10 ಕೋಟಿ ಜಾಹಿರಾತು ಆಫರ್ ಅನ್ನು ಬೇಡ ಎಂದ ದಕ್ಷಿಣ ಭಾರತದ ನಟ, ಅಷ್ಟಕ್ಕೂ ಅದು ಯಾವ ಜಾಹಿರಾತು ಗೊತ್ತೇ

ಸಮಾಜಕ್ಕೆ ಯುವ ಜನಾಂಗಕ್ಕೆ ಹಾನಿಕಾರಕ ಜಾಹೀರಾತುಗಳಲ್ಲಿ ನಾನು ಕಾಣಿಸಿಕೊಳ್ಳುವುದಿಲ್ಲ ಎಂದು ಬರೋಬ್ಬರಿ ಹತ್ತು ಕೋಟಿ ಬಿಗ್ ಆಫರ್ ತಿರಸ್ಕಾರಿಸಿದ್ದಾರಂತೆ ಟಾಲಿವುಡ್ ಸ್ಟಾರ್ ನಟ ಯೂಥ್ ಐಕಾನ್ ಅಲ್ಲು ಅರ್ಜುನ್. ಹೌದು ಇತ್ತೀಚೆಗೆ ಸಿನಿಮಾ ಸ್ಟಾರ್ ನಟ ನಟಿಯರು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಇದರಲ್ಲಿ ಯಾವುದೇ ರೀತಿ ತಪ್ಪೇನಿಲ್ಲ. ಆದರೆ ಕೆಲವು ಈ ಧೂಮಪಾನ, ಮಧ್ಯಪಾನ, ಗುಟ್ಕಾ ಅಂತಹ ಹಾನಿಕಾರಕ ಯುವಕರನ್ನ ಕೆಟ್ಟ ದಾರಿಗೆ ಎಳೆಯುವಂತಹ ಪ್ರಾಡಕ್ಟ್ ಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಾಗ ಆ ಸ್ಟಾರ್ ನಟ ನಟಿಯರ ಅಭಿಮಾನಿಗಳು ಕೂಡ ಆ ಪ್ರಾಡಕ್ಟ್ ಗಳನ್ನ ಬಳಸುವಂತಹ ಸನ್ನಿವೇಶ ಹೆಚ್ಚಾಗಿ ಇರುತ್ತದೆ. ಇದೇ ರೀತಿ ಬಾಲಿವುಡ್ ಕೆಲವು ಸ್ಟಾರ್ ನಟರು ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾಗಳಲ್ಲಿ ಛೀಮಾರಿ ಹಾಕಿಸಿಕೊಂಡು ಕೊನೆಗೆ ಕ್ಷಮೆ ಕೂಡ ಕೇಳಿದ್ದರು.

ಕೆಲವು ತಿಂಗಳುಗಳ ಹಿಂದೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಗುಟ್ಕಾ ಕಂಪನಿಯೊಂದು ಕೋಟಿ ಕೋಟಿ ಆಫರ್ ನೀಡಿ ತಮ್ಮ ಪ್ರಾಡಕ್ಟ್ ನಲ್ಲಿ ಕಾಣಿಸಿಕೊಳ್ಳಿ ಎಂದು ಆಫರ್ ನೀಡಿದಾಗ ಅವರು ಯಾವುದೇ ಮುಲಾಜಿಲ್ಲದೇ ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಜಾಹಿರಾತಿನಲ್ಲಿ ನಾನು ಕಾಣಿಸಿಕೊಳ್ಳುವುದಿಲ್ಲ ಎಂದು ತಿರಸ್ಕಾರ ಮಾಡುತ್ತಾರೆ. ಅದೇ ರೀತಿಯಾಗಿ ಟಾಲಿವುಡ್ ಸ್ಟಾರ್ ನಟ ಯೂಥ್ ಐಕಾನ್ ಎನಿಸಿಕೊಳ್ಳುವ ನಟ ಅಲ್ಲು ಅರ್ಜುನ್ ಅವರು ಕೂಡ ತಂಬಾಕು ಗುಟ್ಕಾ ಕಂಪನಿ ಆಫರ್ ಅನ್ನ ತಿರಸ್ಕಾರ ಮಾಡಿದ್ದಾರೆ‌. ಹೌದು ನಟ ಅಲ್ಲು ಅರ್ಜುನ್ ಅವರು ಪುಷ್ಪಾ ಚಿತ್ರದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ನಟರಾಗಿ ದೇಶಾದ್ಯಂತ ಅಪಾರ ಜನಪ್ರಿಯತೆ ಹೊಂದಿದ್ದಾರೆ. ಈ ಜನಪ್ರಿಯತೆಯನ್ನ ಬಳಸಿಕೊಳ್ಳಲು ಅನೇಕ ಈ ಗುಟ್ಕಾ, ಪಾನ್ ಮಸಾಲಾ, ಡ್ರಿಂಕ್ಸ್ ಸೇರಿದಂತೆ ಅನೇಕ ಕಂಪನಿಗಳು ಸ್ಟಾರ್ ನಟರ ಹಿಂದೆ ಬಿದ್ದಿವೆ.

ಅದರಂತೆ ನಟ ಅಲ್ಲು ಅರ್ಜುನ್ ಅವರ ಜನಪ್ರಿಯತೆ ಕಂಡು ಪಾನ್ ಮಸಾಲಾ ಗುಟ್ಕಾ ಕಂಪನಿಯೊಂದು ಅಲ್ಲು ಅರ್ಜುನ್ ಅವರಿಗೆ ಹತ್ತು ಕೋಟಿ ಆಫರ್ ನೀಡಿ ತಮ್ಮ ಪ್ರಾಡಕ್ಟ್ ಪ್ರಚಾರದಲ್ಲಿ ಭಾಗವಹಿಸಬೇಕಾಗಿ ಕೇಳಿದ್ದಾರೆ. ಅದೂ ಕೂಡ ಒಂದು ದಿನ ಶೂಟಿಂಗ್ ಇರುವ ಈ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಕ್ಕೆ ಬರೋಬ್ಬರಿ ಹತ್ತು ಕೋಟಿ ನೀಡುತ್ತೇವೆ ಎಂದು ಹೇಳಿದಾಗ ಅಲ್ಲು ಅರ್ಜುನ್ ಅವರು ಕಣ್ಮುಚ್ಚಿಕೊಂಡು ಒಪ್ಪಿಕೊಳ್ಳಬಹುದಿತ್ತು. ಆದರೆ ನಟ ಅಲ್ಲು ಅರ್ಜುನ್ ಅವರು ಕಂಪನಿಗೆ ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಪ್ರಾಡಕ್ಟ್ ಗಳಲ್ಲಿ ನಾನು ಕಾಣಿಸಿಕೊಳ್ಳವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರಂತೆ. ಇದರಿಂದ ಅಲ್ಲು ಅರ್ಜುನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ವ್ಯಕ್ತಿತ್ವಕ್ಕೆ ಮತ್ತು ಅವರಲ್ಲಿ ಇರುವ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: