2 ತಿಂಗಳಾದ್ರು ಅಪ್ಪು ನಿಧನರಾದ ದುಃಖದ ವಿಚಾರ ಈ ಒಬ್ಬರಿಗೆ ಮಾತ್ರ ಇಂದಿಗೂ ತಿಳಿದೇ ಇಲ್ಲ.. ನೋಡಿ ಒಮ್ಮೆ

ಅಪ್ಪು ನಿಧನರಾದ ದುಃಖದ ವಿಚಾರ ಇಂದಿಗೂ ಕೂಡ ಇವರೊಬ್ಬರಿಗೆ ತಿಳಿದೇ ಇಲ್ಲ. ಇಂದಿಗೂ ಕೂಡ ಇವರು ಪುನೀತ್ ರಾಜ್ ಕುಮಾರ್ ಬದುಕಿದ್ದಾರೆ ಅಂತಾನೇ ತಿಳಿದುಕೊಂಡಿದ್ದಾರಂತೆ. ಹೌದು ಕನ್ನಡ ನಾಡಿನ ಅಪ್ಪು ನಮ್ಮನ್ನಗಲಿ ಮೂರು ತಿಂಗಳ ಸನಿಹವಾಗುತ್ತಿದೆ. ಅವರು ನಮ್ಮೊಂದಿಗೆ ಇಲ್ಲ ಎಂಬುದನ್ನ ಅರಗಿಸಿಕೊಳ್ಳಲು ಇಂದಿಗೂ ಕೂಡ ಸಾಧ್ಯವಾಗುತ್ತಿಲ್ಲ. ಅಭಿಮಾನಿಗಳ ಪಾಲಿನ ಅಪ್ಪು ಪರಮಾತ್ಮ ಪುನೀತ್ ರಾಜ್ ಕುಮಾರ್ ಅವರು ಸದಾ ನಗುಮುಖದಿಂದ ಇರುತ್ತಿದ್ದರು. ಅವರ ನಿಶ್ಕಲ್ಮಶ ನಗು, ಬಂದವರನ್ನ ಹೃದಯಕ್ಕೆ ಹತ್ತಿರವಾಗಿ ಆಲಂಗಿಸಿ ಸ್ವಾಗತಿಸುತ್ತಿದ್ದ ಅವರ ಗುಣ ಎಂತವರನ್ನು ಕೂಡ ಒಮ್ಮೆ ಹೃದಯ ತುಂಬಿ ಮಾತನಾಡುವಂತೆ ಮಾಡುತ್ತಿತ್ತು. ತಾನು ಅಷ್ಟು ದೊಡ್ಡ ಸೂಪರ್ ಸ್ಟಾರ್ ನಟನಾಗಿದ್ದರು ಕೂಡ ಅತ್ಯಂತ ಸರಳತೆಯಲ್ಲಿ ಸರಳ ಬದುಕನ್ನ ಸಾಗಿಸುತ್ತಿದ್ದರು.

ದೇವಾಲಯಕ್ಕೆ ಚಿಕ್ಕ ಗಡಿಯಾರ ನೀಡಿ ಉಡುಗೊರೆ ಎಂದು ತಮ್ಮ ಹೆಸರನ್ನ ಹಾಕಿಸಿಕೊಳ್ಳುವ ಅಲ್ಪ ಜನರ ನಡುವೆ ತಾನು ದುಡಿದು ಬಂದಂತಹ ಆದಾಯದಲ್ಲಿ ಶೇಕಡಾ ಇಂತಿಷ್ಟು ಕೋಟ್ಯಾಂತರ ಹಣವನ್ನು ಸಮಾಜಸೇವೆಗೆ ಮುಡಿಪಾಗಿಟ್ಟಿದ್ದ ಅಪ್ಪು ಅವರು ನಿಜಕ್ಕೂ ಕೂಡ ದೇವರಂತೆ ಕಾಣಿಸಿಕೊಳ್ಳುತ್ತಿರುವುದು ಅತಿಶಯೋಕ್ತಿ ಅಲ್ಲ. ಅವರು ಮಾಡಿದಂತಹ ದಾನ ಧರ್ಮ ಮಾನವೀಯ, ಸಾಮಾಜಿಕ ಕಳಕಳಿಯ ಕಾರ್ಯಗಳು ನಿಜಕ್ಕೂ ಎಂತಹವರನ್ನು ಕೂಡ ಒಮ್ಮೆಲೆ ದಿಗ್ಬ್ರಮೆ ಗೊಳಿಸುತ್ತದೆ. ಯಾಕೆಂದರೆ ಪುನೀತ್ ರಾಜ್ ಕುಮಾರ್ ಅವರು ತಾವು ಮಾಡಿದಂತಹ ಸಹಾಯ, ಸಾಮಾಜಿಕ ಸೇವೆಗಳನ್ನು ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ.

ಶರಣರ ಗುಣ ಮರಣದಲ್ಲಿ ಎನ್ನುವಂತೆ ಪುನೀತ್ ರಾಜ್ ಕುಮಾರ್ ಅವರು ಮಾಡಿದಂತಹ ಸಾಧನೆ ಸಾಮಾಜಿಕ ಕಾರ್ಯಗಳು ಅವರನ್ನ ಅಜಾರಾಮರರನ್ನಾಗಿ ಉಳಿಸಿದೆ. ಅಪ್ಪು ಅವರು ನಮ್ಮನ್ನಗಲಿ ಮೂರು ತಿಂಗಳ ಸಮೀಪವಾಗುತ್ತಿದೆ. ಅವರ ಪುಣ್ಯ ಭೂಮಿ ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ವಾರಾಂತ್ಯದಲ್ಲಿ ಸಾವಿರಾರು ಮಂದಿ ಸಕುಟುಂಬ ಸಮೇತರಾಗಿ ಬರುತ್ತಿದ್ದಾರೆ. ವಿಶೇಷ ಅಂದರೆ ಹೊರ ದೇಶದಿಂದಾನೂ ಕೂಡ ಅಭಿಮಾನಿಗಳು ಅಪ್ಪು ಅವರ ಪುಣ್ಯ ಭೂಮಿ ದರ್ಶನ ಮಾಡಲು ಬರುತ್ತಿದ್ದಾರೆ.ಇದೆಲ್ಲದರ ನಡುವೆ ನೋವಿನ ಸಂಗತಿ ಅಂದರೆ ಪುನೀತ್ ರಾಜ್ ಕುಮಾರ್ ಅವರ ಅಜ್ಜಿ ನಾಗಮ್ಮ ಅವರಿಗೆ ಪುನೀತ್ ರಾಜ್ ಕುಮಾರ್ ಅವರು ನಿಧನರಾಗಿರುವ ಸುದ್ದಿ ತಿಳಿದೇ ಇಲ್ಲ.

ಇಂದಿಗೂ ಕೂಡ ಅವರು ಅಪ್ಪು ಅವರು ಇದ್ದಾರೆ ಎಂದು ಜೀವಿಸುತ್ತಿದ್ದಾರೆ. ರಾಜ್ ಕುಮಾರ್ ಅವರ ಸೋದರಿಯಾಗಿರುವ ನಾಗಮ್ಮ ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅಪ್ಪು ಅವರ ನಿಧನದ ಸುದ್ದಿಯನ್ನ ಅವರಿಗೆ ತಿಳಿಸಿಲ್ಲ. ಅಪ್ಪು ಅವರನ್ನ ಕಂಡರೆ ಅಪಾರ ಪ್ರೀತಿಸುತ್ತಿದ್ದ ನಾಗಮ್ಮ ಅವರಿಗೆ ಅಪ್ಪು ಅವರು ಇನ್ನಿಲ್ಲ ಎಂಬುದನ್ನ ತಿಳಿದರೆ ಅವರ ಆರೋಗ್ಯದಲ್ಲಿ ಏರು ಪೇರಾಗಬಹುದು ಎಂದು ಕುಟುಂಬಸ್ಥರು ಈ ದುರಂತದ ವಿಚಾರವನ್ನು ಅವರಿಗೆ ತಿಳಿಸಿಲ್ಲ. ಪುನೀತ್ ರಾಜ್ ಕುಮಾರ್ ಅವರಿಗೆ ತಮ್ಮ ತಂದೆ ರಾಜ್ ಅವರ ಹುಟ್ಟೂರು ಅಂದರೆ ಪಂಚಪ್ರಾಣ. ಬಿಡುವಿದ್ದಾಗಲೆಲ್ಲಾ ಇಲ್ಲಿ ಬಂದು ಕಾಲ ಕಳೆಯುತ್ತಿದ್ದರು.

ಇಲ್ಲಿ ತಮ್ಮ ಪೂರ್ವಜರ ಮನೆ ನವೀಕರಣ ಮಾಡಿಸಿ ಮ್ಯೂಸಿಯಂ ಮಾಡಬೇಕು ಎಂಬ ಕನಸು ಹೊಂದಿದ್ದರು. ಆದರೆ ದುರಂತ ಅವರೆಲ್ಲಾ ಕನಸುಗಳನ್ನ ಕನಸಾಗೇ ಉಳಿಸಿಬಿಟ್ಟಿತು ವಿಧಿ. ಒಟ್ಟಾರೆಯಾಗಿ ಅಪ್ಪು ಅವರು ನಮ್ಮಿಂದ ದೈಹಿಕವಾಗಿ ದೂರ ಆಗಿದ್ದರು ಕೂಡ ಅವರು ಕರ್ನಾಟಕ ರತ್ನರಾಗಿ ಅಜರಾಮರರಾಗಿ ಕರುನಾಡಿನಲ್ಲಿ ಶಾಶ್ವತರಾಗಿ ಉಳಿದುಕೊಂಡಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.