10 ಪಟ್ಟು ಕೆಜಿಎಫ್ ಗೆ ಸಮ ಎಂದು ಬಿಲ್ಡಪ್ ಕೊಟ್ಟ ‘ಪುಷ್ಪ’ ಸಿನೆಮಾ ಗತಿ ಮೊದಲ ದಿನವೇ ಏನಾಗಿದೆ ನೋಡಿ

ಪುಷ್ಪ ಅಂದ್ರೆ ಪ್ಲವರ್ ಅಲ್ಲ ಫೈರ್ ಎಂದು ಚಿತ್ರ ಮಂದಿರಗಳಿಗೆ ಲಗ್ಗೆ ಇಟ್ಟ ಪುಷ್ಪ ಸಿನಿಮಾ ಮಕಾಡೆ ಮಲಗಿದೆ..! ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದ ಟಾಲಿವುಡ್ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಟ ಚಿತ್ರ ಇಂದು ಡಿಸೆಂಬರ್ 17 ರಂದು ದೇಶಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಟೀಸರ್, ಟ್ರೇಲರ್, ಹಾಡುಗಳ ಮೂಲಕ ಸಿನಿ ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆ ಹುಟ್ಟು ಹಾಕಿದ್ದ ಪುಷ್ಪ ಚಿತ್ರಕ್ಕೆ ಇದೀಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲು ಅರ್ಜುನ್ ಅಭಿಮಾನಿಗಳಗಾಗಿಯೇ ಪುಷ್ಪ ಚಿತ್ರ ಮಾಡಿದಂತಾಗಿದೆ. ಪುಷ್ಪ ಸಿನಿಮಾದ ಕಥೆಯ ಎಳೆ ಮಹತ್ವದ್ದಾಗಿದ್ದರು ಕೂಡ ಅದನ್ನ ನಿರೂಪಣೆ ಮಾಡುವ ಶೈಲಿಯಲ್ಲಿ ನಿರ್ದೇಶಕ ಸುಕುಮಾರ್ ಅವರು ಎಡವಿದ್ದಾರೆ. ಇದಕ್ಕೂ ಮುನ್ನ ಪುಷ್ಟ ಚಿತ್ರ ಅಮೆರಿಕಾದಲ್ಲಿ ಪ್ರೀಮಿಯರ್ ಶೋ ಪ್ರದರ್ಶನ ಆಗಿದೆ. ಈ ಪ್ರೀಮಿಯರ್ ಶೋ ನೋಡಿದವರು ಚಿತ್ರ ಆವ್ರೇಜ್ ಎಂದಿದ್ದಾರೆ.

ಪುಷ್ಪ ಸಿನಿಮಾದಲ್ಲಿ ಕಥಾ ನಾಯಕ ನಟ ಅಲ್ಲು ಅರ್ಜುನ್ ಅವರನ್ನು ಮಾತ್ರ ಹೈಲೈಟ್ ಮಾಡಲಾಗಿದ್ದು, ಚಿತ್ರಕಥೆ ಆಯಾಸವಾಗಿ ಸಾಗುತ್ತದೆಯಂತೆ. ಫಸ್ಟ್ ಆಫ್ ಓಕೆ ಅನಿಸಿದರು ಕೂಡ ಸೆಕೆಂಡ್ ಆಫ್ ನಲ್ಲಿ ನೋಡುಗರಿಗೆ ಬೋರ್ ಅನಿಸಿದರು ಸಹ ಅಚ್ಚರಿಯಿಲ್ಲ. ಇನ್ನು ಪುಷ್ಪ ಚಿತ್ರ ಬಿಡುಗಡೆಗೂ ಮುನ್ನ ಸಾಂಗ್ ಗಳ ಮೂಲಕವೇ ಭಾರಿ ಸದ್ದು ಮಾಡಿತ್ತು‌. ಆದರೆ ಸಿನಿಮಾದ ಹಿನ್ನೆಲೆ ಸಂಗೀತ ಸಿನಿ ಪ್ರೇಕ್ಷಕರಿಗೆ ತೃಪ್ತಿ ಪಡಿಸುವಲ್ಲಿ ಸೋತಿದೆ. ದೇವಿ ಶ್ರೀ ಪ್ರಸಾದ್ ಅವರ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ನಲ್ಲಿ ನೆಗೆಟೀವ್ ರೆಸ್ಪಾನ್ಸ್ ಕೇಳಿ ಬಂದಿದೆ. ಇನ್ನು ಕ್ಲೈಮ್ಯಾಕ್ಸ್ ಬಗ್ಗೆ ಪ್ರೇಕ್ಷಕರಿಗೆ ಅಸಮಾಧಾನ ಮೂಡಿಸಿದೆ. ಒಟ್ಟಾರೆಯಾಗಿ ಪುಷ್ಪ ಸಿನಿಮಾ ನೋಡಿದ ಪ್ರೇಕ್ಷಕರು ಫೈವ್ ಮಾರ್ಕ್ಸ್ ಗೆ ಕೇವಲ ಎರಡೂವರೆ ಮಾರ್ಕ್ಸ್ ಮಾತ್ರ ನೀಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಿತ್ರದಲ್ಲಿ ನಟ ಅಲ್ಲು ಅರ್ಜುನ್ , ರಶ್ಮಿಕಾ ಮಂದಣ್ಣ, ಧನಂಜಯ್, ಸುನೀಲ್ ಪಾತ್ರಗಳು ಗಮನ ಸೆಳೆದಿದ್ದವು ಆದರೆ ಅಲ್ಲು ಅರ್ಜುನ್ ನಟನೆ ಮಾತ್ರ ಪುಷ್ಪ ಸಿನಿಮಾದಲ್ಲಿ ಹೈಪ್ ಆಗಿದ್ದು ಉಳಿದ ಕಲಾವಿದರ ನಟನೆಯ ಬಗ್ಗೆಯೂ ಕೂಡ ಯಾವುದೇ ರೀತಿಯ ರೆಸ್ಪಾನ್ಸ್ ಪಾಸಿಟೀವ್ ಆಗಿ ಕೇಳಿ ಬಂದಿಲ್ಲ. ಇನ್ನು ಒಟ್ಟಾರೆಯಾಗಿ ಪುಷ್ಪ ಸಿನಿಮಾ ನೋಡಿದವರು ಒನ್ ಮ್ಯಾನ್ ಶೋ ಆಗಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದು ನಿರ್ದೇಶಕ ಸುಕುಮಾರ್ ಅವರ ನಿರ್ದೇಶನ ಇಲ್ಲಿ ಸೋತಿದೆ ಎಂದು ಹೇಳುತ್ತಿದ್ದಾರೆ.ಇನ್ನು ಪುಪ್ಪ ಚಿತ್ರ ಕನ್ನಡದ ಕೆಜಿಎಫ್ ಚಿತ್ರಗಳಂತಹ ಹತ್ತು ಸಿನಿಮಾಗಳು ಸಮ ಎಂದು ಬಿಲ್ಡಪ್ ಕೊಟ್ಟಿದ್ದ ಉಪ್ಪೇನಾ ಸಿನಿಮಾದ ನಿರ್ದೇಶಕ ಬುಚ್ಚಿಬಾಬು ಅವರ ಹೇಳಿಕೆಗೆ ಇದೀಗ ಟ್ರೋಲ್ ಪೇಜಸ್ ಗಳು ಸಖತ್ ಟ್ರೋಲ್ ಮಾಡುತ್ತಿವೆ.

Leave a Reply

%d bloggers like this: