1.27 ಕೋಟಿ ಬೆಲೆ ಬಾಳುವ ಶರ್ಟ್ ಧರಿಸುತ್ತಿದ್ದ ವ್ಯಕ್ತಿ, ಕೊನೆಗೂ ಈತನ ಅಂತ್ಯ ಹೇಗಾಯ್ತು ಗೊತ್ತಾ

ಕೋಟೆ ಕಟ್ಟಿ ಮೆರೆದವರು,ಮೀಸೆ ತಿರುವಿ ಮೆರೆದ ಎಲ್ಲಾರೂ ಕೂಡ ಮಣ್ಣಾದರು ಎಂಬ ಮಾತಿನಂತೆ ಇಲ್ಲೊಬ್ಬ ವ್ಯಕ್ತಿ ಕೋಟಿ ಬೆಲೆಯ ಚಿನ್ನದ ಆಭರಣ ಧರಿಸಿ ವೈಭವದಿಂದ ಬದುಕುತ್ತಿದ್ದ ವ್ಯಕ್ತಿ ಬೀದಿ ಹೆಣವಾಗಿದ್ದು ನಿಜಕ್ಕೂ ಕೂಡ ಇತರರಿಗೆ ಪಾಠವಾಗಬೇಕು.ಹೌದು ಯಾರ ಬದುಕು ಹೇಗೆ ಯಾವ ರೀತಿಯಲ್ಲಿರುತ್ತದೆ ಎಂಬುದನ್ನ ಅರಿಯಲು ಸಾಧ್ಯವಿಲ್ಲ.ಈಗ ಇದ್ದವರು ಕ್ಷಣಾರ್ಧದಲ್ಲಿ ಇರುವುದಿಲ್ಲ.ಬದುಕಿದ್ದಾಗ ನಾವು ಯಾವ ರೀತಿಯ ವ್ಯಕ್ತಿತ್ವ ಹೊಂದಿರುತ್ತೇವೆ,ಯಾವ ರೀತಿಯ ಜೀವನ ಶೈಲಿ ನಡೆಸುತ್ತಿರುತ್ತೇವೆ ಎಂಬುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದಲ್ಲಿ ಅವಸಾನ ಕಾಲದಲ್ಲಿ ನಮ್ಮ ಅಂತ್ಯ ದುರಂತಮಯವಾಗಿರುತ್ತದೆ ಎಂಬುದಕ್ಕೆ ಈ ಶ್ರೀಮಂತ ವ್ಯಕ್ತಿ ಉತ್ತಮ ನಿದರ್ಶನವಾಗಿದ್ದಾನೆ.ಬರೋಬ್ಬರ ಕೆ.ಜಿ.ಗಟ್ಟಲೇ ಆಭರಣ,ಕೋಟಿಗೂ ಹೆಚ್ಚು ಬೆಲೆಯ ಚಿನ್ನದ ಎಳೆಯಿಂದ ತಯಾರಿಸಿದ ಉಡುಪನ್ನ ಧರಿಸುತ್ತಿದ್ದಂತಹ ಮುಂಬೈನ ದತ್ತಾತ್ರೇಯ ಎಂಬ ಶ್ರೀಮಂತ ಉದ್ಯಮಿಗೆ ಅವರ ವ್ಯಾಮೋಹವೇ ಅವರ ಜೀವವನ್ನು ಬಲಿ ಪಡೆದುಕೊಂಡಿದೆ.

ಈ ವ್ಯಕ್ತಿ ತುಂಬಾ ಐಷಾರಾಮಿ ಆಡಂಬರದ ಬದುಕನ್ನ ನಡೆಸುತ್ತಿದ್ದರು.ದತ್ತಾತ್ರೇಯ ಅವರಿಗೆ ಹಣದ ವಿಚಾರದಲ್ಲಿ ಯಾವುದೇ ಕುಂದು ಕೊರತೆ ಇರಲಿಲ್ಲ.ಕೋಟ್ಯಾಧೀಶ್ವರರಾಗಿದ್ದ ಇವರಿಗೆ ಮೊದಲೇ ಬಂಗಾರದ ಮೇಲೆ ಅತಿಯಾದ ವ್ಯಾಮೋಹ ಇತ್ತು.ಈ ವ್ಯಾಮೋಹ ಅವರಿಗೆ 2012 ರಲ್ಲಿ ಇದ್ದಕಿದ್ದಂತೆ ವಿಚಿತ್ರವಾದ ಆಸೆಗೆ ಕಾರಣವಾಗುತ್ತದೆ. ಅದೇನಪ್ಪಾ ಅಂದರೆ ತಾನು ಚಿನ್ನದ ಉಡುಪನ್ನು ಧರಿಸಬೇಕು ಎಂಬುದು.ಅದರಂತೆ ಗೆಳೆಯನ ಚಿನ್ನದ ಮಳಿಗೆಗೆ ತೆರಳಿ ಚಿನ್ನದೆಳೆಯಿಂದ ತಯಾರಿಸಲಾದ ಚಿನ್ನದ ಬಟ್ಟೆಯನ್ನ ತಯಾರಿಸಿಕೊಂಡು ಧರಿಸಿಕೊಳ್ಳುತ್ತಾರೆ. ಸಾರ್ವಜನಿಕವಾಗಿ ಕೆ.ಜಿ.ಗಟ್ಟಲೇ ಒಡವೆ ಮತ್ತು ಈ ಚಿನ್ನದ ಬಟ್ಟೆ ಧರಿಸಿ ಓಡಾಡಿ ಭಾರಿ ಸುದ್ದಿ ಆಗುತ್ತಾರೆ.ಇವರ ಐಶ್ವರ್ಯ ಎಷ್ಟರ ಮಟ್ಟಿಗೆ ಕಣ್ಣು ಕುಕ್ಕುವಂತೆ ಇತ್ತೋ ಅಷ್ಟೇ ಅವರ ವ್ಯಕ್ತಿತ್ವದಲ್ಲಿಯೂ ಕೂಡ ಜನರ ಕೆಂಗಣ್ಣಿಗೆ ಗುರಿಯಾಗುವಂತಿತ್ತು.

ಈ ದತ್ತಾತ್ರೇಯ ಎಂಬ ವ್ಯಕ್ತಿ ಚಿಟ್ ಫಂಡ್ ವ್ಯವಹಾರ ನಡೆಸುತ್ತಿರುತ್ತಾನೆ.ಜನರು ತಮ್ಮ ಅವಧಿ ಮುಗಿದ ಬಳಿಕ ಹಣ ವಾಪಸ್ ಕೇಳಿದಾಗ ಅವರಿಗೆ ಆರಿಕೆಯ ಉತ್ತರ ನೀಡಿ ಸತಾಯಿಸುತ್ತಿದ್ದ ಎಂಬ ಆರೋಪ ಕೂಡ ಈ ವ್ಯಕ್ತಿ ಮೇಲೆ ಕೇಳಿ ಬಂದಿತ್ತು.ಇವನ ದ್ರೋಹ ಮೋಸಕ್ಕೇ ಒಂದು ದಿನ ದುರ್ಗತಿ ಒದಗಿಬಂದು ಬಿಟ್ಟಿತು.ಹೀಗೆ ಒಂದು ದಿನ ಹುಟ್ಟು ಹಬ್ಬದ ಕಾರಣ ತಿಳಿಸಿ ಯುವಕರ ಸಮೂಹವೊಂದು ಮನೆಗೆ ಕರೆಸಿಕೊಂಡು ಬಳಿಕ ದತ್ತಾತ್ರೇಯನನ್ನ ನಡುರಸ್ತೆಯಲ್ಲಿ ಭೀಕರವಾಗಿ ಕೊಲೆಗೈದಿತ್ತು.ಇದು ಮೆರೆದಿದ್ದ ವ್ಯಕ್ತಿಯ ದುರಂತ ಕಥೆ.ಅದಕ್ಕೆ ಹಿರಿಯರು ಹೇಳುವುದು ಮನುಷ್ಯ ತಗ್ಗಿ ಬಗ್ಗಿ ಬಾಳಬೇಕು ಎಂದು.