ಕೇವಲ 10 ನಿಮಿಷದಲ್ಲಿ ಬರೋಬ್ಬರಿ 850 ಕೋಟಿ ಸಂಪಾದಿಸಿದ ಭಾರತದ ಉದ್ಯಮಿ

ಜಸ್ಟ್ ಹತ್ತೇ ನಿಮಿಷದಲ್ಲಿ ಐನೂರು ಕೋಟಿಗೂ ಅಧಿಕ ಆದಾಯ ಗಳಿಸಿದ ಭಾರತದ ಖ್ಯಾತ ಶೇರು ಹೂಡಿಕೆದಾರ..! ಕಳೆದ ವಾರದಿಂದ ಶೇರು ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಕಂಡಿದೆ.ಕೆಲವು ಹೂಡಿಕೆದಾರರು ದಿಢೀರ್ ನೂರಾರು ಕೋಟಿ ಆದಾಯ ಗಳಿಸಿದರೆ,ಇನ್ನೂ ಕೆಲವರು ನೂರಾರು ಕೋಟಿ.ರೂ.ಗಳ ನಷ್ಟ ಹೊಂದಿದ್ದಾರೆ. ಕಳೆದ ಗುರುವಾರದಂದು ಶೇರು ಮಾರುಕಟ್ಟೆಯಲ್ಲಿ ಭಾರತದ ಖ್ಯಾತ ಹೂಡಿಕೆದಾರರಾದ ರಾಕೇಶ್ ಜುಂಜುನ್ ವಾಲಾ ಮತ್ತು ಅವರ ಪತ್ನಿ ರೇಖಾ ಜುಂಜುವಾಲಾ ಇಬ್ಬರು ಕೂಡ ಅನೇಕ ಕಂಪನಿಗಳಲ್ಲಿ ಶೇರುಗಳನ್ನು ಹೊಂದಿದ್ದಾರೆ. ಅದರಂತೆ ರೇಖಾ ಜುಂಜುವಾಲಾ ಅವರು ಟೈಟಾನ್ ಕಂಪನಿಯಲ್ಲಿ ಶೇಕಡಾ 4.81 ರಷ್ಟು ಪಾಲನ್ನು ಹೊಂದಿದ್ದಾರೆ. ರಾಕೇಶ್ ಜುಂಜುವಾಲಾ ಅವರನ್ನು ಭಾರತದ ವಾರೆನ್ ಬಫೆಟ್ ಅಂತಾನೇ ಕರೆಯುತ್ತಾರೆ.

ಅಷ್ಟರ ಮಟ್ಟಿಗೆ ಶೇರು ಮಾರುಕಟ್ಟೆಯ ಆಳ-ಅರಿವನ್ನು ಹೊಂದಿದ್ದು,ಚಾಕಚಕ್ಯತೆ ಕೌಶಲ್ಯಗಳನ್ನು ಹೊಂದಿರುತ್ತಾರೆ.ಕಳೆದ ಗುರುವಾರ ಷೇರು ಪೇಟೆಯ ಸೂಚ್ಯಂಕದಲ್ಲಿ ಟೈಟಾನ್ ಕಂಪನಿಯು ತನ್ನ ಷೇರಿನ ಮೌಲ್ಯದಲ್ಲಿ 2,234 ಅಂಕಕ್ಕೆ ಏರಿತ್ತು.ಇದರಿಂದ ಟೈಟಾನ್ ಕಂಪನಿಗೆ ಬರೋಬ್ಬರಿ 17,770 ಕೋಟಿ.ರೂ.ಆದಾಯ ಬಂದಿದೆ.ರಾಕೇಶ್ ಜುಂಜುವಾಲಾ ಪತ್ನಿ ರೇಖಾ ಜುಂಜುವಾಲಾ ಅವರು ಟೈಟಾನ್ ಕಂಪನಿಯಲ್ಲಿ ಶೇ.4.81 ರಷ್ಟು ಶೇರು ಹೊಂದಿರುವುದರಿಂದ ಟೈಟಾನ್ ಕಂಪನಿ ಗಳಿಸಿದ ಲಾಭದಲ್ಲಿ ಜುಂಜುವಾಲಾ ಅವರಿಗೆ ಬರೋಬ್ಬರಿ 854 ಕೋಟಿ.ರೂ.ಆದಾಯ ಸಂದಿದೆ.ಇದು ನಡೆದದ್ದು ಕೇವಲ ಹತ್ತೇ ಹತ್ತು ನಿಮಿಷದಲ್ಲಿ ರಾಕೇಶ್ ಜುಂಜುವಾಲಾ ಅವರ ಆಸ್ತಿಯಲ್ಲಿ ಭಾರಿ ಏರಿಕೆ ಕಂಡು ಇವರ ಶೇರಿನ ಮೌಲ್ಯ ಕಂಪನಿಯಲ್ಲಿ ಬರೋಬ್ಬರಿ ಹತ್ತು ಸಾವಿರ ಕೋಟಿಗಿಂತ ಅಧಿಕವಾಗಿದೆ.

ಇದರ ಜೊತೆಗೆ ಐಐಎಫ್ ಸಿ ಮತ್ತು ವೆಲ್ತ್-ಹರೂನ್ ಇಂಡಿಯಾ ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯನ್ನ ಬಿಡುಗಡೆಗೊಳಿಸಿದ್ದು ಇದರಲ್ಲಿ ಹೌದು ರಿಲಾಯನ್ಸ್ ಸಂಸ್ಥಾಪಕ ಮುಕೇಶ್ ಮೊದಲ ಸ್ಥಾನ ಪಡೆದಿದ್ದು,ಅದಾನಿ ಗ್ರೂಫ್ ಆಫ್ ಕಂಪನಿಯ ಚೇರ್ಮನ್ ಆಗಿರುವ ಅದಾನಿ ಅವರು ಎರಡನೇ ಸ್ಥಾನ ಪಡೆದಿದ್ದಾರೆ.ಮೂರನೇ ಸ್ಥಾನದಲ್ಲಿ ಶಿವನಾಡರ್,ನಾಲ್ಕನೇಯ ಸ್ಥಾನ ಎಸ್.ಪಿ.ಇಂದುಜಾ,ಐದನೇ ಸ್ಥಾನ ಎಲ್.ಎನ್.ಮಿತ್ತಲ್,ಆರನೇ ಸ್ಥಾನ ಸೈರಸ್ ಎಸ್.ಪೂನಾವಾಲ,ಏಳನೇಯದಾಗಿ ರಾಧಾಕೃ಼ಷ್ಣ ರಮಾನಿ ಎಂಟನೇ ಸ್ಥಾನದಲ್ಲಿ ವಿನೋದ್ ಶಾಂತಿಲಾಲ್ ಅದಾನಿ,ಒಂಭತ್ತನೇ ಸ್ಥಾನದಲ್ಲಿ ಆದಿತ್ಯಾ ಬಿರ್ಲಾ ಸಮೂಹದ ಕುಮಾರ ಮಂಗಲಂ ಬಿರ್ಲಾ,ಜಯ್ ಚೌಧುರಿ ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಹತ್ತನೇ ಸ್ಥಾನ ಪಡೆದಿದ್ದಾರೆ.

Leave a Reply

%d bloggers like this: