1800 ಅನಾಥ ಮಕ್ಕಳಿರುವ ಅಪ್ಪು ಶಾಲೆಯಲ್ಲಿ ವ್ಯವಸ್ಥೆ ಹೇಗಿದೆ ಗೊತ್ತಾ? ಎಲ್ಲರು ತಿಳಿದುಕೊಳ್ಳಬೇಕಾದ ಸುದ್ದಿ

ಪುನೀತ್ ರಾಜ್ ಕುಮಾರ್ ಅವರು ನಿರ್ವಹಿಸಿಕೊಂಡು ಬರುತ್ತಿದ್ದಂತಹ ಶಕ್ತಿಧಾಮ ಯಾವ ಖಾಸಗಿ ಶಾಲೆಯ ಸೌಕರ್ಯಗಳಿಗೂ ಕಡಿಮೆ ಇಲ್ಲ…! ಕನ್ನಡ ಚಿತ್ರರಂಗದ ಧೃವತಾರೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಮೂರು ತಿಂಗಳಾಗುತ್ತಿವೆ. ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ನಾಡಿನ ಪ್ರತಿಯೊಬ್ಬರಿಗೂ ಆಘಾತವಾಗಿದೆ. ಅಪ್ಪು ನಮ್ಮನ್ನ ದೈಹಿಕವಾಗಿ ಅಗಲಿದರು ಕೂಡ ಮಾನಸಿಕವಾಗಿ ಸದಾ ಮನದಲ್ಲಿ ಇರುತ್ತಾರೆ. ಏಕೆಂದರೆ ಪುನೀತ್ ರಾಜ್ ಕುಮಾರ್ ಅವರು ಕೇವಲ ನಟರಾಗಿ ಮಾತ್ರ ಜನರ ಮನಸ್ಸು ಗೆದ್ದಿಲ್ಲ. ಅದರ ಹೊರತಾಗಿ ಒಬ್ಬ ಮಾನವತಾವಾದಿಯಾಗಿ ಸಾಮಾಜಿಕ ಕಳಕಳಿ ಹೊಂದಿರುವ ಒಬ್ಬ ದೇವತಾ ಮನುಷ್ಯನಾಗಿ ಬದುಕಿ ಬಾಳಿ ಆದರ್ಶವಾಗಿದ್ದರು.

ಪುನೀತ್ ರಾಜ್ ಕುಮಾರ್ ಅವರು ಆದಷ್ಟು ಸಾಮಾಜಿಕ ಮೌಲ್ಯಗಳನ್ನೊಂದಿರುವ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಾಮಾಜಿಕ ಸಿನಿಮಾಗಳಲ್ಲಿ ನಟಿಸುತ್ತಿದ್ದರು‌. ಅಪ್ಪು ನಟಿಸಿದ ಸಿನಿಮಾಗಳು ಕೌಟುಂಬಿಕ ಪ್ರಧಾನ ಚಿತ್ರಗಳಾಗಿದ್ದಾವೆ. ಹಾಗಾಗಿಯೇ ಪುನೀತ್ ರಾಜ್ ಕುಮಾರ್ ಅವರ ಸಿನಿಮಾಗಳು ಅಂದರೆ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೂ ಕೂಡ ಬಹಳ ಅಚ್ಚು ಮೆಚ್ಚು. ಪುನೀತ್ ಅವರು ತಮ್ಮ ಸಿನಿಮಾಗಳ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಕೂಡ ಮಾಡುತ್ತಾ ಬರುತ್ತಿದ್ದರು. ಆದರೆ ಈ ಬಗ್ಗೆ ಎಲ್ಲಿಯೂ ಕೂಡ ಅಪ್ಪು ಅವರು ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿರಲಿಲ್ಲ.

ಆದರೆ ಯಾವಾಗ ಪುನೀತ್ ರಾಜ್ ಕುಮಾರ್ ಅವರು ನಿಧನರಾದ ಸುದ್ದಿ ತಿಳಿದ ನಂತರ ಅವರು ಮಾಡಿದಂತಹ ಎಷ್ಟೋ ಮಾನವೀಯ, ಸಾಮಾಜಿಕ ಕಾರ್ಯಗಳು ಒಂದೊಂದಾಗಿ ಹೊರ ಬಂದವು‌. ಪುನೀತ್ ರಾಜ್ ಕುಮಾರ್ ತಮ್ಮ ತಂದೆಯಂತೆ ತಾವು ಮಾಡಿದಂತಹ ದಾನ ಧರ್ಮಗಳು, ಒಳ್ಳೆ ಕೆಲಸ ಕಾರ್ಯಗಳು ಎಡಗೈಯಲ್ಲಿ ಕೊಟ್ಟಿದ್ದು, ಬಲಗೈಗೆ ಗೊತ್ತಾಗಬಾರದು ಎಂಬಂತಹ ಆದರ್ಶವನ್ನು ಮೈಗೂಡಿಸಿಕೊಂಡಿದ್ದರು. ಹಾಗಾಗಿಯೇ ಅವರು ಮಾಡಿದಂತಹ ಎಷ್ಟೋ ಸಹಾಯ ಕಾರ್ಯಗಳನ್ನ ಪ್ರಚಾರ ಮಾಡಿಕೊಳ್ಳಲಿಲ್ಲ. ಆದರೆ ಶರಣರ ಗುಣ ಮರಣದಲ್ಲಿ ಅನ್ನುವಂತೆ ನಟ ಪುನೀತ್ ರಾಜ್ ಕುಮಾರ್ ಅವರು ಅಕಾಲಿಕ ಮರಣ ಹೊಂದಿದ ನಂತರ ಅವರು ಮಾಡಿದಂತಹ ಮಹಾತ್ಕಾರ್ಯಗಳು ಸಾಗರದ ಅಲೆಗಳಂತೆ ಹೊರ ಬಂದವು.

ಅದೂ ಕೂಡ ಅಪ್ಪು ಅವರು ಮಾಡಿದ ಸೇವಾ ಕಾರ್ಯಗಳು ಸಾಮಾನ್ಯವಾದುದ್ದಲ್ಲ. ಬರೋಬ್ಬರಿ 1800 ಮಕ್ಕಳ ವಿಧ್ಯಾಭ್ಯಾಸ, ಗೋಶಾಲೆ, ಶಕ್ತಿಧಾಮ ಹೆಸರಿನಲ್ಲಿ ನಡೆಸುತ್ತಿರುವ ಆಶ್ರಮ ಇದರ ಜೊತೆಗೆ ಅಸಹಾಯಕರಿಗೆ ಆ ಅರ್ಥಿಕ ಸಹಾಯಗಳು. ಈ ಶಕ್ತಿಧಾಮ ಕೇಂದ್ರ ಯಾವ ಮಟ್ಟಿಗೆ ಇದೆ ಅಂದರೆ ಪ್ರತಿಷ್ಟಿತ ಖಾಸಗಿ ಸಂಸ್ದೆಗಳು ನೀಡುವ ಮೂಲಭೂತ ಸೌಕರ್ಯಗಳಷ್ಟೇ ಅತ್ಯುದ್ಭುತವಾಗಿದೆ. ಹೌದು ಈ ಶಕ್ತಿಧಾಮ ಕೇಂದ್ರದಲ್ಲಿ ಅಸಹಾಯಕ ಮಹಿಳೆಯರಿಗೆ ವೃತ್ತಿ ಕೌಶಲ್ಯಗಳ ಬಗ್ಗೆ ತರಬೇತಿ ನೀಡಲಾಗುವಂತದ್ದು, ಇಲ್ಲಿನ ಮಕ್ಕಳಿಗೆ ಒಂದೇ ರೀತಿಯ ಸಮವಸ್ತ್ರ ನೀಡಿ ಸಮಾನತೆಯ ಭಾವ ಮೂಡಿಸುವಂತಹ ವಾತಾವರಣ ನಿರ್ಮಾಣ ಮಾಡಿಲಾಗಿದೆ.

ವಿಧ್ಯಾರ್ಥಿನಿಯರಿಗೆ ಓದಲು ಸುಸಜ್ಜಿತ ಗ್ರಂಥಾಲಯ, ಪ್ರತ್ಯೇಕವಾಗಿ ಮಲಗುವ ಕೋಣೆಗಳಿವೆ. ಇಡೀ ಶಕ್ತಿಧಾಮ ಕೇಂದ್ರ ಸಂಪೂರ್ಣವಾಗಿ ನೈಸರ್ಗಿಕದಾಮವಾಗಿ ನಿರ್ಮಾಣಗೊಂಡಿದೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಈ ನಮ್ಮ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: