170 ಕೋಟಿ ವೆಚ್ಚದಲ್ಲಿ ಉಮಾಪತಿ ಮಾಡುತ್ತಿರುವ ಕೆಲಸ ನೋಡಿ ಇಡೀ ಕನ್ನಡ ಚಿತ್ರರಂಗವೇ ದಂಗಾಗಿದೆ

ಕಳೆದ ಐದಾರು ವರ್ಷಗಳಿಂದೀಚೆಗೆ ಕನ್ನಡ ಚಿತ್ರರಂಗದಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದೆ.ಅದು ಚಿತ್ರದ ಮೇಕಿಂಗ್ ಇಂದ ಹಿಡಿದು ಸಿನಿಮಾದ ತಾಂತ್ರಿಕತೆಯ ಗುಣಮಟ್ಟ, ಕಥೆಯ ಆಯ್ಕೆ, ಆಧುನಿಕತೆಯ ತಂತ್ರಜ್ಞಾನ ಹೀಗೆ ಎಲ್ಲಾ ವಿಭಾಗದಲ್ಲಿಯೂ ಕೂಡ ಕನ್ನಡ ಸಿನಿಮಾಗಳು ಅಪ್ ಡೇಟ್ ಆಗಿವೆ. ಅದರಂತೆ ಹೊಸ ಕಲಾವಿದರ ದಂಡೇ ಆಗಮನವಾಗಿದೆ.ರಃಗಭೂಮಿ ಹಿನ್ನೆಲೆರ ಅನೇಕ ಯುವ ಕಲಾವಿದರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ಹೊಸ ಹೊಸ ಬಗೆಯ ವಿಭಿನ್ನ ಸಿನಿಮಾಗಳ ಅಭಿರುಚಿ ಹೊಂದಿರುವ ಯುವ ಉತ್ಸಾಹಿ ನಿರ್ಮಾಪಕರು ಕೂಡ ಸ್ಯಾಂಡಲ್ ವುಡ್ ಗೆ ಪ್ರವೇಶ ಪಡೆದಿದ್ದಾರೆ. ಅಂತಹ ನಿರ್ಮಾಪಕರಲ್ಲಿ ಉಮಾಪತಿ ಶ್ರೀನಿವಾಸ್ ಗೌಡ ಕೂಡ ಒಬ್ಬರು. ಡಿ‌ ಸತ್ಯ ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬಂದ ಒಂದಲ್ಲಾ ಎರಡರಲ್ಲಾ ಚಿತ್ರದ ಮೂಲಕ ನಿರ್ಮಾಪಕರಾಗಿ ಚಂದನವನಕ್ಕೆ ಪ್ರವೇಶ ಪಡೆದ ನಿರ್ಮಾಪಕ ಉಮಾಪತಿ ತಮ್ಮ ಮೊದಲನೇ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗಳಿಸಿಕೊಂಡರು.

ತದ ನಂತರದಲ್ಲಿ ಸ್ಯಾಂಡಲ್ ವುಡ್ ಬಾದ್-ಶಾ ಕಿಚ್ಚ ಸುದೀಪ್ ಅವರೊಂದಿಗೆ ಹೆಬ್ಬುಲಿ ಎಂಬ ಬಿಗ್ ಬಜೆಟ್ ಸಿನಿಮಾ ಮಾಡುತ್ತಾರೆ.ಗಜಕೇಸರಿ ಎಂಬ ಸೂಪರ್ ಹಿಟ್ ಚಿತ್ರವನ್ನು ನಿರ್ದೇಶನಾ ಮಾಡಿದಂತಹ ಕೃಷ್ಣ ಅವರು ಈ ಹೆಬ್ಬುಲಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರೆ.ಈ ಹೆಬ್ಬುಲಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸೌಂಡ್ ಮಾಡಿತ್ತು. ಈ ಚಿತ್ರದ ಯಶಸ್ಸಿನ ಬಳಿಕ ಉಮಾಪತಿ ಶ್ರೀನಿವಾಸ್ ಗೌಡ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ರಾಬರ್ಟ್ ಎಂಬ ಬಿಗ್ ಬಜೆಟ್ ಸಿನಿಮಾವನ್ನು ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿಯೂ ಕೂಡ ರಿಲೀಸ್ ಮಾಡಿ ಯಶಸ್ವಿ ನಿರ್ಮಾಪಕರಾಗುತ್ತಾರೆ.

ಈ ಸಿನಿಮಾದ ಮೂಲಕ ನಟ ದರ್ಶನ್ ಅವರ ಆಪ್ತ ಬಳಗಕ್ಕೆ ಸೇರಿಕೊಂಡ ನಿರ್ಮಾಪಕ ಉಮಾಪತಿ ಅವರು ಇತ್ತೀಚೆಗೆ ಕೆಲವು ಹಣಕಾಸಿನ ವಿಚಾರಗಳಿಗೆ ಮನಸ್ತಾಪವಾಗಿ ಸದ್ಯಕ್ಕೆ ದೂರವಾಗಿದ್ದಾರೆ.ಇನ್ನು ಅಯೋಗ್ಯ ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮದಗಜ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಈ ಚಿತ್ರದಲ್ಲಿ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಮತ್ತು ನಟಿ ಆಶಿಕಾ ರಂಗನಾಥ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು ಕನ್ನಡ ಚಿತ್ರರಂಗಕ್ಕೆ ಫಿಲಂ ಸಿಟಿಯೊಂದನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ.ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಬರೋಬ್ಬರಿ ಇಪ್ಪತ್ತು ಎಕರೆ ವಿಸ್ತೀರ್ಣದಲ್ಲಿ ಸರಿ ಸುಮಾರು 175 ಕೋಟಿ.ರೂ.ವೆಚ್ಚದಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ.

Leave a Reply

%d bloggers like this: