1951 ರ ಕನ್ನಡದ ಮೊದಲ ಹರರ್ ಸಿನೆಮಾ! ಈ ಸಿನೆಮಾಗೆ ಈಗಲೂ ತುಂಬಾ ಕ್ರೇಜ್ ಇದೆ

ಸಾಕಷ್ಟು ಜನರಿಗೆ ಕನ್ನಡದ ಮೊಟ್ಟಮೊದಲ ಹಾರರ್ ಸಿನಿಮಾ ಯಾವುದು ಎಂದು ಗೊತ್ತಿಲ್ಲ. ಜೊತೆಗೆ ಆ ಸಿನಿಮಾ ಏನೆಲ್ಲ ವಿಶೇಷತೆ ಹೊಂದಿತ್ತು ಎಂಬುದಾಗಿಯೂ ಗೊತ್ತಿಲ್ಲ. ಆ ಚಿತ್ರದ ನಿರ್ದೇಶಕ ಯಾರು ಎಂಬುದು ಗೊತ್ತಿಲ್ಲ. ಹೌದು ಅದರ ಸಂಪೂರ್ಣ ಮಾಹಿತಿ ಇದೆ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ. ಐವತ್ತರ ದಶಕದಲ್ಲಿ ಕನ್ನಡ ಸಿನಿಮಾರಂಗದಲ್ಲಿ ಯಾವ ರೀತಿ ಸಿನಿಮಾಗಳು ಮೂಡಿಬರುತ್ತಿದ್ದವು, ಮತ್ತು ಪ್ರೇಕ್ಷಕರನ್ನು ಯಾವ ರೀತಿ ತನ್ನತ್ತ ಸೆಳೆದಿದ್ದವು ಗೊತ್ತಾ.? ಹೌದು ಅಂದಿನ ಕಾಲದಲ್ಲಿ ವಿಭಿನ್ನವಾಗಿ ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿತ್ತು. ಕನ್ನಡ ಸಿನಿಮಾಗಳನ್ನ ಅಂದಿನ ಕಾಲದಲ್ಲಿಯೇ ಬೇರೆ ಭಾಷೆಗಳಿಗೆ ರಿಮೇಕ್ ಮಾಡಲಾಗುತ್ತಿತ್ತು. ಅಷ್ಟು ದೊಡ್ಡ ಮಟ್ಟದಲ್ಲಿ ನಮ್ಮ ಕನ್ನಡ ಸಿನಿಮಾರಂಗ ಸುವರ್ಣಯುಗ ಎಂದೇ ಅಂದು ಕರೆಸಿಕೊಂಡಿತ್ತು. ಐವತ್ತರ ದಶಕದಲ್ಲಿ ಕನ್ನಡ ಸಿನಿಮಾರಂಗ ತುಂಬಾ ಸಿನಿಮಾಗಳನ್ನು ನಿರ್ಮಿಸಿ ಪ್ರೇಕ್ಷಕರಿಗೆ ಉಣಬಡಿಸಿದತ್ತು.

1951 ರಲ್ಲಿ ಮೊದಲ ಕನ್ನಡದ ಹಾರರ್ ಸಿನಿಮಾ ಬಿಡುಗಡೆಯಾಗಿದ್ದು, ಈ ಸಿನಿಮಾ ನೋಡಲು ಅಂದಿನ ಕಾಲದ ಯುವಕರು, ಹಾಗೂ ನಾಗರಿಕರು ಊರಿನ ಜನರು ಅವರ ಬಳಿ ಇರುತ್ತಿದ್ದ ಸ್ಕೂಟರ್, ಎತ್ತಿನ ಬಂಡಿ, ಕುರಿ-ಮೇಕೆ ಎಲ್ಲವನ್ನು ಮಾರಿ ಅದರ ದುಡ್ಡಿನಿಂದ ಸಿನಿಮಾ ವೀಕ್ಷಣೆ ಮಾಡುತ್ತಿದ್ದರಂತೆ. ಕನ್ನಡದ ಮೊಟ್ಟಮೊದಲ ಹಾರರ್ ಸಿನಿಮಾ ಜಗನ್ಮೋಹಿನಿ. ಈ ಹಾರರ್ ಕಥೆಯ ಸಿನಿಮಾ ನೋಡಿ ಕೆಲವು ಕಡೆ ಸಾವುಗಳು ಕೂಡ ಸಂಭವಿಸಿದವು ಎಂಬುದಾಗಿ ಅಂದಿನ ದಿನಗಳಲ್ಲಿ ವರದಿಯಾಗಿ ದೊಡ್ಡ ಹೆಚ್ಚು ಚರ್ಚೆಯಾಗಿತ್ತು. ಈ ಜಗನ್ಮೋಹಿನಿ ಚಿತ್ರವು ದಾವಣಗೆರೆಯಲ್ಲಿ ಒಟ್ಟು 36 ವಾರಗಳ ಕಾಲ ಭರ್ಜರಿ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಚಿತ್ರಕ್ಕೆ ಪಿ. ಶ್ಯಾಮಣ್ಣ ಅವರು ಸಂಗೀತ ನಿರ್ದೇಶನ ನೀಡಿದ್ದಾರೆ. ಶಂಕರ್. ಡಿ. ಸಿಂಗ್ ಅವರು ಜಗನ್ಮೋಹಿನಿ ಸಿನಿಮಾ ನಿರ್ಮಾಣ ಮಾಡುವುದಲ್ಲದೆ ನಿರ್ದೇಶನ ಕೂಡ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗಲೂ ಕೂಡ ಈ ಸಿನಿಮಾ ತುಂಬಾ ಕ್ರೇಜ್ ಇದೆಯಂತೆ.

ನಟಿ ಹರಿಣಿ ನಾಯಕಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಎಂ. ಎಸ್. ಸುಬ್ಬಣ್ಣ, ಎಂ ಜಯಶ್ರೀ, ಪ್ರತಿಮಾದೇವಿ, ಶ್ರೀನಿವಾಸರಾವ್, ಹೀಗೆ ಮುಂತಾದ ಇನ್ನೂ ಅನೇಕ ಕಲಾವಿದರು ಅಭಿನಯ ಮಾಡಿದ್ದರು. ಈ ಚಿತ್ರದಲ್ಲಿ ನಟಿ ಹರಿಣಿ ಅವರು ಕಥ ನಾಯಕಿಯಾಗಿ ಅಭಿನಯ ಮಾಡಿದ್ದರು. ಇವರದೇ ಆದ ಬೋಲ್ಡ್ ಅಭಿನಯದ ಮೂಲಕ ಎಲ್ಲರ ಹಾರ್ಟ್ ಬೀಟ್ ಜಾಸ್ತಿಯಾಗುವಂತೆ ಹಿಂದಿನ ಕಾಲದಲ್ಲಿ ಈ ಚಿತ್ರದ ಮೂಲಕ ಮಾಡಿದ್ದರು. ಹೌದು ಹರಿಣಿಯವರ ಈ ಸಿನಿಮಾದಲ್ಲಿ ಸ್ಪಿಂಬೊಟ್ ಡ್ರೆಸ್ಸನ್ನು ಧರಿಸಿದ್ದು ನಟಿ ನೋಡುಗರ ಕಣ್ಣಿಗೆ ಕುಕ್ಕುವಂತೆ ಅಭಿನಯ ಮಾಡಿದ್ದರು. ಕೇಬಲ ಇವರಿಗೆ ಆಗ 16 ವರ್ಷ ವಯಸ್ಸು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದ್ದ ಕಾರಣ ಅಷ್ಟು ಅತ್ಯದ್ಭುತವಾಗಿ ಸಿನಿಮಾ ಚಿತ್ರೀಕರಣ ಮಾಡಲಾಗಿತ್ತು. ಈ ಜಗನ್ಮೋಹಿನಿ ಚಿತ್ರವನ್ನು ಹಿರಿಯ ನಿರ್ದೇಶಕ ಡಾ. ರಾಜೇಂದ್ರ ಸಿಂಗ್ ಬಾಬು ಅವರ ತಂದೆ ಶಂಕರ್. ಡಿ. ಸಿಂಗ್ ಅವರು ನಿರ್ದೇಶನ ಮಾಡಿದ್ದರು.