1.5 ಕೋಟಿ ಬೆಲೆಯ ಪವರ್ ಫುಲ್ ಕಾರು ಖರೀದಿಸಿದ ದಕ್ಷಿಣ ಭಾರತದ ನಟ

ದುಬಾರಿ ಬೆಲೆಯ ಐಷಾರಾಮಿ ಕಾರೊಂದನ್ನ ಖರೀದಿ ಮಾಡಿ ಮಾಲಿವುಡ್ ನಲ್ಲಿ ಸಖತ್ ಶೈನ್ ಅಗಿದ್ದಾರೆ ಈ ಖ್ಯಾತ ನಟ ಕಮ್ ನಿರ್ಮಾಪಕ. ಹೌದು ಕಾರ್ ಕ್ರೇಜ಼್ ಅನ್ನೋದು ಇತ್ತೀಚೆಗೆ ಸಿನಿಮಾ ಸೆಲೆಬ್ರಿಟಿಗಳಿಗೆ ಸರ್ವೇ ಸಾಮಾನ್ಯ ಆಗಿ ಬಿಟ್ಟಿದೆ. ಯಾರ್ ನೋಡಿದ್ರು ಕೂಡ ದುಬಾರಿ ಐಷಾರಾಮಿ ಕಾರ್ ಖರೀದಿ ಮಾಡ್ತಿದ್ದಾರೆ. ಅದ್ರಂತೆ ಇದೀಗ ಹೈ ಫೈ ಕಾರ್ ಖರೀದಿ ಮಾಡಿ ಸಖತ್ ಸೌಂಡ್ ಮಾಡ್ತಿರೋದು ಅಂದ್ರೆ ಮಾಲಿವುಡ್ ಖ್ಯಾತ ನಟ ಮತ್ತು ನಿರ್ಮಾಪಕ ಆಗಿರೋ ಆಸಿಫ್ ಅಲಿ. ಆಸಿಫ್ ಅಲಿ ಅವರು 2009 ರಲ್ಲಿ ಶ್ಯಾಮ್ ಪ್ರಸಾದ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ರಿತು ಸಿನಿಮಾದ ಮೂಲಕ ಮಲೆಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಜೊತೆಗೆ ಎರಡು ಸಿನಿಮಾಗಳನ್ನ ನಿರ್ಮಾಣ ಮಾಡಿ ಯಶಸ್ವಿ ಆಗಿದ್ದಾರೆ. ಹಾಗೆಯೇ ಇಂದು ಮಾಲಿವುಡ್ ನಲ್ಲಿ ವಿಭಿನ್ನ ಪಾತ್ರಗಳ ಮೂಲಕ ಸಿನಿ ಪ್ರೇಕ್ಷಕರನ್ನ ಮನರಂಜಿಸಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

ಇದೀಗ ನಟ ಕಮ್ ನಿರ್ಮಾಪಕ ಆಸೀಫ್ ಅಲಿ ಅವರು ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿ ಕಾರನ್ನ ಖರೀದಿ ಮಾಡಿ ಸುದ್ದಿ ಆಗಿದ್ದಾರೆ. ಇತ್ತೀಚೆಗೆ ಆಸೀಫ್ ಅಲಿ ಅವರು ಶೂಟಿಂಗ್ ಬಿಡುವಿನ ವೇಳೆ ತಮ್ಮ ಕುಟುಂಬದ ಜೊತೆ ಇದೇ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಕಾರಿನಲ್ಲಿ ಪ್ರವಾಸ ಹೋಗಿದ್ದಾರೆ. ಈ ಕಾರಿನ ವಿಶೇಷತೆಗಳನ್ನ ತಿಳಿಯೋದಾದ್ರೆ ಎಲ್ಇಡಿ ಹೆಡ್ ಲೈಟ್ ಯುನಿಟ್ ಇದ್ದು, ಬಂಪರ್ ಕೆಳಭಾಗದಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಫಾಗ್ ಲ್ಯಾಂಪ್ ಹೊಂದಿದೆ. ಇಪ್ಪತ್ತು ಇಂಚಿನ ಅಲಾಯ್ ವ್ಹೀಲ್ ನೀಡಿದ್ದು, ಈ ಕಾರು ಹೊರ ಭಾಗದಲ್ಲಿ ಆರು ಕ್ಯಾಮೆರಾ ಮತ್ತು ಸುತ್ತಲೂ ಸೆನ್ಸಾರ್ ಗಳನ್ನೊಳಗೊಂಡಿದೆ. ಐಆರ್ವಿಎಂ ಇರೋ ಆಕ್ಟೀವ್ ಲೇನ್ ಅಸಿಸ್ಟ್ ಅಂಡ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅಗಿ ಕಾರ್ಯ ನಿರ್ವಹಿಸುತ್ತವೆ. ಆಸೀಫ್ ಅಲಿ ಅವರು ಖರೀದಿ ಮಾಡಿರೋ ಈ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿ ಕಾರು ವಿಶಾಲವಾದ ಕ್ಯಾಬಿನ್ ಗಳನ್ನೊಂದಿದೆ. 14 ಯುಎಸ್ಬಿ ಅಂಡ್ ಚಾರ್ಜಿಂಗ್ ಸಾಕೆಟ್ ಗಳನ್ನ ನೀಡಲಾಗಿದೆ.

ಇನ್ನು ಇದರಲ್ಲಿ ಸ್ಟೀಯರಿಂಗ್ ವ್ಹೀಲ್ ಎಲೆಕ್ಟ್ರಿಕ್ ಅಡ್ಜಸ್ಟಬಲ್ ಇದ್ದು, ಆಟೋ ಫೀಚರ್ ಹೊಂದಿದೆ. ಈ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿಯಲ್ಲಿ 10 ಇಂಚಿನ ಇನ್ಪೋಟೈನ್ಮೆಂಟ್ ಸಿಸ್ಟಂ ಇದ್ದು, ಉತ್ತಮ ಟಚ್ ರೆಸ್ಪಾನ್ಸ್ ಇದೆ. ಇನ್ನಿತರ ವಿಶೇಷತೆಗಳನ್ನ ತಿಳಿಯೋದಾದ್ರೆ ಇದರಲ್ಲಿ 2.0 ಲೀಟರ್ ನಾಲ್ಕು ಸಿಲಿಂಡರ್ ಟರ್ಬೋ ಪೆಟ್ರೋಲ್ ಇಂಜಿನ್ ಇದ್ದು,300 ಬಿ.ಎಚ್.ಪಿ ಪವರ್ ಅಂಡ್ 400 ಎನ್ಎಮ್ ಟಾರ್ಕ್ ಅನ್ನ ಉತ್ಪಾದನೆ ಮಾಡುತ್ತದೆ. ಇಂಜಿನ್ ಗೆ ಎಂಟು ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನ ಅಳವಡಿಸಲಾಗಿದೆ. ಈ ಕಾರು ಕೇವಲ ಏಳು ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನ ಪಡೆದುಕೊಳ್ಳುತ್ತದೆಯಂತೆ. ಇದರ ಮೌಲ್ಯ ಬರೋಬ್ಬರಿ ಒಂದು ಕೋಟಿ ಐವತ್ತು ಲಕ್ಷ ಎಂದು ತಿಳಿದು ಬಂದಿದೆ. ನಟ ಆಸೀಫ್ ಅಲಿ ಅವರ ಬಳಿ ಈಗಾಗಲೇ ಅನೇಕ ಐಷಾರಾಮಿ ಕಾರ್ ಗಳಿವೆಯಂತೆ. ಇದೀಗ ಈ ಕಾರ್ ಗ್ಯಾರೇಜ್ ಗೆ ಈ ಒಂದು ನೂತನ ಲ್ಯಾಂಡ್ ರೋವರ್ ಡಿಫೆಂಡರ್ ಕಾರ್ ಕೂಡ ಸೇರ್ಪಡೆಗೊಂಡಿದೆ.

Leave a Reply

%d bloggers like this: