13 ವರ್ಷಗಳ ಹಿಂದೆ 21,000 ಕೋಟಿ ಗಳಿಕೆ ಮಾಡಿದ್ದ ಚಿತ್ರ ಮತ್ತೆ ಬಿಡುಗಡೆ, ಈಗ ಮೂರು ದಿನದಲ್ಲಿ ಗಳಿಸಿದ್ದೆಷ್ಟು ಗೊತ್ತಾ

ದಶಕದ ಹಿಂದೆ ರಿಲೀಸ್ ಆಗಿ ವರ್ಲ್ಡ್ ಸಿನಿಮಾ ಬಾಕ್ಸ್ ಅಫೀಸ್ ನಲ್ಲಿ ಸಾವಿರಾರು ಕೋಟಿ ಕಲೆಕ್ಷನ್ ಮಾಡಿ ಸಾರ್ವಕಾಲಿಕ ದಾಖಲೆ ಮಾಡಿರೋ ಹಾಲಿವುಡ್ ಅವತಾರ್ ಸಿನಿಮಾ ಇದೀಗ ರೀ-ರಿಲೀಸ್ ಆಗಿ ಕೇವಲ ಮೂರೇ ದಿನದಲ್ಲಿ ಕೋಟಿ ಕೋಟಿ ಬಾಚಿ ಮತ್ತೆ ದಾಖಲೆ ಮಾಡಿದೆ. ಹೌದು ಹಾಲಿವುಡ್ ಅವತಾರ್ ಸಿನಿಮಾ 2009 ರಲ್ಲಿ ವರ್ಲ್ಡ್ ವೈಡ್ ರಿಲೀಸ್ ಆಗಿ ಬರೋಬ್ಬರಿ 2.85 ಬಿಲಿಯನ್ ಡಾಲರ್ ದಾಖಲೆಯ ಕಲೆಕ್ಷನ್ ಮಾಡಿತ್ತು, ಅಂದರೆ ಭಾರತೀಯ ರೂಪಾಯಿಯಲ್ಲಿ ಇದು 23 ಸಾವಿರ ಕೋಟಿ ರೂಪಾಯಿಗಳು. ಈ ಚಿತ್ರವನ್ನು ಜೇಮ್ಸ್ ಕೆಮರೂನ್ ನಿರ್ದೇಶನ ಮಾಡಿದ್ದರು. ಈ ಅವತಾರ್ ಸಿನಿಮಾ ರಿಲೀಸ್ ಆಗಿ ಸರಿ ಸುಮಾರು ಹದಿಮೂರು ವರ್ಷ ಮೇಲಾಗಿದೆ. ದಶಕದ ಹಿಂದೆಯೇ ಈ ಅವತಾರ್ ಸಿನಿಮಾದ ಟೆಕ್ನಾಲಜಿ ಕಂಡು ಇಡೀ ವಿಶ್ವದ ಚಿತ್ರರಂಗವೇ ಬೆಚ್ಚಿ ಬಿದ್ದಿತು.

ಇದೀಗ ಅತ್ಯಾಧುನಿಕ ತಂತ್ರಜ್ಞಾನ ಬೆಳೆದಿದೆ. ಹಾಗಾಗಿ ಈ ಆಧುನಿಕ ತಂತ್ರಜ್ಞಾನವನ್ನ ಬಳಸಿಕೊಂಡು ಅವತಾರ್ ಸಿನಿಮಾವನ್ನ ರೀ-ರಿಲೀಸ್ ಮಾಡಲಾಗಿದೆ. ಕಳೆದ ಸೆಪ್ಟೆಂಬರ್ 23ರಂದು ಅವತಾರ್ ಸಿನಿಮಾ ಪುನಃ ಮೂರನೇ ಬಾರಿಗೆ ರಿಲೀಸ್ ಆಗಿದೆ. ಥ್ರೀ ಡಿಯಲ್ಲಿ ರಿಲೀಸ್ ಆದ ಈ ಅವತಾರ್ ಸಿನಿಮಾ ಬಿಡುಗಡೆಯಾದ ಮೂರೇ ದಿನದಲ್ಲಿ ಬರೋಬ್ಬರಿ 30.5 ಮಿಲಿಯನ್ ಕಲೆಕ್ಷನ್ ಮಾಡಿದೆ. ಅಂದರೆ ಇದನ್ನ ಭಾರತೀಯ ರುಪಾಯಿ ಮೌಲ್ಯಕ್ಕೆ ಹೋಲಿಸಿದರೆ ಸರಿ ಸುಮಾರು ಇನ್ನೂರೈವತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗ್ತಿದೆ. ಭಾರತದಲ್ಲಿ ಶುಕ್ರವಾರ 2.2 ಕೊಟಿ, ಶನಿವಾರ 1.85 ಕೋಟಿ ಮತ್ತು ಭಾನುವಾರ 1.60 ಕೋಟಿ ಒಟ್ಟು ಈ ಮೂರು ದಿನಗಳಲ್ಲಿ 5.65 ಕೋಟಿ ಕಲೆಕ್ಷನ್ ಮಾಡಿದೆ.

ಎಲ್ಲಾ ದೇಶಗಳಲ್ಲಿ ಒಟ್ಟು ಸೇರಿ ಅವತಾರ್ ಸಿನಿಮಾ 250 ಕೋಟಿ ಕಲೆಕ್ಷನ್ ಮಾಡಿರೋದು ನಿಜಕ್ಕೂ ಕೂಡ ಅಚ್ಚರಿ ಅಂತ ಹೇಳ್ಬೋದು. ವಿಶೇಷ ಅಂದರೆ ಅವತಾರ್ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಪಾರ್ಟ್2 ಅವತಾರ್ ದ ವೇ ಆಫ್ ವಾಟರ್ ಸಿನಿಮಾದ ಒಂದು ದೃಶ್ಯವನ್ನ ಸೇರಿಸಲಾಗಿದೆ. ಈ ದೃಶ್ಯ ಕಂಡು ಸಿನಿ ಪ್ರಿಯರು ಕೂಡ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅವತಾರ್ ಪಾರ್ಟ್2 ದ ವೇ ಆಫ್ ವಾಟರ್ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಹುಟ್ಟಿದೆ. ಅವತಾರ್ ಸಿನಿಮಾದಲ್ಲಿ ಸ್ಯಾಮ್ ವರ್ಥಿಂಗ್ಟನ್, ಜ್ಯೋ ಸಾಲ್ದನ, ಸ್ಟೀಫನ್ ಲ್ಯಾಂಗ್, ಮೈಕಲ್ ಸೇರಿದಂತೆ ಹಾಲಿವುಡ್ ನ ಖ್ಯಾತ ಕಲಾವಿದರು ತಾರಾಗಣದಲ್ಲಿ ಇದ್ದಾರೆ.