12ನೇ ದಿನ ಗಳಿಕೆಯಲ್ಲಿ ದಕ್ಷಿಣ ಭಾರತದ ಎರಡು ದೊಡ್ಡ ಚಿತ್ರಗಳನ್ನೇ ಹಿಂದಿಕ್ಕಿದ ಕಾಂತಾರ ಚಿತ್ರ

ಕಾಲಿವುಡ್, ಟಾಲಿವುಡ್ ಸ್ಟಾರ್ ನಟರ ಸಿನಿಮಾಗಳ ಕಲೆಕ್ಷನನ್ನ ಕೂಡ ಸೈಡ್ ಲೈನ್ ಮಾಡಿದೆ ನಮ್ಮ ಕನ್ನಡದ ಕಾಂತಾರ ಸಿನಿಮಾ. ಹೌದು ಕಳೆದ ಸೆಪ್ಟೆಂಬರ್ 30ರಂದು ರಾಜ್ಯಾದ್ಯಂತ ರಿಲೀಸ್ ಆದ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಂಡಿದೆ. ಕಾಂತಾರ ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರಡಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಸರಿ ಸುಮಾರು ಹತ್ತರಿಂದ ಹನ್ನೆರಡು ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಕಾಂತಾರ ಸಿನಿಮಾ ಕನ್ನಡ ಭಾಷೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಇದುವರೆಗೆ ಬರೋಬ್ಬರಿ 70 ಕೋಟಿ ಗಳಿಕೆ ಮಾಡಿದೆ. ಇದು ಒಟ್ಟಾರೆಯಾಗಿ ಗಳಿಕೆ ಮಾಡಿರೋ ಲೆಕ್ಕಾಚಾರ.

ಆದರೆ ಇದರ ನಡುವೆ ಕಾಂತಾರ ಸಿನಿಮಾವೊಂದು ಅಚ್ಚರಿಯ ಸಾಧನೆಯೊಂದನ್ನ ಮಾಡಿದೆ. ಅದೇನಪ್ಪಾ ಅಂದರೆ ಕಾಂತಾರ ಸಿನಿಮಾ ರಿಲೀಸ್ ಆದ ದಿನವೇ ತಮಿಳಿನ ಮಲ್ಟಿ ಸ್ಟಾರ್ಸ್ ನಟಿಸಿರೋ ಪ್ಯಾನ್ ಇಂಡಿಯಾ ಪೊನ್ನಿಯನ್ ಸೆಲ್ವನ್ ಭಾಗ1 ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಿದೆ. ಈ ಚಿತ್ರವನ್ನ ಖ್ಯಾತ ನಿರ್ದೇಶಕ ಮಣಿರತ್ನಂ ಅವರು ನಿರ್ದೇಶನ ಮಾಡಿದ್ದಾರೆ. ಹಾಗಾಗಿ ನಿರೀಕ್ಷೆಯಂತೆ ಎಲ್ಲೆಡೆ ಓಪನಿಂಗ್ ಪಡೆದುಕೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದರೆ ಈ ತಮಿಳಿನ ಸಿನಿಮಾ ಮಂಗಳವಾರದ ಕಲೆಕ್ಷನ್ ನಲ್ಲಿ ನಮ್ಮ ಕನ್ನಡದ ಕಾಂತಾರ ಸಿನಿಮಾದ ಕಲೆಕ್ಷನ್ ಕ್ಕಿಂತ ಕಡಿಮೆ ಗಳಿಕೆ ಮಾಡಿದೆ.

ಕಾಂತಾರ ಸಿನಿಮಾ 12ನೇ ದಿನ ದೇಶಾದ್ಯಂತ ಐದು ಕೋಟಿ ಗಳಿಕೆ ಮಾಡಿದೆ. ವರ್ಲ್ಡ್ ವೈಡ್ 80 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಆದರೆ ಇದೇ ತಮಿಳಿನ ಪೊನ್ನಿಯನ್ ಸೆಲ್ವನ್ ಸಿನಿಮಾ ನಾಲ್ಕು ಕೋಟಿ ಕಲೆಕ್ಷನ್ ಮಾಡಿದೆ. ಅದೇ ರೀತಿಯಾಗಿ ತೆಲುಗಿನಲ್ಲಿ ರಿಲೀಸ್ ಆಗಿರೋ ಮೆಗಾಸ್ಟಾರ್ ಚಿರಂಜೀವಿ, ಸಲ್ಮಾನ್ ಖಾನ್ ನಟಿಸಿರೋ ಗಾಡ್ ಫಾದರ್ ಸಿನಿಮಾ ಕಾಂತಾರ ಸಿನಿಮಾದ ಮುಂದೆ ಕೇವಲ ಎರಡು ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ನಮ್ಮ ಕನ್ನಡದ ಕಾಂತಾರ ಸಿನಿಮಾ ಪರಭಾಷಾ ಸಿನಿಮಾಗಿಂತ ಹೆಚ್ಚು ಗಳಿಕೆ ಮಾಡಿದೆ. ಇನ್ನು ಶುಕ್ರವಾರದಿಂದ ಕಾಂತಾರ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಹಿಂದಿ ಭಾಷೆಯಲ್ಲಿ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ಆಗ ನೂರಲ್ಲ ಮುನ್ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಲಿದೆ ಕಾಂತಾರ ಸಿನಿಮಾ ಅಂತಿದೆ ಗಾಂಧಿನಗರ.

Leave a Reply

%d bloggers like this: