1951 ರ ಕನ್ನಡದ ಮೊದಲ ಹರರ್ ಸಿನೆಮಾ! ಈ ಸಿನೆಮಾಗೆ ಈಗಲೂ ತುಂಬಾ ಕ್ರೇಜ್ ಇದೆ

ಕನ್ನಡದ ಈ ಚಿತ್ರ ನೋಡಲು 50 ರ ದಶಕದಲ್ಲಿ ಸಿನಿ ಪ್ರಿಯರು ತಮ್ಮ ನಗರದ ಯುವಕರು ಸೈಕಲ್,ಸ್ಕೂಟರ್,ಗ್ರಾಮೀಣ ಭಾಗದ ಯುವಕರು ಕುರಿ ಮೇಕೆ ಎತ್ತು ಗಾಡಿಗಳನ್ನೇ ಮಾರಿದ್ದರಂತೆ..! ಕನ್ನಡ ಚಿತ್ರರಂಗ ಒಂದು ಕಾಲದಲ್ಲಿ ಸುವರ್ಣಯುಗ ಅಂತಾನೇ ಕರೆಯಬಹುದಾಗಿತ್ತು. ಅಂದಿನ ಕಾಲದಲ್ಲಿ ತಯಾರಾಗುತ್ತಿದ್ದ ಕನ್ನಡ ಸಿನಿಮಾಗಳನ್ನು ಪರಭಾಷೆಯವರು ರಿಮೇಕ್ ಮಾಡುತ್ತಿದ್ದರು. ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿ ಕೂಡ ಆಗುತ್ತಿದ್ದ ಕಾಲದಲ್ಲಿ ಮೊಟ್ಟ ಮೊದಲ ಬಾರಿಗೆ ಹಾರರ್ ಕಥೆಯನ್ನಾಧರಿತ ಸಿನಿಮಾ ಆಲೋಚನೆ ಶುರುವಾಗಿದ್ದು 1951 ರಲ್ಲಿ.1951 ರಲ್ಲಿ ತೆರೆಕಂಡ ಜಗನ್ಮೋಹಿನಿ ಎಂಬ ಈ ಚಿತ್ರ ಕನ್ನಡದ ಮೊಟ್ಟ ಕನ್ನಡದ ಮೊದಲ ಹಾರರ್ ಸಿನಿಮಾ.ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು,ಕನ್ನಡದ ಹಿರಿಯ ನಿರ್ದೇಶಕರಾದ ಡಿ‌.ರಾಜೇಂದ್ರ ಸಿಂಗ್ ಬಾಬು ಅವರ ತಂದೆ ಶಂಕರ್ ಡಿ.ಸಿಂಗ್.

ಈ ಸಿನಿಮಾದಲ್ಲಿ ನಟಿ ಹರಿಣಿ ಮೊಟ್ಟ ಮೊದಲ ಬಾರಿಗೆ ಸ್ವಿಮ್ ಸೂಟ್ ಹಾಕಿದ್ದು ಎಲ್ಲರ ಕಣ್ಮನ ಸೆಳೆದಿತ್ತು.ಈ ಜಗನ್ಮೋಹಿನಿ ಚಿತ್ರದಲ್ಲಿ ನಟಿಸಿದಾಗ ಹರಿಣಿ ಅವರಿಗೆ ಕೇವಲ 14 ವರ್ಷ ವಯಸ್ಸಾಗಿತ್ತು.ಅದು ಹರಿಣಿ ಅವರ ಬೋಲ್ಡ್ ಪಾತ್ರ ಪಡ್ಡೆ ಹುಡುಗರ ನಿದ್ದೆಗೆಡಿಸಿತ್ತು.ನಟಿ ಹರಿಣಿ ನೋಡಲೆಂದೇ ಯುವ ಸಿನಿ ಪ್ರೇಕ್ಷಕರು ಈ ಚಿತ್ರವನ್ನು 25 ಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಿದ್ದರಂತೆ. ಅಷ್ಟರ ಮಟ್ಟಿಗೆ ಈ ಚಿತ್ರದ ಕ್ರೇಜ಼್ ಉಂಟಾಗಿತ್ತು. ಈ ಜಗನ್ಮೋಹಿನಿ ಚಿತ್ರ ಭರ್ಜರಿ ಯಶಸ್ಸು ಗಳಿಸಲು ಕನ್ನಡದ ಮೊದಲ ಹಾರರ್ ಸಿನಿಮಾ ಎಂಬುದು ಒಂದೆಡೆಯಾದರೆ ನಟಿ ಹರಿಣಿ ಸ್ವಿಮ್ಮಿಂಗ್ ಸೂಟ್ ನಲ್ಲಿ ಕಾಣಿಸಿಕೊಂಡಿದ್ದು ಮತ್ತೊಂದು ಕಾರಣವಾಗಿತ್ತು.

ಈ ಹಾರರ್ ಕಥೆ ಸಿನಿಮಾ ನೋಡಿ ಕೆಲವಡೆ ಸಾವು ಕೂಡ ಸಂಭವಿಸಿತ್ತು ಎಂದು ಅಂದಿನ ದಿನಗಳಲ್ಲಿ ವರದಿಯಾಗಿತ್ತು.ಈ ಜಗನ್ಮೋಹಿನಿ ಚಿತ್ರ ದಾವಣಗೆರೆಯಲ್ಲಿ ಬರೋಬ್ಬರಿ 36 ವಾರಗಳ ಕಾಲ ಅಮೋಘ ಪ್ರದರ್ಶನ ಕಂಡಿತ್ತು. ಈ ಚಿತ್ರಕ್ಕೆ ಪಿ.ಶ್ಯಾಮಣ್ಣ ಸಂಗೀತ ನಿರ್ದೇಶನ ಮಾಡಿದರೆ,ಶಂಕರ್ ಡಿ. ಸಿಂಗ್ ಅವರು ನಿರ್ದೇಶನ ಮಾಡುವುದರ ಜೊತೆಗೆ ಬಂಡವಾಳವನ್ನು ಕೂಡ ಹೂಡಿದ್ದರು.ಈ ಚಿತ್ರದಲ್ಲಿ ಹರಿಣಿ ಕಥಾನಾಯಕಿ ಆಗಿ ನಟಿಸಿದ್ದರು.ಇವರ ಜೊತೆಗೆ ಮಹಾಬಲ ರಾವ್, ಎಂ.ಎಸ್.ಸುಬ್ಬಣ್ಣ, ಎಂ.ಜಯಶ್ರೀ,ಶ್ರೀನಿವಾಸ್ ರಾವ್,ಪ್ರತಿಮಾ ದೇವಿ ಮುಂತಾದವರು ನಟಿಸಿದ್ದರು. ಈ ನಮ್ಮ ಲೇಖನ ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ.

Leave a Reply

%d bloggers like this: