈರಾಗಿ ಚಿತ್ರ ಕೆಲವು ದಿನಗಳಿಂದೆಯಷ್ಟೇ ಗ್ರ್ಯಾಂಡ್ ಆಗಿ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ಜೊತೆಗೆ ಶಿವಣ್ಣ ಅರವತ್ತನೇ ಜನ್ಮದಿನಾಚರಣೆಯನ್ನು ಕೂಡ ಆಚರಿಸಿಕೊಂಡಿದ್ದಾರೆ. ಶಿವಣ್ಣ ಅವರನ್ನ ಅವರ ಎನರ್ಜಿ ನೋಡಿದರೆ ಅರವತ್ತು ವರ್ಷದವರಂತೆ ಕಾಣುವುದಿಲ್ಲ.

ಸದಾ ಹುಮ್ಮಸ್ಸಿನ ಚೈತನ್ಯದಲ್ಲಿ ಇರುವ ಶಿವಣ್ಣ ಇಂದಿನ ಯುವ ಪೀಳಿಗೆಯ ನಟ ನಟಿಯರು ನಾಚುವಂತೆ ಡ್ಯಾನ್ಸ್, ಫೈಟ್ಸ್ ಮಾಡುತ್ತಾ ಸದಾ ಲವಲವಿಕೆಯಿಂದ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಶಿವಣ್ಣ ಅವರು ಚಿತ್ರರಂಗಕ್ಕೆ ಬರುವ ಎಲ್ಲಾ ಹೊಸ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಅವರ ಸಿನಿಮಾಗಳಿಗೆ ಪ್ರಚಾರ ಕಾರ್ಯಗಳಲ್ಲಿ ಕೂಡ ಭಾಗವಹಿಸುತ್ತಾರೆ. ಅದೇ ರೀತಿಯಾಗಿ ಶಿವಣ್ಣ ಅವರನ್ನ ಕಂಡರೆ ಇಡೀ ಚಿತ್ರರಂಗ ಕೂಡ ಪ್ರೀತಿಯಿಂದ ಕಾಣುತ್ತದೆ. ಶಿವಣ್ಣ ಸಿನಿಮಾಗಳ ನಡುವೆ ಬಿಡುವಿದ್ದಾಗ ಆದಷ್ಟು ತಮ್ಮ ಕುಟುಂಬದ ಜೊತೆಗೆ ಕಾಲ ಕಳೆಯುತ್ತಾರೆ. ಇತ್ತೀಚೆಗೆ ಅಪ್ಪು ಅವರು ಅನುಪಸ್ಥಿತಿ ಇರುವಾಗ ಮೈಸೂರಿನಲ್ಲಿ ಇರುವ ಶಕ್ತಿಧಾಮ ಮಕ್ಕಳ ಜೊತೆ ತಮ್ಮ ಅಮೂಲ್ಯವಾದ ಸಮಯವನ್ನು ಕಳೆಯುತ್ತಾರೆ.

ಹೀಗೆ ಶೂಟಿಂಗ್ ಇಲ್ಲದೆ ಬಿಡುವಿದ್ದ ಶಿವಣ್ಣ ಅವರು ಮೊನ್ನೆ ತಮ್ಮ ಮನೆ ಮುಂಭಾಗದಲ್ಲಿ ನಿಂತಿದ್ದ ಕಾರ್ ಮೇಲ್ ಸಿನಿಮಾ ಶೈಲಿಯಲ್ಲಿ ಓಡಿಬಂದು ಎಗರಿ ಬಂದು ಕುಳಿತು ಸ್ಮೈಲ್ ಕೊಟ್ಟು ಪೋಸ್ ಮಾಡಿದ್ದಾರೆ. ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಶಿವಣ್ಣ ಅವರು ಕಾರ್ ಮೇಲ್ ಟಗರಿನಂತೆ ಎಗರಿ ಕೂರುವ ಈ ವೀಡಿಯೋ ಕಂಡು ಅಭಿಮಾನಿಗಳು ನಿಮಗೆ ವಯಸ್ಸು ಕೇವಲ ನಂಬರ್ ಅಷ್ಟೇ. ನಿಮ್ಮ ಮುಂದೆ ಯಾರು ಇಲ್ಲ. ಹ್ಯಾಟ್ರಿಕ್ ಹೀರೋ ಶಿವಣ್ಣ ಶಿವಣ್ಣ ಒಬ್ಬರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿವಣ್ಣ ಅಂದ್ರೆ ಎನರ್ಜಿ, ಉತ್ಸಾಹ, ಸ್ಪೂರ್ತಿ ಅನ್ನೋದಕ್ಕೆ ಈ ರೀತಿಯ ಅವರ ಲವಲವಿಕೆಯ ವ್ಯಕ್ತಿತ್ವವೇ ಕಾರಣ ಅಂತ ಹೇಳ್ಬೋದು. ನಿಜಕ್ಕೂ ಕೂಡ ಶಿವಣ್ಣ ಅವರು ಕನ್ನಡ ಚಿತ್ರರಂಗದ ಎವರ್ಗೀನ್ ಎನರ್ಜಿಟಿಕ್ ಹೀರೋ ಅಂದರೆ ಅತಿಶಯೋಕ್ತಿಯಾಗಲಾರದು.

Leave a Reply

%d bloggers like this: