200 ಕೋಟಿ ಕ್ಲಬ್ ಸೇರಿದ ಕಾಂತಾರ ಚಿತ್ರ

ಅಂತೂ ಇಂತು ಕನ್ನಡದ ಮತ್ತೊಂದು ಗೋಲ್ಡನ್ ಸಿನಿಮಾ ಆಗಿದೆ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ. ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದ ಕಾಂತಾರ ಸಿನಿಮಾ ಇಂದು ವರ್ಲ್ಡ್ ವೈಡ್ ಅಪಾರ ಜನ ಮೆಚ್ಚುಗೆ ಪಡೆದು ರಿಲೀಸ್ ಆದ ಎಲ್ಲಾ ಭಾಷೆಗಳಲ್ಲಿ, ಎಲ್ಲಾ ಥಿಯೇಟರ್ ಗಳಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಕೆಳೆದ ಸೆಪ್ಟೆಂಬರ್ 30ರಂದು ರಾಜ್ಯ ಮತ್ತು ದೇಶಾದ್ಯಂತ ಕನ್ನಡ ಭಾಷೆಯೊಂದರಲ್ಲಿ ರಿಲೀಸ್ ಆಗಿ ಸಿನಿ ಪ್ರೇಕ್ಷಕರ ಮನಗೆದ್ದಿತು. ಕಾಂತಾರ ಸಿನಿಮಾ ನೋಡಿದ ಪ್ರತಿಯೊಬ್ಬರು ಅಂದರೆ ಭಾಷೆಯ ಅಂಗಿಲ್ಲದೆ ಎಲ್ಲಾರು ಕೂಡ ಅಪಾರ ಮೆಚ್ಚುಗೆ. ಅದರಲ್ಲಿಯೂ ರಿಷಬ್ ಶೆಟ್ಟಿ ಪಂಜುರ್ಲಿ ದೈವದ ರೂಪದಲ್ಲಿ ಜೀವಿಸಿರುವಂತೆ ನಟನೆ ಮಾಡಿರೋದಕ್ಕೆ.

ಇಡೀ ಪ್ರೇಕ್ಷಕ ವರ್ಗ ರಿಷಬ್ ಶೆಟ್ಟಿ ಅವರಿಗೆ ಪ್ರಶಂಸೆಯ ಸುರಿಮಳೆಗೈದಿತ್ತು. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಕೇವಲ ಹದಿನೈದು ಕೋಟಿ ವೆಚ್ಚದಲ್ಲಿ ತಯಾರಾದ ಕಾಂತಾರ ಸಿನಿಮಾ ಇಂದು ಕನ್ನಡ ಭಾಷೆಯೊಂದರಲ್ಲಿ ಬರೋಬ್ಬರಿ ನೂರು ಕೋಟಿ ಕಲೆಕ್ಷನ್ ಮಾಡಿ ದಾಖಲೆ ಮಾಡಿದೆ. ಕಳೆದ ವಾರವಷ್ಟೇ ಪರಭಾಷೆಯ ಸಿನಿ ಪ್ರೆಕ್ಷಕರ ಅಪೇಕ್ಷೆಯಂತೆ ಕಾಂತಾರ ಸಿನಿಮಾ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಿ ಭಾರತೀಯ ಚಿತ್ರರಂಗದ ಬಾಕ್ಸ್ ಅಫೀಸ್ ನಲ್ಲಿ ಬರೋಬ್ಬರಿ ಇನ್ನೂರು ಕೋಟಿ ಕಲೆಕ್ಷನ್ ಮಾಡಿ ಇದೀಗ ಕೆಜಿಎಫ್ ಸಿನಿಮಾದ ನಂತರ ಕನ್ನಡದ ಮತ್ತೊಂದು ಗೋಲ್ಡನ್ ಸಿನಿಮಾವಾಗಿ ಹೊರ ಹೊಮ್ಮಿದೆ. ಕಾಂತಾರ ಸಿನಿಮಾ ಇಂದು ಈ ಮಟ್ಟಿಗೆ ಯಶಸ್ವಿಯಾಗಿರುವುದಕ್ಕೆ ಪ್ರಮುಕ ಕಾರಣ ಅಂದರೆ ಚಿತ್ರದ ಕೊನೆಯ ಹದಿನೈದು ನಿಮಿಷಗಳಲ್ಲಿ.

ಬರುವ ಪಂಜುರ್ಲಿ ದೈವದ ಭೂತಕೋಲ ಸಂಸ್ಕೃತಿ ಆಚರಣೆ ಅದರ ವೈಶಿಷ್ಟ್ಯತೆ ಎಂದು ಹೇಳಬಹುದು. ಕರಾವಳಿ ಭಾಗದ ಜನರ ಆರಾಧ್ಯ ದೈವ ಅಲ್ಲಿನ ಕಾಡಿನ ಜನರ ಬದುಕು ಬವಣೆ ಸಂಸ್ಕೃತಿ ಆಚರಣೆಗಳನ್ನ ಬಹಳ ಅಚ್ಚುಕಟ್ಟಾಗಿ ನಿರ್ದೇಶಕ ರಿಷಬ್ ಶೆಟ್ಟಿ ತೆರೆ ಮೇಲೆ ತಂದು ನಮ್ಮ ನಾಡಿನ ಕರಾವಳಿ ಸಂಸ್ಕೃತಿಯನ್ನ ಇಡೀ ಜಗತ್ತಿನಾದ್ಯಂತ ಪಸರಿಸಲ್ಲಿಕ್ಕೆ ಕಾರಣವಾಗಿದ್ದಾರೆ. ಒಟ್ಟಾರೆಯಾಗಿ ಕಾಂತಾರ ಸಿನಿಮಾದಲ್ಲಿ ಶಿವನಾಗಿ ರಿಷಬ್ ಶೆಟ್ಟಿ, ಲೀಲಾಳಾಗಿ ಸಪ್ತಮಿಗೌಡ, ಅರಣ್ಯಾಧಿಕಾರಿಯಾಗಿ ಕಿಶೋರ್, ಊರಿನ ಗೌಡನ ಪಾತ್ರದಲ್ಲಿ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್ ಸೇರಿದಂತೆ ಎಲ್ಲಾ ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ.

Leave a Reply

%d bloggers like this: