ನೂರಾರು ವರ್ಷಗಳ ‘ ಮೈಸೂರು ಸ್ಯಾಂಡಲ್’ ಸೋಪ್ ಇತಿಹಾಸದ ಬಗ್ಗೆ ನಿಮಗೆ ಗೊತ್ತಾ? ಕನ್ನಡಿಗರು ಹೆಮ್ಮೆ ಪಡುವ ಇತಿಹಾಸವಿದೆ

ಮಹಾತ್ಮ ಗಾಂಧೀಜಿ ಅವರು ಭಾರತದ ಪ್ರಜೆಗಳು ನಮ್ಮ ದೇಶದಲ್ಲೇ ಉತ್ಪಾದಿಸಿದ,ತಯಾರಿಸಿದ ಸ್ವದೇಶಿ ವಸ್ತುಗಳನ್ನೆ ಉಪಯೋಗಿಸಬೇಕು ಎಂಬ ಕನಸಿನಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಸ್ವದೇಶಿ ವಸ್ತುಗಳ ಬಳಕೆಗೆ ಹೆಚ್ಚು ಪ್ರಾಶಸ್ತ್ಯ ಪ್ರಾಧಾನ್ಯತೆ ನೀಡಬೇಕು ಎಂಬುದರ ಬಗ್ಗೆ ತಮ್ಮ ಭಾಷಣಗಳಲ್ಲಿ ಆಗಾಗ ತಿಳಿಸುತ್ತಿರುತ್ತಾರೆ.ಅಂತೆಯೇ ನಮ್ಮ ದೇಶದಲ್ಲಿ ಅಪಾರವಾದ ಸಂಪತ್ತು ಇತ್ತು.ಈ ಸಂಪಧ್ಭರಿತ ರಾಷ್ಟ್ರ ಕಂಡ ವಿದೇಶಿಯರು ನಮ್ಮ ದೇಶದಲ್ಲಿದ್ದ ಅನೇಕ ಸಂಪತ್ತುಗಳನ್ನು ಲೂಟಿ ಮಾಡಿದರು.ಆದರೆ ನಮ್ಮ ದೇಶದಲ್ಲಿರುವ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ.ಅಂತಹ ಅಮೂಲ್ಯವಾದ ಬೆಲೆ ಕೋಟಿ ಕೋಟಿ ಬಾಳುವಂತಹ ನೈಸರ್ಗಿಕ ಸಂಪತ್ತಾದ ಶ್ರೀ ಗಂಧದ ಮರಗಳು ಪ್ರಮುಖವಾದವು.ಇಂದು ಸಾಂಸ್ಕೃತಿಕ ನಗರಿ ಮೈಸೂರು ಅಂದಾಕ್ಷಣ ಮೈಸೂರಿನ ಅರಮನೆ ಹೇಗೆ ನೆನಪಾಗುತ್ತದೆಯೇ ಹಾಗೆ ಮೈಸೂರ್ ಸ್ಯಾಂಡಲ್ ಸೌಪ್ ಕೂಡ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಜನಪ್ರಿಯತೆ ಗಳಿಸಿದೆ.

ಶ್ರೀಗಂಧದಿಂದ ತಯಾರಲ್ಪಡುವ ನಮ್ಮ ಈ ಮೈಸೂರ್ ಸ್ಯಾಂಡಲ್ ಸೋಪಿನ ಘಮಲು ವಿದೇಶಗಳಲ್ಲಿಯೂ ಕೂಡ ಪರಿಮಳ ಬೀರಿದೆ.ನಾವು ಇಂದು ವಿದೇಶಿ ಕಂಪನಿಗಳ ಎಷ್ಟೇ ಸೋಪುಗಳನ್ನು ಬಳಸಿದರು ಕೂಡ ಮೈಸೂರ್ ಸ್ಯಾಂಡಲ್ ಸೋಪಿನ ಗುಣಮಟ್ಟವನ್ನು ಯಾವ ಫಾರೀನ್ ಕಂಪನಿ ಸೌಂದರ್ಯ ವರ್ಧಕಗಳು ಕೂಡ ನೀಡುವುದಿಲ್ಲ.ಅಂತಹ ದೇಶ ವಿದೇಶಗಳಲ್ಲಿ ಹೆಸರು ವಾಸಿಯಾಗಿರುವ ಈ ಮೈಸೂರ್ ಸ್ಯಾಂಡಲ್ ಸೋಪಿನ ಬಗ್ಗೆ ಒಂದಷ್ಟು ವಿಚಾರ ಹಿನ್ನೆಲೆ ತಿಳಿಯುವುದಾದರೆ.

1916 ರ ಕಾಲಾವಧಿಯಲ್ಲಿ ಅಂದಿನ ಮೈಸೂರು ರಾಜ್ಯದ ಮಹಾ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಜ್ಯ ಪ್ರವಾಸ ಮಾಡುತ್ತಿರುವಾಗ ಅರಣ್ಯ ಇಲಾಖೆಯು ರಸ್ತೆ ಬದಿಯಲ್ಲಿ ಸಂಗ್ರಹಿಸಿಟ್ಟಿದ್ದ ಈ ಶ್ರೀ ಗಂಧದ ಮರಗಳ ಕಟ್ಟಿಗೆಗಳನ್ನು ನೋಡುತ್ತಾರೆ.ಈ ಶ್ರೀ ಗಂಧದ ಮರಗಳ ವಿವಿಧ ಪ್ರಯೋಜನದ ಬಗ್ಗೆ ಮಾಹಿತಿ ಇದ್ದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರು ಈ ಶ್ರೀ ಗಂಧದ ಮರಗಳ ಕಟ್ಟಿಗೆಗಳಿಂದ ಎಣ್ಣೆಯನ್ನು ತೆಗೆಯಲು ಆಲೋಚನೆ ಮಾಡುತ್ತಾರೆ.ಈ ಬಗ್ಗೆ ತಮ್ಮ ಸಂಸ್ಥಾನದ ದಿವಾನರಾಗಿದ್ದಂತಹ ಸರ್.ಎಂ.ವಿಶ್ವೇಶ್ವರಯ್ಯ ಅವರ ಬಳಿ ಚರ್ಚಿಸಿ ಒಂದು ಯೋಜನೆಯನ್ನು ರೂಪಿಸುತ್ತಾರೆ.

ಹೀಗೆ ಮೈಸೂರು ರಾಜ್ಯಕ್ಕೆ ಬಂದ ವಿದೇಶಿಗ ಉದ್ಯಮಿಯೊಬ್ಬರು ರಾಜರಿಗೆ ಸಾಬೂನುವೊಂದನ್ನು ಕಾಣಿಕೆಯಾಗಿ ನೀಡುತ್ತಾರೆ.ಈ ಸಾಬೂನೂ ಶ್ರೀಗಂಧದ ಪರಿಮಳ ಘಮಲು ಬೀರುತ್ತದೆ.ಅರೇ ನಮ್ಮ ಶ್ರೀಗಂಧದ ಮರದಿಂದ ಇವರು ಇಷ್ಟರ ಮಟ್ಟಿಗೆ ಆಲೋಚಿಸಿ ಸಾಬೂನನ್ನು ತಯಾರಿಸಿದ್ದಾರಲ್ಲ.ನಾವು ಕೂಡ ಏಕೆ ಈ ರೀತಿಯಾಗಿ ಸಾಬೂನನ್ನು ತಯಾರು ಮಾಡಬಾರದು ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರ್ ಸ್ಯಾಂಡಲ್ ಸೋಪ್ ಅನ್ನು ಪ್ರಾರಂಭಿಸುತ್ತಾರೆ.ಮೈಸೂರಿನ ಅಶೋಕಪುರಂ ನಲ್ಲಿ ಸರಿ ಸುಮಾರು 32 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಶ್ರೀ ಗಂಧದ ಎಣ್ಣೆ ತಯಾರಿಕಾ ಕಾರ್ಖಾನೆ ಘಟಕವನ್ನು ಸ್ಥಾಪಿಸುತ್ತಾರೆ.

ಮೈಸೂರ್ ಸ್ಯಾಂಡಲ್ ಸಂಸ್ಥೆಯಲ್ಲಿ ಕೇವಲ ಸೋಪ್ ಮಾತ್ರ ಅಲ್ಲದೆ ಗಂಧದ ಕಡ್ಡಿ,ಸೋಪ್ ಪೌಡರ್,ಆಯಿಲ್ ವಿವಿಧ ರೀತಿಯ ಸೌಂಧರ್ಯ ವರ್ಧಕ ವಸ್ತುಗಳನ್ನು ತಯಾರಿಸಲಾಗುತ್ತದೆ.ಮೈಸೂರ್ ಸ್ಯಾಂಡಲ್ ಕಾರ್ಖಾನೆಗೆ ಶೇಕಡಾ ನಲವತ್ತು ರಷ್ಟು ಲಾಭ ಕೇವಲ ಮೈಸೂರ್ ಸ್ಯಾಂಡಲ್ ಸೋಪಿನಿಂದಲೇ ಹರಿದು ಬರುತ್ತದೆ.ಬರೋಬ್ಬರಿ ಶತಮಾನದ ಇತಿಹಾಸ ಹೊಂದಿರುವ ಮೈಸೂರ್ ಸ್ಯಾಂಡಲ್ ಸೋಪ್ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಕೂಡ ಭಾರಿ ಬೇಡಿಕೆ ಹೊಂದಿದೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: