2 ಐಷಾರಾಮಿ ಕಾರುಗಳನ್ನು ಖರೀದಿಸಿದ ಮೇಘ ಶೆಟ್ಟಿ! ಹಣವೆಷ್ಟು ಗೊತ್ತಾ? ಇಷ್ಟೊಂದು ಹಣ ಎಲ್ಲಿಂದ ಬರತ್ತೆ

ನಮಸ್ಕಾರ ಸ್ನೇಹಿತರೆ ಕನ್ನಡ ಧಾರಾವಾಹಿಯ ಖ್ಯಾತ ನಟಿ ಮೇಘ ಶೆಟ್ಟಿ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ಕನ್ನಡ ಕಿರುತೆರೆಯಲ್ಲೇ ಹೊಸ ಅಲೆಯನ್ನು ಸೃಷ್ಟಿಸದ ಧಾರವಾಹಿ ಎಂದರೆ ಅದು ಜೊತೆಜೊತೆಯಲಿ ಧಾರವಾಹಿ.ಕನ್ನಡ ಕಿರುತೆರೆಯಲ್ಲಿ ನಟಿಸುವ ಕಲಾವಿದರಿಗೆ ಹೇಳಿಕೊಳ್ಳುವಂತಹ ಸಂಭಾವನೆ ನೀಡುವುದಿಲ್ಲ.ಅವರಿಗೆ ನೀಡುವ ಸಂಭಾವನೆ ಯಾವುದಕ್ಕು ದಕ್ಕುವುದಿಲ್ಲ ಎಂಬ ಮಾತೊಂದಿತ್ತು.ಆದರೆ ಇದೀಗ ಕಿರುತೆರೆ ನಟ-ನಟಿಯರು ಯಾವ ಸಿನಿಮಾ ಸ್ಟಾರ್ಸ್ ಗಳಿಗೂ ಕೂಡ ಕಡಿಮೆಯಿಲ್ಲ.ಅದೂ ಜನಪ್ರಿಯತೆ ಮತ್ತು ಸಂಭಾವನೆ ವಿಚಾರದಲ್ಲಿ ಸಿನಿಮಾ ಕಲಾವಿದರಿಗಿಂತ ಕಿರುತೆರೆ ಧಾರಾವಾಹಿ ಕಲಾವಿದರೇ ಹೆಚ್ಚು ಮನೆ ಮಾತಾಗಿರುತ್ತಾರೆ.ಕೊಂಚ ಧಾರಾವಾಹಿಗಳು ಜನ ಮೆಚ್ಚುಗೆ ಪಡೆದು ಟಿ.ಆರ್.ಪಿ ರೇಟಿಂಗ್ ನಲ್ಲಿ ಉತ್ತಮವಾದರೆ ಏಕಾಏಕಿಯಾಗಿ ಆ ಧಾರಾವಾಹಿಯ ಕಲಾವಿದರ ಸಂಭಾವನೆ ಗಗನಕ್ಕೇರುತ್ತದೆ.ಅತ್ಯಂತ ಕಡಿಮೆ ಅವಧಿಯಲ್ಲಿ ಜನಪ್ರಿಯತೆಯ ಜೊತೆಗೆ ಲಕ್ಷಾಂತರ ರೂ.ಗಳ ಸಂಭಾವನೆ ಸಿಗುತ್ತದೆ.

ಅಂತೆಯೇ ಕನ್ನಡ ಕಿರುತೆರೆಯ ಜನಪ್ರಿಯ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ನಂಬರ್ ಒನ್ ಧಾರಾವಾಹಿಯಾಗಿ ಮೂಡಿ ಬರುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ನಾಡಿನಾದ್ಯಂತ ಅಪಾರ ಜನ ಮೆಚ್ಚುಗೆ ಪಡೆದು ಈ ಸೀರಿಯಲ್ ನ ಬಹುತೇಕ ಕಲಾವಿದರು ಮನೆ ಮಾತಾಗಿದ್ದಾರೆ.ಅಂತೆಯೇ ಅನು ಸಿರಿಮನೆ ಪಾತ್ರದಲ್ಲಿ ನಟಿಸುವ ನಟಿ ಮೇಘಾ ಶೆಟ್ಟಿ ಎಲ್ಲರ ಮನೆ ಮಗಳಾಗಿದ್ದಾರೆ.ಇವರ ಜನಪ್ರಿಯತೆ ಯಾವ ಸ್ಟಾರ್ ನಟಿಗೂ ಕಡಿಮೆಯಿಲ್ಲ ಎಂಬಷ್ಟಿದೆ.ಅಂತೆಯೇ ಇವರ ಸಂಭಾವನೆ ಕೂಡ ದೊಡ್ಡ ಮೊತ್ತದಲ್ಲೇ ಇದೆ.ಹೀಗಾಗಿ ನಟಿ ಮೇಘಾಶೆಟ್ಟಿ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ.ಕೋಟಿ ಬೆಲೆ ಬಾಳುವಂತಹ ಎರಡು ಐಷಾರಾಮಿ ಕಾರುಗಳನ್ನು ಖರೀದಿ ಮಾಡಿದ್ದಾರೆ.

ಹೌದು ನಟಿ ಮೇಘಾ ಶೆಟ್ಟಿ ಬರೋಬ್ಬರಿ ಐವತ್ತು ಲಕ್ಷ .ರೂ.ಬೆಲೆಯ ನೀಲಿ ಬಣ್ಣದ ಬಿಎಂಡ್ಬ್ಲ್ಯೂ ಕಾರು ಮತ್ತು ಇಪ್ಪತ್ನಾಲ್ಕು ಲಕ್ಷ ಬೆಲೆಯ ಕಪ್ಪು ಬಣ್ಣದ ಎಂ.ಜಿ.ಹೆಕ್ಟೆರ್ ಐಷಾರಾಮಿ ಕಾರನ್ನು ಖರೀದಿ ಮಾಡಿದ್ದಾರೆ.ಈ ಮೂಲಕ ನಟಿ ಮೇಘಾಶೆಟ್ಟಿ ಅವರು ಎರಡು ಐಷಾರಾಮಿ ಕಾರಿನ ಒಡತಿಯಾಗಿದ್ದಾರೆ.ಸದ್ಯಕ್ಕೆ ನಟಿ ಮೇಘಾ ಶೆಟ್ಟಿ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.