18 ಕೋಟಿ ಬೆಲೆಯ ಮನೆ ಖರೀದಿ ವಿಚಾರ, ಟೀಕಿಸಿದವರಿಗೆ ಖಡಕ್ಕಾಗಿ ಉತ್ತರ ಕೊಟ್ಟ ಬಾಲಿವುಡ್ ನಿರ್ದೇಶಕ

ಭಾರತೀಯ ಚಿತ್ರರಂಗದಲ್ಲಿ ಸನ್ಷೇನಲ್ ಕ್ರಿಯೇಟ್ ಮಾಡಿ ಸಾರ್ವಜನಿಕವಾಗಿ ಚರ್ಚೆಗೆ ಒಳಪಟ್ಟ ಸಿನಿಮಾ ಅಂದರೆ ಅದು ಹಿಂದಿಯ ಕಾಶ್ಮೀರ್ ಫೈಲ್ಸ್. ಇತಿಹಾಸದ ಪುಟಗಳಲ್ಲಿ ಅವಿತು ಹೋಗಿದ್ದ ಕಾಶ್ಮೀರಿ ಪಂಡಿತರ ಮೇಲೆ ನಡೆದ ಅಮಾನವೀಯ ಕೃತ್ಯವನ್ನ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇ ಈ ಕಾಶ್ಮೀರ್ ಫೈಲ್ಸ್ ಸಿನಿಮಾ. ಈ ಸಿನಿಮಾ ಭಾರತದಲ್ಲಿ ಅಪಾರ ಜನಪ್ರಿಯತೆ ಪಡೆದು ಬಾಕ್ಸ್ ಆಫೀಸ್ ನಲ್ಲಿ ಭಾರಿ ಗಳಿಕೆ ಮಾಡಿತ್ತು. ಅದರ ಜೊತೆಗೆ ಪ್ರಮುಖವಾಗಿ ನಮ್ಮ ಭಾರತ ದೇಶದಲ್ಲಿ ಸಿನಿಮಾವೊಂದನ್ನ ನೋಡಿ ನಮಗೆ ಗೊತ್ತಿಲ್ಲದ ಸೂಕ್ಷ್ಮ ವಿಚಾರವೊಂದನ್ನ ಸಿನಿಮಾದಲ್ಲಿ ತಿಳಿಸಿದ್ದಾರೆ.

ಈ ಸಿನಿಮಾವನ್ನ ಪ್ರತಿಯೊಬ್ಬರು ನೋಡಲೇಬೇಕು ಎಂಬ ಅಭಿಯಾನವನ್ನ ಸಹ ಈ ಚಿತ್ರ ಮಾಡಿತು. ಈ ಕಾಶ್ಮೀರ್ ಫೈಲ್ಸ್ ಸಿನಿಮಾ ಎಷ್ಟು ಜನಪ್ರಿಯ ಅಯಿತು, ಅಷ್ಟೇ ಒಂದಷ್ಟು ಗೊಂದಲ ಚರ್ಚೆಗೆ ಸಹ ಆಸ್ಪದ ನೀಡಿತು. ಕೆಲವರು ಈ ಸಿನಿಮಾವನ್ನ ಟೀಕೆ ಮಾಡಿದರು. ಇದೆಲ್ಲದರ ಜೊತೆಗೆ ಈ ಚಿತ್ರದ ನಿರ್ದೇಶಕ ಅಗ್ನೀಹೋತ್ರಿ ಅವರು ಭಾರಿ ಸುದ್ದಿಯಾದರು. ಇತ್ತೀಚೆಗೆ ಮತ್ತೇ ಸುದ್ದಿಯಾಗಿದ್ದು ಅಂದರೆ ಅದು ನಿರ್ದೇಶಕ ಅಗ್ನಿಹೋತ್ರಿ ಅವರು ಕಾಶ್ಮೀರ್ ಫೈಲ್ಸ್ ಸಿನಿಮಾ ಆದ ನಂತರ ಬರೋಬ್ಬರಿ 17.90 ಕೋಟಿ ಮೌಲ್ಯದ ಐಷಾರಾಮಿ ಫ್ಲ್ಯಾಟ್ ಖರೀದಿ ಮಾಡಿದ್ದಾರೆ ಅನ್ನುವ ಸುದ್ದಿ ಪೋಸ್ಟ್ ಗಳ ಮೂಲಕ.

ಈ ವಿಚಾರವಾಗಿ ಇದೀಗ ನಿರ್ದೇಶಕ ಅಗ್ನಿಹೋತ್ರಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕಾಂಗ್ರೆಸ್, ಆಪ್ ಪಕ್ಷದ ಮತ್ತು ಬಾಲಿವುಡ್ ನಲ್ಲಿ ಇರೋ ಕೆಲವು ನಿರುದ್ಯೋಗಿಗಳು ನನಗಾಗಿ ಪಾಪ ಪ್ರತಿ ನಿತ್ಯ ಒಂದು ಅಪಾರ್ಟ್ ಮೆಂಟ್ ನಿರ್ಮಾಣ ಮಾಡುತ್ತಿದ್ದಾರೆ. ನನಗೆ ನೀಡಿರೋ ಪ್ಲ್ಯಾಟ್ ನಲ್ಲಿ ಕಾಸ್ಟ್ಲೀ ಫರ್ನಿಚರ್ ತಂದು ನನ್ನ ಮನೆಯನ್ನ ಸಿಂಗಾರ ಮಾಡುತ್ತಿದ್ದಾರೆ. ಅವರಿಗೆಲ್ಲಾ ನಾನು ಆಭಾರಿ ಆಗಿರುತ್ತೇನೆ ಎಂದು ತಮ್ಮ ವಿರುದ್ದ ಮತ್ತು ಇಲ್ಲ ಸಲ್ಲದ ಅನಗತ್ಯ ಸುದ್ದಿ ಪೋಸ್ಟ್ ಮಾಡುವವರಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನಿರ್ದೇಶಕ ಅಗ್ನಿಹೋತ್ರಿ ಅವರ ಈ ಒಂದು ಪೋಸ್ಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Leave a Reply

%d bloggers like this: