20 ವರ್ಷ ವಯಸ್ಸಿಗೆ ದೇವದತ್ ಪಡಿಕಲ್ ಸಂಪಾದಿಸಿದ ಆಸ್ತಿ ಎಷ್ಟು ಕೋಟಿ ಗೊತ್ತಾ

ಇತ್ತೀಚೆಗೆ ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ತನ್ನ ಅದ್ಭುತ ಪ್ರದರ್ಶನ,ವಿಶಿಷ್ಟ ರೀತಿಯ ಬ್ಯಾಟಿಂಗ್ ಮೂಲಕ ಗಮನ ಸೆಳೆದು ಕ್ರಿಕೆಟ್ ಪ್ರೇಮಿಗಳನ್ನು ತನ್ನತ್ತ ಸೆಳೆದ ಈ ಹ್ಯಾಂಡ್ಸಮ್ ಕ್ರಿಕೆಟಿಗ ಅತ್ಯಂತ ಕಡಿಮೆ ಅವಧಿಯಲ್ಲಿ ತನ್ನ ಕೇವಲ ಇಪ್ಪತ್ತಿನ ವಯಸ್ಸಿನಲ್ಲಿಯೇ ಕೋಟ್ಯಾಂತರ ರೂ ಗಳ ಒಡೆಯರಾಗಿದ್ದಾರೆ.ಈ ಯವ ಉತ್ಸಾಹಿ ಕ್ರಿಕೆಟಿಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ನಂತರ ಅತಿ ಹೆಚ್ಚು ಫೀಮೆಲ್ ಫ್ಯಾನ್ಸ್ ಪಡೆದ ಕ್ರಿಕೆಟಿಗ ಎಂದು ಕರೆಯಬಹುದಾಗಿರುತ್ತದೆ.ಹಾಗಾದರೆ ಯಾರು ಈ ಯುವ ಉತ್ಸಾಹಿ ಕ್ರಿಕೆಟಿಗ ಅಂತೀರಾ,ಕೆ.ಎಲ್.ರಾಹುಲ್ ಅಂತೆಯೇ ಕರ್ನಾಟಕದ ಮತ್ತೊಬ್ಬ ಭರವಸೆಯ ಕ್ರಿಕೆಟಿಗನಾಗಿ ಗುರುತಿಸಿಕೊಳ್ಳುತ್ತಿರುವ ದೇವದತ್ ಪಡಿಕ್ಕಲ್.ಇವರು ಕರ್ನಾಟಕದ ಹೆಮ್ಮೆಯ ಆಟಗಾರ. ಕ್ರಿಕೆಟ್ ಭಾರತ ದ 19 ವರ್ಷದೊಳಗಿನವರ ಪಂದ್ಯದಲ್ಲಿ ಭಾಗವಹಿಸಿರುವ ದೇವದತ್ ಪಡಿಕ್ಕಲ್ ಕರ್ನಾಟಕ ರಾಜ್ಯದ ಒಂದಷ್ಟು ಪ್ರತಿಷ್ಟಿತ ಕ್ರಿಕೆಟ್ ಪಂದ್ಯಗಳ ಜೊತೆಗೆ ದೇಶಿಯ ಕ್ರಿಕೆಟ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಆಟವಾಡಿದ್ದಾರೆ. ದೇವತದ್ ಪಡಿಕ್ಕಲ್ ಅವರು ಕೇರಳ ಎಟಪ್ಪಾಲ್ ನಲ್ಲಿ 2000 ನೇ ಇಸವಿ ಜುಲೈ 7 ರಂದು ಜನನ ಪಡೆಯುತ್ತಾರೆ.

ಪಡಿಕ್ಕಲ್ ಅವರಿಗೆ 11 ನೇ ವಯಸ್ಸಿರುವಾಗ ಇವರ ಕುಟುಂಬ ಹೈದರಾಬಾದ್ ನಿಂದ ಕರ್ನಾಟಕಕ್ಕೆ ಬರುತ್ತಾರೆ.2011 ರಲ್ಲಿ ಬೆಂಗಳೂರಿಗೆ ಬಂದ ಪಡಿಕ್ಕಲ್ ರಾಜಧಾನಿಯಲ್ಲಿರುವ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ ನಲ್ಲಿ ಟ್ರೈನಿಂಗ್ ಪಡೆದುಕೊಳ್ಳುತ್ತಾರೆ.ತದ ನಂತರ 2014 ರಿಂದ 20 16 ರವರೆಗೆ 19 ವರ್ಷದೊಳಗಿನವರ ಕ್ರಿಕೆಟ್ ಪಂದ್ಯಗಳಲ್ಲಿ ದೇವದತ್ ಪಡಿಕ್ಕಲ್ ಭಾಗವಹಿಸಿ ಉತ್ತಮ ಪ್ರದರ್ಶನ ತೋರುತ್ತಾರೆ.ಇವರ ಬ್ಯಾಟಿಂಗ್ ಆಟದ ವೈಖರಿ ಕಂಡ ಬಳ್ಳಾರಿ ಟಸ್ಕರ್ಸ್ ತಂಡ 2017 ರಲ್ಲಿ ಕರ್ನಾಟಕ ಪ್ರೀಮಿಯಲ್ ಲೀಗ್ ಕ್ರಿಕೆಟ್ ನಲ್ಲಿ ಖರೀದಿ ಮಾಡುತ್ತದೆ.ಹೀಗೆ ಒಂದೊಂದೆ ಸ್ಥಳೀಯ ಕ್ರಿಕೆಟ್ ಪಂದ್ಯಗಳಲ್ಲಿ ತೊಡಗಿಕೊಂಡ ದೇವದತ್ ಪಡಿಕ್ಕಲ್ ಅವರು 2018-19 ರ ಸಾಲಿನ ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಟವಾಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಾವಳಿಗೆ ಪಡಿಕ್ಕಲ್ ಪ್ರವೇಶ ಪಡೆಯುತ್ತಾರೆ.ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಪರ ಆಟವಾಡಿದ ದೇವದತ್ ಪಡಿಕ್ಕಲ್ ಉತ್ತಮ ಪ್ರದರ್ಶನ ತೋರುತ್ತಾರೆ.

ಇವರ ಪ್ರತಿಭಾ ಸಾಮರ್ಥ್ಯದಿಂದಾಗಿ ಅವರು 2018 ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಡಿಕ್ಕಲ್ ಅವರನ್ನ ತನ್ನ ತಂಡಕ್ಕೆ ಪಡೆದುಕೊಳ್ಳುತ್ತಾರೆ.ಇದರ ನಡುವೆ 2019 ರಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕದ ಪರ ಆಟವಾಡಿ ಆಡಿದ 11 ಪಂದ್ಯದಲ್ಲಿ 609 ರನ್ ಕಲೆ ಹಾಕುವ ಮೂಲಕ ಪ್ರಾದೇಶಿಕ ಕ್ರಿಕೆಟ್ ಲೀಗ್ ಗಳಲ್ಲಿ ಹೆಸರುವಾಸಿಯಾಗುತ್ತಾರೆ.ಇತ್ತೀಚಗೆ ಕಳೆದ ವರ್ಷ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ರಾಜ್ಯದ ಪರ ಪ್ರತಿನಿಧಿಸಿದ್ದರು.14 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಅಮೋಘ ಪ್ರದರ್ಶನ ತೋರಿದ ಈ ಯಂಗ್ ಅಂಡ್ ಎನರ್ಜಿಟಿಕ್ ಆಟಗಾರರಾದ ದೇವದತ್ ಪಡಿಕ್ಕಲ್ ಪ್ರತಿ ಸೀಸನ್ ಗೆ ಸುಮಾರು ಇಪ್ಪತ್ತು ಲಕ್ಷ ಸಂಭಾವನೆ ಪಡೆದಿದ್ದಾರೆ.ಸದ್ಯಕ್ಕೆ ಈ ಇಪ್ಪತ್ತು ವರ್ಷದ ದೇವದತ್ ಪಡಿಕ್ಕಲ್ ಅವರು ಸ್ವತಂತ್ರವಾಗಿ ಸರಿ ಸುಮಾರು ಇಪ್ಪತ್ತು ಕೋಟಿಯ ಆಸ್ತಿ ಮೌಲ್ಯಕ್ಕೆ ಒಡೆಯರಾಗಿದ್ದಾರೆ.

Leave a Reply

%d bloggers like this: