13 ವರ್ಷದ ವಿದ್ಯಾರ್ಥಿಗೆ ದೇಶ ವಿದೇಶಗಳಲ್ಲಿ 15000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ನೋಡಿ ಒಮ್ಮೆ

ಏಳನೇ ತರಗತಿ ವಿಧ್ಯಾರ್ಥಿನಿಗೇ ಬರೋಬ್ಬರಿ ಹದಿನೈದು ಸಾವಿರಕ್ಕಿಂತ ಹೆಚ್ಚು ಶಿಷ್ಯರಿದ್ದಾರೆ..! ಜಗತ್ತಿನಲ್ಲಿ ಎಷ್ಟೋ ವಿಸ್ಮಯಕಾರಿ ಸಂಗತಿಗಳು ನಡೆಯುತ್ತಲೇ ಇರುತ್ತವೆ. ಅದೂ ವಿಜ್ಞಾನ, ತಂತ್ರಜ್ಞಾನ, ಅರಣ್ಯ ಜೀವಿಗಳು ಅಥವಾ ಮನುಷ್ಯನೇ ಏನಾದರೊಂದು ಪವಾಡ ಪುರುಷನಾಗಿ ಕೆಲಸ ಮಾಡಿರುತ್ತಾನೆ. ನಮ್ಮ ಸುತ್ತ ಮುತ್ತ ಅಂತಹ ಅನೇಕ ವಿಚಾರ ಸಂಗತಿಗಳು ನಡೆಯುತ್ತಲೇ ಇರುತ್ತವೆ. ಅದದಂತೆ ನಮ್ಮ ಹೆಮ್ಮೆಯ ಭಾರತ ದೇಶದ ಪುಟಾಣಿ ಕೇವಲ ಹದಿಮೂರು ವರ್ಷದ ಪೋರಿ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಇವಳ ಸಾಧನಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೌದು ರಾಜಸ್ತಾನದ ಅಜ್ಮೀರಿನ ಗೌರವ್ ಮಹೇಶ್ವರಿ ಮತ್ತು ಮೀನಾಕ್ಷಿ ಎಂಬ ದಂಪತಿಯ ಪುತ್ರಿ ಗೌರಿ ಮಹೇಶ್ವರಿ ಕ್ಯಾಲಿಗ್ರಫಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಗೌರಿ ಮಹೇಶ್ವರಿ ಅವರ ವಿಶೇಷ ಸಾಧನೆ ಅಂದರೆ ಕೇವಲ ರಾಮ ಎಂಬ ಎರಡಕ್ಷರದಿಂದ ಶ್ರೀ ರಾಮನ ಚಿತ್ರ ಬಿಡಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ್ದಾರೆ.

ಇವರ ಪ್ರತಿಭೆಗೆ ಮೆಚ್ಚಿ ಪ್ರಧಾನಿ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಗೌರವ ಸಲ್ಲಿಸಲಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರರೇ ಗೌರಿ ಅವರ ಫೋಟೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿ ಅವರ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಗೌರಿ ಮಹೆಶ್ವರಿ ಅವರಿಗೆ ಬಾಲ್ಯದಿಂದಾನೂ ಕಲರ್ ಪೆನ್ನುಗಳು ಅಂದರೆ ತುಂಬಾ ಇಷ್ಟವಂತೆ. ಆ ಬಣ್ಣದ ಪೆನ್ನುಗಳಿಂದ ಭಿನ್ನ ಭಿನ್ನವಾಗಿ ಅಕ್ಷರ ವಿನ್ಯಾಸಗೊಳಿಸುವ ಅಭಿರುಚಿ ಬೆಳೆಸಿಕೊಂಡಂರಂತೆ. ಹೀಗಾಗಿ ಕ್ಯಾಲಿಗ್ರಫಿಯ ಬಗ್ಗೆ ಮಾಹಿತಿ ಪಡೆದುಕೊಂಡರಂತೆ. ತನ್ನ ತಾಯಿಯನ್ನು ಕರೆದುಕೊಂಡು ಗೌರಿ ಮಹೇಶ್ವರಿ ಅವರು ಕ್ಯಾಲಿಗ್ರಫಿ ತರಗತಿ ಸೇರಲು ಹೋದಾಗ ಇವರ ವಯಸ್ಸು ನೋಡಿ ತರಗತಿಗೆ ಸೇರಿಸಿಕೊಳ್ಳಲಿಲ್ಲವಂತೆ. ತದನಂತರ ಗೌರಿ ಅವರ ತಾಯಿ ಮೀನಾಕ್ಷಿ ಅವರು ಅಲ್ಲಿನ ಶಿಕ್ಷಕರನ್ನ ಮನವಿ ಮಾಡಿಕೊಂಡ ಬಳಿಕ ತರಗತಿಗೆ ಸೇರಿಸಿಕೊಂಡರಂತೆ.

ಇದೀಗ ಗೌರಿ ಮಹೇಶ್ವರಿ ಕ್ಯಾರಿಗ್ರಫಿಯಲ್ಲಿ ವಿಶ್ವ ದಾಖಲೆಯನ್ನೇ ಮಾಡಿದ್ದಾರೆ. ಇಂದು ಗೌರಿ ಮಹೇಶ್ವರಿ ಅವರ ಬಳಿ ಕ್ಯಾಲಿಗ್ರಫಿ ಕಲಿಯಲು ಅಮೆರಿಕಾ, ಜರ್ಮನಿ, ಯುಕೆ, ಲಂಡನ್, ನೈಜೀರಿಯಾ ಅಂತಹ ದೇಶ ವಿದೇಶಗಳಿಂದ ಬರೋಬ್ಬರಿ ಒಂದೂವರೆ ಸಾವಿರಕ್ಕೂ ಅಧಿಕ ವಿಧ್ಯಾರ್ಥಿಗಳು ಕ್ಲಾಸ್ ಪಡೆಯುತ್ತಾರಂತೆ. ಗೌರಿ ಮಹೇಶ್ವರಿ ಅವರು ರಾಮ ಮಂದಿರ ನಿರ್ಮಾಣದ ಸಮಯದಲ್ಲಿ ಗೌರಿ ನಾಮವನ್ನು ಕ್ಯಾಲಿಗ್ರಫಿ ವಿನ್ಯಾಸದಲ್ಲಿ ರಚಿಸುವ ಮೂಲಕ ರಾಮನ ಚಿತ್ರವನ್ನು ಬಿಡಿಸಿದ್ದರು. ಇವರ ಪ್ರತಿಭೆಗೆ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರದ ಮಾಜಿ ಸಿ.ಎಂ.ವಸುಂಧರಾ ರಾಜೇ ಅರಸ್ ಸೇರಿದಂತೆ ಅನೇಕ ಗಣ್ಯರು ಗೌರಿ ಮಹೇಶ್ವರಿ ಅವರಿಗೆ ಅವರ ಪೋಷಕರಿಗೆ ಅಭಿನಂದನೆ ತಿಳಿಸಿದ್ದರು.